ADVERTISEMENT

ಸ್ವಾವಲಂಬಿ ಜೀವನಕ್ಕೆ ಕೌಶಲ ತರಬೇತಿ ಅವಶ್ಯ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 8:11 IST
Last Updated 24 ಮಾರ್ಚ್ 2017, 8:11 IST

ಚಾಮರಾಜನಗರ: ‘ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಕೌಶಲ ಅಭಿವೃದ್ಧಿ ತರಬೇತಿಯು ಸಹಕಾರಿಯಾಗಿದೆ’ ಎಂದು ಲಯನ್ಸ್ ಸಂಸ್ಥೆಯ ವಲಯ ಅಧ್ಯಕ್ಷ ಬಿ.ಎಂ. ಪ್ರಭುಸ್ವಾಮಿ ಹೇಳಿದರು.

ನಗರದಲ್ಲಿ ಇತ್ತೀಚೆಗೆ ಲಯನ್ಸ್‌ ಸಂಸ್ಥೆ, ಜಮಖಂಡಿಯ ರೂಪಶ್ರೀ ಮಹಿಳಾ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಮಹಿಳೆಯರಿಗಾಗಿ ನಡೆದ ಉಚಿತ ಹೊಲಿಗೆ ಹಾಗೂ ಬ್ಯುಟಿಷಿಯನ್‌ ತರಬೇತಿ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

ಮಹಿಳೆಯರು ತರಬೇತಿ ಪಡೆದ ನಂತರ ಸ್ವಯಂ ಉದ್ಯೋಗ ಪ್ರಾರಂಭಿಸ ಬೇಕು. ಆಗ ಮಾತ್ರ ತರಬೇತಿ ಪಡೆದ ಉದ್ದೇಶ ಫಲಿಸುತ್ತದೆ. ಸಣ್ಣ ಬಂಡವಾಳ ದಿಂದ ಉದ್ಯೋಗ ಪ್ರಾರಂಭಿಸಬೇಕು. ಬ್ಯಾಂಕ್ ಮತ್ತು ವಿವಿಧ ಇಲಾಖೆಯಡಿ ದೊರೆಯುವ ಸಾಲ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಲಯನ್ಸ್ ಸಂಸ್ಥೆಯು 100 ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಹಲವು ಸೇವಾ  ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿದೆ ಎಂದ ಅವರು, ಮಹಿಳೆಯರು ಸ್ವ ಉದ್ಯೋಗ ಮಾಡುವ ಮೂಲಕ ಆರ್ಥಿಕ ವಾಗಿ ಸಬಲರಾಗಬೇಕು ಎಂದರು.

ಲಯನ್ಸ್ ಸಂಸ್ಥೆ ಅಧ್ಯಕ್ಷ ವಿಜಯ್‌ ಕುಮಾರ್ ಮಾತನಾಡಿ, ಬ್ಯುಟಿಷಿಯನ್‌ ಉದ್ಯೋಗ ಮಾಡಲು ಇಚ್ಛಿಸುವ ಮಹಿಳೆಯರಿಗೆ ಲಯನ್ಸ್ ಸಂಸ್ಥೆಯಿಂದ ನೆರವು ನೀಡಲಾಗುವುದು. ಮಹಿಳಾ ನಿರುದ್ಯೋಗಿಗಳ ಸಮಸ್ಯೆ ನಿವಾರಣೆ ಮಾಡುವುದೇ ಸಂಸ್ಥೆಯ ಗುರಿಯಾಗಿದೆ ಎಂದು ತಿಳಿಸಿದರು.

ತರಬೇತಿ ಶಿಬಿರಕ್ಕೆ ಕಟ್ಟಡವನ್ನು ಉಚಿತವಾಗಿ ನೀಡಿದ ಲಯನ್ಸ್ ಟ್ರಸ್ಟಿ ಮಲ್ಲಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಕಾರ್ಯದರ್ಶಿ ರಂಗಸ್ವಾಮಿ, ಖಜಾಂಚಿ ಚೇತನ್, ಡಾ.ಮಹೇಶ್, ಡಾ.ಶಶಿಧರ್, ವೃಷಭೇಂದ್ರ, ವೈ.ಪಿ. ರಾಜೇಂದ್ರ, ಪ್ರಕಾಶ್, ಶಿವಕುಮಾರ್, ಲೋಕೇಶ್ ಕುಮಾರ್ ಜೈನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.