ADVERTISEMENT

ಹದಗೆಟ್ಟ ರಸ್ತೆ, ಕಲುಷಿತ ನೀರು...

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 9:52 IST
Last Updated 3 ಜುಲೈ 2017, 9:52 IST

ಯಳಂದೂರು: ತಾಲ್ಲೂಕಿನ ಮದ್ದೂರು ಗ್ರಾಮದ ಉಪ್ಪಾರ ಹೊಸ ಬಡಾವಣೆಯಲ್ಲಿ ‘ನರೇಗಾ’ ಅಡಿ ನಿರ್ಮಿಸಿರುವ ರಸ್ತೆಗೆ ಮಣ್ಣು ಮಾತ್ರ ಸುರಿದು ಹಾಗೆಯೇ ಬಿಡಲಾಗಿದೆ. ಈ ಮಣ್ಣು ಮಳೆಗೆ ಸಿಲುಕಿ ಅಲ್ಲಲ್ಲಿ ನೀರು ನಿಂತು ನಡೆದಾಡಲು ಕಷ್ಟವಾಗಿದೆ...

ನಿಜ. ಈ ಬಡಾವಣೆ ಮೂಲಸೌಕರ್ಯಗಳಿಂದ ವಂಚಿತ­ವಾಗಿದೆ. ಇಲ್ಲಿ 30 ಕುಟುಂಬಗಳಿವೆ. ರಸ್ತೆ, ಚರಂಡಿ, ಕುಡಿಯುವ ನೀರಿನ ಸಮಸ್ಯೆ ಹೇಳತೀರದು. ಬಡಾವಣೆ ತಗ್ಗು ಪ್ರದೇಶದಲ್ಲಿ ಇದೆ. ಹಾಗಾಗಿ, ಮಳೆ ಸುರಿದರೆ ಸಂಪೂರ್ಣವಾಗಿ ನೀರಿನಿಂದ ಆವೃತವಾಗುತ್ತದೆ. ಚರಂಡಿ ನಿರ್ಮಿಸದ ಕಾರಣ ನೀರು ನಿಂತು ಮಾಲಿನ್ಯವಾಗಿದೆ.

ಈ ಹಿಂದೆ ಗ್ರಾಮ ಪಂಚಾಯಿತಿಯಿಂದ ‘ನರೇಗಾ’ ಅಡಿ 74 ಮೀಟರ್‌ ರಸ್ತೆಗೆ ₹ 2 ಲಕ್ಷ ಅನುದಾನ ನೀಡಲಾಗಿತ್ತು. ಆದರೆ, ರಸ್ತೆಗೆ ಮಣ್ಣು ಮಾತ್ರ ಹಾಕಿ ಕೈಬಿಡಲಾಗಿದೆ. ಕಾಮಗಾರಿ ಅಪೂರ್ಣ­ಗೊಂಡಿದ್ದರೂ ಬಿಲ್ ಮಾಡಲಾಗಿದೆ ಎಂಬುದು ಗ್ರಾಮದ ಪುಟ್ಟಸುಬ್ಬಯ್ಯ, ರಂಸ್ವಾಮಿ ಅವರ ದೂರು.

ADVERTISEMENT

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಡಿಒ ಪುಟ್ಟರಾಜು, ಮಳೆಯಿಂದಾಗಿ ಮಣ್ಣು ಕೊಚ್ಚಿಹೋಗಿದೆ. ಹಾಗಾಗಿ, ರೋಲರ್ ಮಾಡಲಾಗಿಲ್ಲ. ರಸ್ತೆ ಅಪೂರ್ಣಗೊಂಡ ಕಾರಣ ಮೆಟೀರಿಯಲ್ ಬಿಲ್ ತಡೆ ಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ರಸ್ತೆ ನಿರ್ಮಿಸಲು ಸೂಕ್ತ ಕ್ರಮ ವಹಿಸಲಾಗುವುದು’  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.