ADVERTISEMENT

ಅಂಬೇಡ್ಕರ್ ಮಾನವ ಹಕ್ಕುಗಳ ಪ್ರತಿಪಾದಕ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 6:13 IST
Last Updated 15 ಏಪ್ರಿಲ್ 2017, 6:13 IST

ಚಿಕ್ಕಮಗಳೂರು: ‘ಡಾ.ಬಿ.ಆರ್. ಅಂಬೇಡ್ಕರ್‌ ದೇಶದ ಆಸ್ತಿ. ಅವರ ತತ್ವ ಸಿದ್ಧಾಂತಗಳು ಸಾರ್ವಕಾಲಿಕ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌. ಚೈತ್ರಶ್ರೀ ಮಾಲತೇಶ್ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಶುಕ್ರವಾರ ಕುವೆಂಪು ಕಲಾಮಂದಿರದಲ್ಲಿ ಹಮ್ಮಿ ಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಬೇಡ್ಕರ್ ನೆನಪು ಅವರ ಜನ್ಮ ದಿನಾಚರಣೆಗೆ ಸೀಮಿತವಾಗದೆ ಪ್ರತಿನಿತ್ಯ ಅವರನ್ನು ನೆನಪಿಸಿಕೊಳ್ಳುವಂತಾ ಗಬೇಕು. ಅಂಬೇಡ್ಕರ್ ಕೇವಲ ದಲಿತರ ನಾಯಕರಲ್ಲ, ಎಲ್ಲ ಜಾತಿಯ, ಧರ್ಮದ ನಾಯಕ. ಮಾನವ ಹಕ್ಕುಗಳ ಪ್ರತಿಪಾದಕ’ ಎಂದು ಬಣ್ಣಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ‘ಸಮಾಜಕ್ಕೆ ಜಾತಿ ಪದ್ಧತಿ ಒಂದು ದೊಡ್ಡ ಶಾಪ, ಅದನ್ನು ಹೋಗಲಾಡಿಸಲು ಜಿಲ್ಲಾ ಬಿಜೆಪಿ ವತಿಯಿಂದ  ಸಹಪಂಕ್ತಿ ಭೋಜ ನ ಮತ್ತು ಪೌರ ಕಾರ್ಮಿಕರ ಪಾದ ಪೂಜೆಯಂತಹ ಕಾರ್ಯಕ್ರಮ ಮಾಡ ಲಾಗುತ್ತಿದೆ. ಇದರಿಂದ ಜಾತಿ ಪದ್ಧತಿ ಸಂಪೂರ್ಣ ವಿನಾಶವಾಗುತ್ತದೆ ಎಂಬ ಭ್ರಮೆ ಇಲ್ಲ. ಸಮಾಜದಲ್ಲಿರುವ ಜಾತಿಯ ಪೊರೆ ತೆಗೆಯಲು ಇದೊಂದು ಸಣ್ಣ ಅಸ್ತ್ರವಾಗಿದೆ’ ಎಂದರು.

ADVERTISEMENT

ಅರಣ್ಯ ವಸತಿ ಮತ್ತು ವಿಹಾರ ಧಾಮ ನಿಗಮದ ಅಧ್ಯಕ್ಷ ಎ.ಎನ್. ಮಹೇಶ್ ಮಾತನಾಡಿ, ‘ಮೀಸಲಾತಿ ಪಡೆದವರು ಮೀಸಲಾತಿ ಹಂಚುವ ಕೆಲಸ ಮಾಡಬೇಕು. ಮೇಲ್ವರ್ಗದ ಪರ ನಿಂತು ತುಳಿಯುವ ಕೆಲಸ ಮಾಡ ಬಾರದು. ದೇಶದಲ್ಲಿ ರಿಸರ್ವ್ ಬ್ಯಾಂಕ್ ಸ್ಥಾಪನೆ, ನೀರಾವರಿ ಮತ್ತು ವಿದ್ಯುತ್‌ ಯೋಜನೆ, ಹಿರಾಕುಡ್ ಅಣೆಕಟ್ಟು ಮತ್ತು ಸೈನಿಕರ ಕಲ್ಯಾಣ ಸಮಿತಿ ರಚನೆಯಲ್ಲಿ ಅಂಬೇಡ್ಕರ್ ಪಾತ್ರ ದೊಡ್ಡದು. ಅಂಬೇಡ್ಕರ್ ಜನ್ಮದಿನವನ್ನು ವಿಶ್ವ ಸಂಸ್ಥೆ ಆಚರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆ ತಂದಿದೆ’ ಎಂದು ಹೇಳಿದರು.

‘ಜನಪ್ರತಿನಿಧಿಗಳು ಕೇವಲ ಒಂದು ದಿನ ದಲಿತರ ಮನೆಯಲ್ಲಿ ಸಹಪಂಕ್ತಿ ಭೋಜನ ಮಾಡಬಾರದು, ಪ್ರತಿನಿತ್ಯ ಸಹ ಪಂಕ್ತಿ ಭೋಜನ ಮಾಡಿ ಇತರರಿಗೆ ಮಾದರಿಯಾಗಬೇಕು. ಅಂಬೇಡ್ಕರ್ ಅವರನ್ನು ರಾಜಕೀಯ ದಾಳವಾಗಿ ಉಪ ಯೋಗಿಸಕೊಳ್ಳಬಾರದು’ ಎಂದರು.

