ADVERTISEMENT

ಗ್ರಾಮಸ್ಥರಿಂದ ಕಾರ್ಯಕರ್ತೆ ತರಾಟೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 11:28 IST
Last Updated 7 ಜುಲೈ 2017, 11:28 IST

ಗುಡಿಬಂಡೆ: ತಾಲ್ಲೂಕಿ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದಿನಾರಾಯಣಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಅವಧಿ ಮುಗಿದಿರುವ ಆಹಾರ ಧಾನ್ಯಗಳಿಂದ ಮಕ್ಕಳಿಗೆ ಅಡುಗೆ ಮಾಡುತ್ತಿರುವುದು ಗುರುವಾರ ಬೆಳಕಿಗೆ ಬಂದಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಅಂಗನವಾಡಿ ಕಾರ್ಯಕರ್ತೆಯನ್ನು ತರಾಟೆಗೆ ತೆಗೆದುಕೊಂಡು ಕೇಂದ್ರಕ್ಕೆ ಬೀಗ ಹಾಕಿದರು.

‘ಆದಿನಾರಾಯಣಹಳ್ಳಿಯಲ್ಲಿ 23 ಮಕ್ಕಳು ಮತ್ತು 7 ಗರ್ಭಿಣಿಯರು ಇದ್ದಾರೆ’ ಎಂದು ಕೇಂದ್ರದಲ್ಲಿ ನೋಂದಣಿಯಾಗಿದೆ. ಆದರೆ  ಕೇಂದ್ರಕ್ಕೆ ಬರುವುದು ಕೇವಲ 3 ಮಕ್ಕಳು ಮಾತ್ರ. ಉಳಿದಂತೆ ಗರ್ಭಿಣಿಯರಿಗೆ ಯಾವುದೇ ಆಹಾರ ವಿತರಿಸುತ್ತಿಲ್ಲ. 24 ಮಕ್ಕಳ ಮತ್ತು ಗರ್ಭಿಣಿಯರ ನಕಲಿ ಸಹಿ ಮಾಡಿ ಕಾರ್ಯಕರ್ತೆಯೇ ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ  ಗ್ರಾಮಸ್ಥರು ಆರೊಪಿಸಿದರು.

‘ಅಂಗನವಾಡಿ ಸಹಾಯಕಿ ಸರ್ಕಾರದಿಂದ ಏನು ಬರುತ್ತಿಲ್ಲ’ ಎಂದು ಹೇಳಿದ್ದು ಆಗ ಗ್ರಾಮಸ್ಥರು ಕೇಂದ್ರಕ್ಕೆ ಮುತ್ತಿಗೆ ಹಾಕಿ ಬೀಗ ತೆಗೆಸಿದರು. 2016  ಜನವರಿಯಲ್ಲಿ ನೀಡಿರುವ ಆಹಾರ ಧಾನ್ಯ ಶೇಖರಣೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸಹಾಯಕಿಯನ್ನು ಕೇಳಿದಾಗ 2 ಅಥವಾ 3 ತಿಂಗಳಿಗೆ ಒಂದು ಬಾರಿ ರೇಷನ್ ಬರುತ್ತದೆ. ಕೆಲವು ಸಲ ಅಂಗನವಾಡಿ ಕಾರ್ಯಕರ್ತೆ ನಮ್ಮ ಕೇಂದ್ರದಲ್ಲಿ ಇನ್ನೂ ರೇಷನ್ ಉಳಿದಿದೆ. ಬೇಡ ಎಂದು ವಾಪಸ್ ಕಳುಹಿಸುತ್ತಾರೆ’ ಎಂದು ತಿಳಿಸಿದರು.

ADVERTISEMENT

‘ಇಲಾಖೆಯಲ್ಲಿ ಮಾತ್ರ ಕೇಂದ್ರಕ್ಕೆ ಆಹಾರ ಧಾನ್ಯ ವಿತರಣೆಯಾಗಿರುವ ಬಗ್ಗೆ ದಾಖಲಾಗಿದೆ. ಈ ಬಗ್ಗೆ ತನಿಖೆಯಾಗ ಬೇಕು’ ಎಂದು  ಗ್ರಾಮಸ್ಥರು ಪಟ್ಟು ಹಿಡಿದರು.  ಸಿಡಿಪಿಒ ಕಚೇರಿಗೆ ಅಕ್ರಮದ ಬಗ್ಗೆ  ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ.

ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು. ಈ ವೇಳೆ ಅಂಗನವಾಡಿ ಕಾರ್ಯಕರ್ತೆ ಪೊಲೀಸರಿಗೆ ಕರೆ ಮಾಡಿ ‘ನನ್ನ ಮೇಲೆ ಹಲ್ಲೆ ನಡೆಯುತ್ತಿದೆ’ ಎಂದು ದೂರು ಹೇಳಿದರು.  ಸ್ಥಳಕ್ಕೆ ಬಂದ ಪಿಎಸ್ಐ ಪಾಪಣ್ಣ ಪರಿಸ್ಥಿತಿ ತಿಳಿಗೊಳಿಸಿದರು. ಗ್ರಾಮಸ್ಥರಾದ ದಿವಾಕರ್ ಮೂರ್ತಿ, ರಮೇಶ್, ನರಸಿಂಹರೆಡ್ಡಿ, ಮಧು, ನರೇಶ, ಅಶ್ವತ್ಥ, ರಮೇಶ್.ಆರ್.ಎನ್ ಅಶ್ವತ್ಥಮ್ಮ, ಸದಾಶಿವರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.