ADVERTISEMENT

ತ್ಯಾಜ್ಯ ತೆರವುಗೊಳಿಸಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 5:56 IST
Last Updated 14 ನವೆಂಬರ್ 2017, 5:56 IST

ಚಿಕ್ಕಬಳ್ಳಾಪುರದ ಗರ್ಲ್‌ ಸ್ಕೂಲ್‌ ರಸ್ತೆಯಲ್ಲಿರುವ ಪ್ರಾಥಮಿಕ ಶಾಲೆಯ ಬಳಿ ಸುರಿದ ತ್ಯಾಜ್ಯವನ್ನು ನಗರಸಭೆಯವರು ವಿಲೇವಾರಿ ಮಾಡಿಲ್ಲ. ಹೀಗಾಗಿ ತ್ಯಾಜ್ಯದ ರಾಶಿ ರಸ್ತೆ ಬದಿಯೇ ಕೊಳೆತು ಗಬ್ಬೆದ್ದು ನಾರುತ್ತಿದೆ. ಆಗಾಗ ಮಳೆ ಸುರಿದಾಗಲೆಲ್ಲ ಇಲ್ಲಿನ ತ್ಯಾಜ್ಯ ಚರಂಡಿ ಸೇರಿ ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಇದರಿಂದ ಸ್ಥಳೀಯರಿಗೆ ಸೊಳ್ಳೆ ಕಾಟ ವಿಪರೀತವಾಗಿದೆ. ಇನ್ನಾದರೂ ಸಬಂಧಪಟ್ಟವರು ಇತ್ತ ಗಮನ ಹರಿಸಲಿ.

ದೇವರಾಜ್‌, ಸ್ಥಳೀಯ ನಿವಾಸಿ ಚರಂಡಿ ಹೂಳು ತೆಗೆಸಿ ಚಿಕ್ಕಬಳ್ಳಾಪುರದ 20ನೇ ವಾರ್ಡ್‌ನಲ್ಲಿರುವ ಭಾರತಿ ನಗರದ ಶಾಂತಿನಿಕೇತನ ಪದವಿ ಪೂರ್ವ ಕಾಲೇಜಿನ ಮುಂಭಾಗದ ರಸ್ತೆಯಲ್ಲಿರುವ ಮೋರಿ ಕಳೆದ ಹಲವು ತಿಂಗಳಿನಿಂದ ಸಂಪೂರ್ಣವಾಗಿ ಹೂಳು ತುಂಬಿ ಮುಚ್ಚಿ ಹೋಗಿದೆ.

ಮಳೆ ಸುರಿದಾಗಲೆಲ್ಲ ಇಲ್ಲಿ ನೀರು ಮಡುಗಟ್ಟಿ ನಿಲ್ಲುತ್ತದೆ. ಜತೆಗೆ ರಸ್ತೆ ಮೇಲೆ ಹರಿದು ಸವಾರರಿಗೆ, ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತದೆ. ಇಲ್ಲಿ ವಿಪರೀತ ಗಿಡಗಂಟಿಗಳು ಬೆಳೆದಿರುವ ಕಾರಣ ಸೊಳ್ಳೆಗಳ ಕಾಟ ಮಿತಿ ಮೀರಿ ಸ್ಥಳೀಯರ ನಿದ್ದೆಗೆಡಿಸಿದೆ.
ರಾಜು, 20ನೇ ವಾರ್ಡ್‌ ನಿವಾಸಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.