ADVERTISEMENT

ಮೇವು ಮಾರಾಟ; ರೈತರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2016, 10:40 IST
Last Updated 5 ಡಿಸೆಂಬರ್ 2016, 10:40 IST

ಚಾಮರಾಜನಗರ: ಜಿಲ್ಲೆಗೆ ಹೆಚ್ಚು ಮೇವಿನ ಆವಶ್ಯಕತೆ ಕಂಡುಬಂದಿದೆ. ಹಾಗಾಗಿ, ರೈತರು ಸರ್ಕಾರ ಸೂಚಿಸಿರುವ ದರಕ್ಕೆ ಹೆಚ್ಚುವರಿ ಮೇವು ಮಾರಾಟ ಮಾಡಲು ಅವಕಾಶವಿದೆ ಎಂದು ಪಶು ಪಾಲನಾ ಇಲಾಖೆ ತಿಳಿಸಿದೆ.

ಜಿಲ್ಲೆಯ 4 ತಾಲ್ಲೂಕನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಭತ್ತ, ರಾಗಿ, ಮುಸುಕಿನ ಜೋಳ, ಇತರೇ ಬೆಳೆಗಳಿಂದ ಬರುವ ಹೆಚ್ಚುವರಿ ಮೇವನ್ನು ಜಿಲ್ಲೆಯಲ್ಲಿ ಜಾನು ವಾರುಗಳಿಗೆ ಬಳಸಿಕೊಳ್ಳಬೇಕಿದೆ.

ನೀರಾವರಿ ಪ್ರದೇಶದ ರೈತರು ತಮ್ಮ ಜಮೀನಿನಲ್ಲಿ ಹೆಚ್ಚುವರಿ ಮೇವು ಬೆಳೆಸಿ ಸರ್ಕಾರದ ಸೂಚಿತ ದರಕ್ಕೆ ಮಾರಾಟ ಮಾಡಬಹುದಾಗಿದೆ. ಹೆಚ್ಚುವರಿ ಇರುವ ಮೇವನ್ನು ಸಹ ಮಾರಾಟ ಮಾಡ ಬಹುದು.

ಮೇವು ದಾಸ್ತಾನು ಇರುವ ರೈತರು ಆಯಾ ತಾಲ್ಲೂಕು ತಹಶೀಲ್ದಾರ್ ಅಥವಾ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಕೂಡಲೇ ಸಂಪರ್ಕಿಸಬಹುದು.

ಮೇವನ್ನು ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಮಾರಾಟ, ಸಾಗಾಣಿಕೆ ಮಾಡುವುದನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಬಾಲಸುಂದರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.