ಸಾಹಿತಿ ಕೃಷ್ಣಮೂರ್ತಿ ಚಮರಂ ಮಾತನಾಡಿ, ‘ಮೀಸಲಾತಿ ಎಂದರೆ ಸಮುದಾಯದ ಪ್ರತಿನಿಧಿಸುವಿಕೆ ಆಗಿದೆ. ಅಂಬೇಡ್ಕರ್‌ ರಾಜಕೀಯ ಮೀಸಲಾತಿ ಯನ್ನು 20 ವರ್ಷಗಳಿಗೆ ಸಾಕು ಎಂದಿದ್ದರು. ಸಮಾಜದಲ್ಲಿ ಸಮಾನತೆ ಬರುವ ತನಕ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಬೇಕು ಎಂದಿದ್ದರು.

ತ್ರಪತಿ ಶಾಹೂ ಮಹಾರಾಜ ದೇಶದಲ್ಲೇ ಮೊದಲ ಬಾರಿಗೆ ಮೀಸಲಾತಿ ಜಾರಿಗೆ ತಂದಿದ್ದ. ತನ್ನ ಆಸ್ಥಾನದಲ್ಲಿನ ಉನ್ನತ ಹುದ್ದೆಗಳು, ಶಿಕ್ಷಣದಲ್ಲಿ ಶೇ 50 ಮೀಸಲಾತಿಯನ್ನು ಹಿಂದುಳಿದವರಿಗೆ ಮೀಸಲಿರಿಸಿದ್ದ. ತದನಂತರ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಶೇ 75 ಮೀಸಲಾತಿಯನ್ನು ಮೈಸೂರು ಸಂಸ್ಥಾನದಲ್ಲಿ ನೀಡಿದ್ದರು’ ಎಂದರು.

‘ದೇಶದಲ್ಲಿ ಮೊದಲ ಬಾರಿಗೆ ಇಂಪಿರಿಯಲ್ ಬ್ಯಾಂಕ್ ಎಂಬ ಸ್ವಾಯತ್ತ ಬ್ಯಾಂಕ್ ಅನ್ನು ಅಂಬೇಡ್ಕರ್‌ ಸ್ಥಾಪಿಸಿ ದ್ದರು. ಅದೇ ಇಂದು ಆರ್‌ಬಿಐ ಆಗಿದೆ. ಇಂದಿನ ಜಮ್ಮು ಕಾಶ್ಮೀರದ ವಿಚಾರದಲ್ಲಿ ಎರಡು ರಾಷ್ಟ್ರಗಳು ಯುದ್ಧಕ್ಕೆ ಸನ್ನದ್ಧ ವಾಗಿ ನಿಂತಿವೆ. ಅಂಬೇಡ್ಕರ್‌ ಕಾನೂನು ಮಂತ್ರಿಯಾಗಿದ್ದಾಗ ಪ್ರಧಾನಿಯಾಗಿದ್ದ ನೆಹರೂ ಅವರಿಗೆ ಹಲವು ಬಾರಿ ಜಮ್ಮು ಮತ್ತು ಕಾಶ್ಮೀರ ವಿವಾದವನ್ನು ಬಗೆಹರಿ ಸದಿದ್ದರೆ ಮುಂದೊಂದು ದಿನ ದೇಶ ಪರಿತಪಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಜಮ್ಮು ಮತ್ತು ಕಾಶ್ಮೀರವನ್ನು 3 ಭಾಗಗಳಾಗಿ ವಿಂಗಡಿಸಬೇಕು. ಬೌದ್ಧರು ಮತ್ತು ಹಿಂದೂಗಳು ಹೆಚ್ಚಿರುವ ಜಮ್ಮು ಮತ್ತು ಲಡಾಖ್ ಪ್ರದೇಶವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು, ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊ ಡುವಂತೆ ಸಲಹೆ ನೀಡಿದ್ದರು’ ಎಂದರು.

ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್‌, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೈಯದ್‌ ಮಹಮದ್‌ ಹನೀಫ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್‌, ಜಿಲ್ಲಾಧಿಕಾರಿ ಜಿ.ಸತ್ಯವತಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆರ್‌. ರಾಗಪ್ರಿಯಾ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಡಿ.ಎಲ್‌. ವಿಜಯ್‌ಕುಮಾರ್‌ ಇತರರು ಇದ್ದರು ಇದಕ್ಕೂ ಮೊದಲು ತಾಲ್ಲೂಕು ಕಚೇರಿಯಿಂದ ಕುವೆಂಪು ಕಲಾಮಂದಿರ ದವರೆಗೂ ಎಂ.ಜಿ.ರಸ್ತೆಯಲ್ಲಿ ಅಂಬೇ ಡ್ಕರ್‌ ಭಾವಚಿತ್ರ ಮೆರವಣಿಗೆ ಮತ್ತು ಕಲಾ ತಂಡಗಳ ಜಾಥಾ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.