ADVERTISEMENT

₹70ಲಕ್ಷ ಮೌಲ್ಯದ ಆಸ್ತಿ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 5:53 IST
Last Updated 22 ಮಾರ್ಚ್ 2017, 5:53 IST

ಚಿಕ್ಕಬಳ್ಳಾಪುರ: ನಗರದ ನೂತನ ಜಿಲ್ಲಾ ಆಸ್ಪತ್ರೆ ಕಾಂಪೌಂಡ್ ಪಕ್ಕದಲ್ಲಿಯೇ ಒತ್ತುವರಿಗೆ ಒಳಗಾಗಿದ್ದ ನಗರಸಭೆಯ ಸ್ವತ್ತನ್ನು ಮಂಗಳವಾರ ಒತ್ತುವರಿ ತೆರವುಗೊಳಿಸಿ ನಗರಸಭೆಯ ಸುಪರ್ದಿಗೆ ಪಡೆಯಲಾಯಿತು.

ಜಿಲ್ಲಾ ಆಸ್ಪತ್ರೆ ಮುಂಭಾಗದ ರಸ್ತೆಯ ಡಾಂಬರ್ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಆಯುಕ್ತ ಉಮಾಕಾಂತ್‌ ಅವರ ಗಮನ ಆಸ್ಪತ್ರೆ ಕಾಂಪೌಂಡ್ ಪಕ್ಕದಲ್ಲಿಯೇ ತ್ಯಾಜ್ಯ ವಸ್ತುಗಳ ರಾಶಿಯಿಂದ ತುಂಬಿದ್ದ ನಿವೇಶನದತ್ತ ಹರಿದಿತ್ತು. ಈ ಕುರಿತು ಅವರು ವಿಚಾರಣೆ ನಡೆಸಿದಾಗ 30*40 ಚದರಡಿ ಅಳತೆಯ ಆ ನಿವೇಶನ ನಗರಸಭೆಯ ಸ್ವತ್ತು ಎಂದು ತಿಳಿದು ಬಂದಿದೆ.

ಆ ಕೂಡಲೇ ಆಯುಕ್ತರು ಜೆಸಿಬಿ ತರಿಸಿ ಆ ನಿವೇಶನಕ್ಕೆ ಬೆಂಗಳೂರಿನ ವ್ಯಕ್ತಿಯೊಬ್ಬರು ನೆಟ್ಟಿದ್ದ ಕಲ್ಲುಗಳನ್ನು ತೆಗೆಸಿ ಹಾಕಿ, ತ್ಯಾಜ್ಯದ ರಾಶಿಯನ್ನು ತೆಗೆಸಿ ಹಾಕಿ  ₹60ರಿಂದ 70 ಲಕ್ಷ ಮೌಲ್ಯದ ನಗರಸಭೆ ಆಸ್ತಿಯನ್ನು ವಶಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.