ADVERTISEMENT

ಮೋದಿ ವಿಷ್ಣುವಿನ 11ನೇ ಅವತಾರವೂ ಆಗಬಹುದು...

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 5:14 IST
Last Updated 16 ಜನವರಿ 2017, 5:14 IST
ಮೋದಿ ವಿಷ್ಣುವಿನ 11ನೇ ಅವತಾರವೂ ಆಗಬಹುದು...
ಮೋದಿ ವಿಷ್ಣುವಿನ 11ನೇ ಅವತಾರವೂ ಆಗಬಹುದು...   

ಗೌರಿಬಿದನೂರು: ‘ಪ್ರಶಸ್ತಿ ಪುರಸ್ಕಾರ ಗಳಿಂದ ಕೆಲವರಿಗೆ ಗೌರವ ಹೆಚ್ಚಾಗ ಬಹುದು, ಆದರೆ ಪ್ರಶಸ್ತಿ ಪುರಸ್ಕಾರಗಳಿಗೆ ಗೌರವ ತಂದುಕೊಟ್ಟ ವ್ಯಕ್ತಿ ಸಾಮಾಜಿಕ ಸಂತ ಜಲತಜ್ಞ ಪ್ರೊ.ಕೆ. ನಾರಾಯಣ ಸ್ವಾಮಿ’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಡಾ.ಎಚ್.ಎನ್. ಕಲಾ ಭವನದಲ್ಲಿ ಪ್ರೊ.ಕೆ. ನಾರಾಯಣಸ್ವಾಮಿ ಅಭಿನಂದನಾ ಸಮಿತಿ ಭಾನುವಾರ ಏರ್ಪಡಿಸಲಾಗಿದ್ದ ಕೆ. ನಾರಾಯಣ ಸ್ವಾಮಿ ಅವರಿಗೆ ಗೌರವಾರ್ಪಣೆ ಮತ್ತು ‘ಮೌನ ಸಾಧಕ’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾ ಡಿದರು.

‘ಕರ್ನಾಟಕದಲ್ಲಿ 70 ರ ದಶಕದಲ್ಲಿ ನಡೆದ ಪ್ರಗತಿಪರ ಹೋರಾಟಗಳಿಗೆ ನೈತಿಕ ಸ್ಫೂರ್ತಿ ನೀಡಿದ ವ್ಯಕ್ತಿತ್ವ ಕೆ. ನಾರಾಯಣಸ್ವಾಮಿ ಅವರದು. ಅವಿ ಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಂತರ್ಜಲ, ಪರಿಸರ, ಶೋಷಿತ ದಲಿತರ ಅಭಿವೃದ್ಧಿಗೆ ಶ್ರಮಿಸಿದರು’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆ ತೆಗೆದುಕೊ ಳ್ಳುವ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ. ಇವರ ಸರ್ವಾಧಿಕಾರಿ ಧೋರಣೆ ವಿರೋಧಿಸುವ ಸಮರ್ಥ ನಾಯಕರು ಇಲ್ಲದಂತಾಗಿದೆ. ಇಂಥ ಸಂದರ್ಭದಲ್ಲಿ ತೃತೀಯ ರಂಗದ ಶಕ್ತಿ ಪ್ರಬಲಗೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ನರೇಂದ್ರ ಮೋದಿ ವಿಷ್ಣುವಿನ 11ನೇ ಅವತಾರವಾಗಬಹುದು ಎನ್ನುವ ಆತಂಕ ಎದುರಾಗಿದೆ’ ಎಂದರು ಟೀಕಿಸಿದರು.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ವಿ.ಗೋಪಾಲಗೌಡ ಮಾತ ನಾಡಿ, ‘ಕನ್ನಡವೇ ಬಾರದ ತೆಲುಗು ಪ್ರಭಾವ ಇರುವ ಪ್ರದೇಶದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಬಂದ ಪ್ರೊ.ಕೆ. ನಾರಾಯಣಸ್ವಾಮಿ ನನ್ನ ಗುರುಗಳಾಗಿ ಕನ್ನಡ ಬೋಧನೆ ಮಾಡಿದ್ದರಿಂದ ಪದವಿ ಶಿಕ್ಷಣ ತೇರ್ಗಡೆಯಾಗಲು ಸಾಧ್ಯವಾ ಯಿತು’ ಎಂದರು. 

‘ಶ್ರೀಮಂತರು ಲಕ್ಷಾಂತರ ರೂಪಾ ಯಿ ಖರ್ಚು ಮಾಡಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬಹುದು. ಆದರೆ ಬಡವರ ಮಕ್ಕಳು ಎಲ್ಲಿ ಹೋಗಬೇಕು. ಪ್ರಜಾ ಪ್ರಭುತ್ವದಲ್ಲಿ ಸರ್ವರಿಗೂ ಸಮಾನ ಶಿಕ್ಷಣ ದೊರೆಯುಂತಾಗಬೇಕು ಇದರ ಬಗ್ಗೆ ಸರ್ಕಾರಗಳು ಚಿಂತಿಸಬೇಕಾಗಿದೆ’ ಎಂದರು.

ಅಭಿನಂದನೆ ಸ್ವೀಕರಿಸಿದ ಪ್ರೊ. ಕೆ.ನಾರಾಯಣಸ್ವಾಮಿ, ‘70ರ ದಶಕದಲ್ಲಿ ತಾವು ಕಂಡಂತ ಕನಸ್ಸುಗಳು ಈಡೇರಿಲ್ಲ. ಇಂದಿನ ಆರ್ಥಿಕ ನೀತಿಗಳು ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುತ್ತಿವೆ.  ದಲಿತ ಸಮುದಾಯ ಜಾಗೃತವಾಗಬೇಕಾಗಿದೆ’ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆ ಮುಖಂಡರು ಅಭಿಮಾನಿ ಗಳು  ಅಭಿನಂದನೆ ಸಲ್ಲಿಸಿದರು.

ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ ದರು. ನಿವೃತ್ತ ಅಧಿಕಾರಿ ಎನ್.ಬಾಬಣ್ಣ, ನಾಯಕ ಜನಾಂಗದ ಮುಖಂಡ ಆರ್.ಅಶೋಕ್ ಕುಮಾರ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ನಾಗರಾಜಪ್ಪ, ದಲಿತ ಮುಖಂಡ ವೆಂಕಟೇಶ್, ಪ್ರಾಧ್ಯಾಪಕ ಡಾ.ಕೆ.ಪಿ. ನಾರಾಯಣಪ್ಪ, ಸಾಹಿತಿ ಮ.ನಾ. ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಎಚ್.ವೇಣು ಗೋಪಾಲ್, ನಗರಗೆರೆ ರಮೇಶ್, ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.