ADVERTISEMENT

ದೇಶರಕ್ಷಣೆ ಎಲ್ಲರ ಹೊಣೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 9:49 IST
Last Updated 6 ಜುಲೈ 2017, 9:49 IST

ಶಿಡ್ಲಘಟ್ಟ: ‘ದೇಶರಕ್ಷಣೆ ನಮ್ಮೆಲ್ಲರ ಹೊಣೆ. ಇಂಡಿಯನ್ ನ್ಯಾಷನಲ್ ಆರ್ಮಿ ಅಥವಾ ಆಜಾದ್ ಹಿಂದ್ ಫೌಜ್ ಯೋಧರು ಎರಡನೇ ಮಹಾಯುದ್ಧದ ವೇಳೆ ಜಪಾನ್ ಸೇನೆ ಜೊತೆ ಸೇರಿ ಭಾರತವನ್ನು ಆಳುತ್ತಿದ್ದ ಬ್ರಿಟಿಷರ ವಿರುದ್ಧ ಹೋರಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಸ್ಥಾಪನೆಯಾದ ಸೇನೆ ಇದು’ ಎಂದು ಯಣ್ಣಂಗೂರಿನ ಯೋಧ ರವಿಕುಮಾರ್‌ ತಿಳಿಸಿದರು.

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆಯಿಂದ ನಡೆಸಿದ ಆಜಾದ್ ಹಿಂದ್ ಫೌಜ್ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಆಜಾದ್ ಹಿಂದ್ ಫೌಜ್ ಸ್ಥಾಪನೆ, ಈ ಸೇನೆ ಬೆಳವಣಿಯಲ್ಲಿ  ರಾಸ ಬಿಹಾರಿ ಘೋಷ್‌, ಸುಭಾಶ್‌ಚಂದ್ರ ಬೋಸ್, ಶಹಾನವಾಜ್, ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್, ಐ.ಎನ್.ಎ. ರಾಮರಾವ್‌ ಕಾರ್ಯಗಳ ಬಗ್ಗೆ ವಿವರಿಸಿದರು.

ADVERTISEMENT

ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ, ‘ದೇಶದ ಜನರ ಮನಸ್ಸಿನಲ್ಲಿ ಈ ಸೈನ್ಯ ಶಾಶ್ವತ ಸ್ಥಾನ ಪಡೆದಿದೆ’ ಎಂದರು. ಶಾಲೆ ಆವರಣದಲ್ಲಿ  ಯೋಧ ರವಿಕುಮಾರ್‌ ಅವರು ಹಲಸು ಮತ್ತು ನೇರಳೆ ಸಸಿ ನೆಟ್ಟರು.

ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಎಸ್‌ಡಿಎಂಸಿ ಸದಸ್ಯ ರಾದ ಮಂಜು ನಾಥ್‌, ಹನುಮಂತರೆಡ್ಡಿ, ರಾಮಚಂದ್ರ, ಮುಖ್ಯಶಿಕ್ಷಕಿ ವೆಂಕಟ ರತ್ನಮ್ಮ, ಶಿಕ್ಷಕ ಚಾಂದ್‌ಪಾಷಾ, ಗ್ರಾಮಸ್ಥರಾದ ನಡಿಪಿ ನಾಯಕನಹಳ್ಳಿ ರವಿ, ಆನಂದ್‌, ಅಶ್ವತ್ಥ ನಾರಾಯಣ್‌, ಎ.ಜಿ.ನರಸಿಂಹ ಮೂರ್ತಿ, ಮುನಿಯಪ್ಪ, ವೆಂಕಟಮ್ಮ, ನರಸಿಂಹ ಮೂರ್ತಿ, ರವಿಪ್ರಕಾಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.