ADVERTISEMENT

ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 9:33 IST
Last Updated 17 ನವೆಂಬರ್ 2017, 9:33 IST

ಚೇಳೂರು: ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರವಿಶಂಕರ್ ನೇತೃತ್ವದ ತಂಡ ದಾಳಿ ನಡೆಸಿದೆ. ಪಾತಪಾಳ್ಯದ 3, ಚಾಕವೇಲು ಗ್ರಾಮದ 3, ಪಾಳ್ಯಕೆರೆಯಲ್ಲಿ 1, ಬಿಳ್ಳೂರಲ್ಲಿ 4, ಚೇಳೂರಿನಲ್ಲಿ 7 ನಕಲಿ ವೈದ್ಯರ ಕ್ಲಿನಿಕ್‌ಗಳು ತಂಡಕ್ಕೆ ಪತ್ತೆಯಾಗಿವೆ. ದಾಳಿ ವೇಳೆ ವೈದ್ಯರು ಕ್ಲಿನಿಕ್‌ಗೆ ಬೀಗ ಜಡಿದು ಪರಾರಿಯಾಗಿದ್ದಾರೆ.

ಚೇಳೂರು ಗ್ರಾಮದಲ್ಲಿನ ರಕ್ತ ಪರೀಕ್ಷಾ ಕೇಂದ್ರವೂ ಅನಧಿಕೃತವಾಗಿದ್ದು ಕಂಡು ಬಂದಿದೆ. ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಶ್ರೀರಾಮುಲು ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈಚೆಗೆ ನಕಲಿ ವೈದ್ಯನೊಬ್ಬ ನೀಡಿದ್ದ ಚಿಕಿತ್ಸೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅರೋಗ್ಯಾಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸತ್ಯನಾರಾಯಣರೆಡ್ಡಿ, ಚೇಳೂರು ಆರೋಗ್ಯ ಅಧಿಕಾರಿ ಡಾ.ಸಿ.ಭರತ್, ಆರೋಗ್ಯ ನಿರೀಕ್ಷಕ ನಾರಾಯಣಸ್ವಾಮಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.