ADVERTISEMENT

ವಸತಿ ಯೋಜನೆ: 60 ಮನೆಗಳು ಮಂಜೂರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 10:50 IST
Last Updated 23 ಏಪ್ರಿಲ್ 2017, 10:50 IST

ಸಂತೇಮರಹಳ್ಳಿ: ಸಮೀಪದ ದೇಶವಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಮುಂಭಾಗ ಶುಕ್ರವಾರ ವಾರ್ಡ್‌ ಸಭೆ ನಡೆಯಿತು.ಸಂತೇಮರಹಳ್ಳಿ ಗ್ರಾಮ ಪಂಚಾ ಯಿತಿ ಕಾರ್ಯದರ್ಶಿ ನಾಗರಾಜಪ್ಪ ಮಾತ ನಾಡಿ, 2017-18ನೇ ಸಾಲಿಗೆ ಬಸವ ವಸತಿ ಯೋಜನೆಯಡಿ 34 ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆ ಯಡಿ 26 ಸೇರಿದಂತೆ 60 ಮನೆಗಳು ಮಂಜೂರಾಗಿವೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳ ಪಡುವ ಸಂತೇಮರಹಳ್ಳಿ, ತೆಳ್ಳನೂರು ಕಾವುದವಾಡಿ, ಬಸವಟ್ಟಿ, ಹೆಗ್ಗವಾಡಿ ಪುರ ಹಾಗೂ ದೇಶವಳ್ಳಿ ಗ್ರಾಮಗಳಲ್ಲಿ ವಾರ್ಡ್ ಸಭೆ ನಡೆಸಿ ಫಲಾನುಭವಿ ಗಳನ್ನು ಆಯ್ಕೆ ಮಾಡಲು ಅರ್ಜಿ ಸ್ವೀಕರಿಸಲಾಗಿದೆ.ಅರ್ಜಿ ಪರಿಶೀಲಿಸಿ ಸರ್ಕಾರಿ ಸೌಲಭ್ಯ ದಿಂದ ವಂಚಿತವಾಗಿರುವ ಫಲಾನುಭವಿ ಗಳನ್ನು ಗುರುತಿಸಿ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಮೆಟ್ಲಿಂಗ್ ರಸ್ತೆ, ಚರಂಡಿ, ರೈತರ ಜಮೀನುಗಳಲ್ಲಿ ತಡೆಗೋಡೆ, ಇಂಗು ಗುಂಡಿ, ರೈತರ ಜಮೀನಿಗೆ ಹೋಗುವ ರಸ್ತೆ ಹಾಗೂ ಕೆರೆ ಅಭಿವೃದ್ಧಿ, ಕೃಷಿ ಹೊಂಡ, ಬದು ವಿಸ್ತರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಕಾಮಗಾರಿ ಕೈಗೊಳ್ಳಲಾಗುತ್ತದೆ.

ADVERTISEMENT

ಪ್ರತಿಯೊಬ್ಬರು ಗ್ರಾಮ ಪಂಚಾಯಿತಿ ಯಲ್ಲಿ ಜಾಬ್‌ ಕಾರ್ಡ್ ನೋಂದಣಿ ಮಾಡಿಸಬೇಕು. ವರ್ಷದಲ್ಲಿ ಪ್ರತಿಯೊಬ್ಬ ರಿಗೂ 100 ದಿನಗಳ ಕಾಲ ಕೂಲಿ ನೀಡಲಾಗುತ್ತದೆ. ಈ ಯೋಜನೆಯನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳ ಬೇಕು ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಪಿ.ಪ್ರಕಾಶ್, ಡಿ.ಎಸ್. ಮಂಜುಳಾ, ಬಿಲ್‌ ಕಲೆಕ್ಟರ್ ವೆಂಕಟೇಶ್, ಲೆಕ್ಕಾಧಿಕಾರಿ ಮಹದೇವ ಸ್ವಾಮಿ, ಸಿದ್ದೇಶ್, ಜಬೀವುಲ್ಲಾ, ರಾಜೇಂದ್ರ, ವೆಂಕಟಯ್ಯ ಹಾಗೂ ನಿಂಗಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.