ADVERTISEMENT

ಉದುರುತ್ತಿರುವ ಛಾವಣಿ ಸಿಮೆಂಟ್‌: ಆತಂಕ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2015, 10:23 IST
Last Updated 31 ಆಗಸ್ಟ್ 2015, 10:23 IST
ಗೌರಿಬಿದನೂರು ತಾಲ್ಲೂಕು ಜಿ.ಬೊಮ್ಮಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ರೆಡ್ಡಿದ್ಯಾವರಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಗೊಂಡು ಛಾವಣಿ ಸಿಮೆಂಟ್ ಕಳಚಿ ಬಿದ್ದಿರುವುದು.
ಗೌರಿಬಿದನೂರು ತಾಲ್ಲೂಕು ಜಿ.ಬೊಮ್ಮಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ರೆಡ್ಡಿದ್ಯಾವರಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಗೊಂಡು ಛಾವಣಿ ಸಿಮೆಂಟ್ ಕಳಚಿ ಬಿದ್ದಿರುವುದು.   

ಗೌರಿಬಿದನೂರು: ತಾಲ್ಲೂಕಿನ ರೆಡ್ಡಿ ದ್ಯಾವರಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ ಶಿಥಿಲಗೊಂಡಿದೆ. ಛಾವಣಿಯಿಂದ ಸಿಮೆಂಟ್ ಉದುರುತ್ತಿದ್ದು, ಇಲ್ಲಿನ ಮಕ್ಕಳು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು ಭೀತಿಯಲ್ಲಿ ಕೆಲಸ ನಿರ್ವಹಿಸಬೇಕಾಗಿದೆ.

ತಾಲ್ಲೂಕಿನ ಜಿ.ಬೊಮ್ಮಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ರೆಡ್ಡಿದ್ಯಾವರಹಳ್ಳಿ ಗ್ರಾಮದಲ್ಲಿ ಸುಮಾರು ವರ್ಷಗಳ ಹಿಂದೆ ನಿರ್ಮಿಸಿರುವ ಅಂಗನವಾಡಿ ಕೇಂದ್ರ ಕಟ್ಟಡ ಕಳೆಪೆ ಗುಣಮಟ್ಟದಿಂದ ಕೂಡಿದೆ. ಮಳೆ ಬಂದರೆ  ಸೋರುತ್ತದೆ. ಅಲ್ಲದೇ ಛಾವಣೆಯಿಂದ ಸಿಮೆಂಟ್ ಚೂರುಗಳು ಆಗಾಗ್ಗೆ ಉದುರುತ್ತಿದ್ದು, ಮಕ್ಕಳು ಕುಳಿತುಕೊಳ್ಳಲು ಎದುರುತ್ತಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆ ತಿಳಿಸಿದರು.

ಕಳೆದ ಹತ್ತು ವರ್ಷಗಳಿಂದ ಇಂತಹ ಶಿಥಿಲ ಕಟ್ಟಡದಲ್ಲಿ 20 ಮಂದಿ ಮಕ್ಕಳಿಗೆ ಪಾಠ ಪ್ರವಚನ ಹೇಳುಕೊಡಬೇಕಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳಿಗೆ ದುರಸ್ತಿಗೊಳಿಸುವಂತೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ಅಳಲು ತೋಡಿಕೊಂಡರು.
ಸಂಬಂಧಪಟ್ಟ ಅಧಿಕಾರಿಗಳು ಅನಾವುತ ಸಂಭವಿಸುವುದಕ್ಕೂ ಮುಂಚೆ ಇತ್ತ ಗಮನ ಹರಿಸಿ ಎಂದು ಗ್ರಾಮ ಪಂಚಾಯತಿ ಸದಸ್ಯರಾದ ಗ್ರಾ.ಪಂ. ಮಂಜುಳಾ ಹಾಗೂ ಸೋಮಕ್ಕ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.