ADVERTISEMENT

‘ಸಾಲಮನ್ನಾ; ಜೀವರಾಜ್‌ ಹೇಳಿಕೆಯಲ್ಲಿ ಹುರುಳಿಲ್ಲ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 7:23 IST
Last Updated 20 ಸೆಪ್ಟೆಂಬರ್ 2017, 7:23 IST

ಚಿಕ್ಕಮಗಳೂರು: ‘ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ಪೂರ್ಣ ಪಾವತಿಸಿದರೆ ಮಾತ್ರ ₹ 50 ಸಾವಿರ ಮನ್ನಾ ಆಗತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್‌.ಜೀವರಾಜ್‌ ಹೇಳಿರುವುದರಲ್ಲಿ ಹುರುಳಿಲ್ಲ’ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರರೂ ಆಗಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಎಂ.ಸಿ.ಶಿವಾನಂದಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

‘ರಾಜ್ಯ ಸರ್ಕಾರವು ರೈತರ ಸಾಲಮನ್ನಾ ಮಾಡಿರುವುದಕ್ಕೆ ಸಂಬಂಧಿಸಿದಂತೆ ಜೀವರಾಜ್‌ ಹೇಳಿಕೆ ಗೊಂದಲ ಮೂಡಿಸಿದೆ. ಸಾಲ ₹ 50 ಸಾವಿರಕ್ಕಿಂತ ಜಾಸ್ತಿ ಇದ್ದವರು, ಬಾಕಿ ಹಣ ಪಾವತಿಸಿದರೆ ಮಾತ್ರ ಮನ್ನಾ ಅನ್ವಯವಾಗುತ್ತದೆ ಎಂದು ಹೇಳಿರುವುದರಲ್ಲಿ ಹುರುಳಿಲ್ಲ’ ಎಂದು ಹೇಳಿದ್ದಾರೆ.

‘ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದಿದ್ದ ಸುಮಾರು 38 ಸಾವಿರ ರೈತರಿಗೆ ಸಾಲಮನ್ನಾದಿಂದ ಅನುಕೂಲವಾಗಿದೆ. ಸಕಾಲಕ್ಕೆ ಸಾಲ ಮರುಪಾವತಿ ಮಾಡದ ಸುಸ್ತಿದಾರರು ಡಿ.31ರೊಳಗೆ ಸಾಲದ ಅಸಲು ಮತ್ತುಬಡ್ಡಿಯನ್ನು ಪಾವತಿಸಿದರೆ ಅವರಿಗೂ ಸಾಲಮನ್ನಾ ಅನ್ವಯವಾಗುತ್ತದೆ’ ಎಂದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.