ADVERTISEMENT

ಅಕ್ಟೋಬರ್‌ಗೆ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:39 IST
Last Updated 25 ಏಪ್ರಿಲ್ 2017, 6:39 IST

ಚಿಕ್ಕಮಗಳೂರು: ‘ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿಸಲು ತ್ವರಿತಗತಿಯಲ್ಲಿ ಶೌಚಾಲಯ ನಿರ್ಮಿಸಲಾಗುತ್ತಿದೆ. ಅಕ್ಟೋಬರ್‌ 2ರೊಳಗೆ ಇಡೀ ಜಿಲ್ಲೆ ಬಯಲು ಬಹಿರ್ದಸೆ ಮುಕ್ತವಾಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್‌. ರಾಗಪ್ರಿಯ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಡೀ ರಾಜ್ಯವನ್ನು ಅಕ್ಟೋಬರ್‌ 2ರ ಒಳಗೆ ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಮಾಡುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು ಪ್ರಕಟಿಸಿದ್ದಾರೆ. 4 ವರ್ಷಗಳಲ್ಲಿ 87,873 ಶೌಚಾಲಯ ಗುರಿಗೆ, 74,650 ಶೌಚಾ ಲಯ ನಿರ್ಮಿಸಲಾಗಿದೆ. ಕಡೂರು ಮತ್ತು ತರೀಕೆರೆ ತಾಲ್ಲೂಕು ಹೊರತು ಪಡಿಸಿ ಉಳಿದ 5 ತಾಲ್ಲೂಕುಗಳಲ್ಲಿ ಶೇ 95 ಗುರಿ ಸಾಧಿಸಿದ್ದೇವೆ’ ಎಂದರು.

‘ಜನರಿಗೆ ನೈರ್ಮಲ್ಯ ಮತ್ತು ಶೌಚಾ ಲಯ ಬಳಕೆ ಬಗ್ಗೆ ಅರಿವು ಮೂಡಿ ಸಲು ಸ್ವಚ್ಛ ಭಾರತ್‌ ಅಭಿಯಾನದಡಿ ಜಾಗೃತಿ ಜಾಥಾ ನಡೆಸುತ್ತಿದ್ದು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಎಲ್ಲ ಅಧಿಕಾ ರಿಗಳು ಹಾಗೂ ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿಗಳ ಮೊಬೈಲ್‌ ಗಳಿಗೆ ಸ್ವಚ್ಛ ಭಾರತ ಮಿಷನ್‌ ಸಂದೇಶದ ಕಾಲರ್ ಟ್ಯೂನ್‌ ಅಳವಡಿಸಲಾಗಿದೆ. ನೈರ್ಮಲ್ಯದ ಸ್ಪಂದನೆ ಕಡಿಮೆ ಇರುವ ಹಳ್ಳಿಗಳಲ್ಲಿ ಬೀದಿ ನಾಟಕ, ಸ್ವಚ್ಛತಾ ಅಭಿಯಾನದ ಗೀತೆಗಳ ಮೂಲಕ ಜಾಗೃತಿ ಮೂಡಿಸ ಲಾಗುತ್ತಿದೆ’ ಎಂದರು.

ADVERTISEMENT

‘ಶೌಚಾಲಯ ನಿರ್ಮಾಣಕ್ಕಾಗಿ ಟ್ರಿಗ ರಿಂಗ್‌ ಮತ್ತು ಬೆಳಗಿನ ಜಾವ ಫಾಲೋ ಅಪ್‌ ಚಟುವಟಿಕೆ ನಡೆಸಲಾಗುತ್ತಿದೆ. ಪ್ರತಿ ತಾಲ್ಲೂಕಿಗೆ ಸಿಬ್ಬಂದಿ ತಂಡ ರಚಿಸ ಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾ ರಿಗಳನ್ನೊಳಗೊಂಡ ಪ್ರೇರಕರ ತಂಡ ರಚಿಸಲಾಗಿದೆ’ ಎಂದು ತಿಳಿಸಿದರು.

‘ಚಿಕ್ಕಮಗಳೂರು, ಕೊಪ್ಪ, ಮೂಡಿ ಗೆರೆ, ಎನ್‌.ಆರ್‌.ಪುರ ಮತ್ತು ಶೃಂಗೇರಿ ತಾಲ್ಲೂಕುಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ಬಯಲು ಬಹಿರ್ದೆಸೆ ಮುಕ್ತವಾಗಿವೆ. ಕಡೂರು ತಾಲ್ಲೂಕಿನ ಬಾಣೂರು, ಪಿಳ್ಳೇನಹಳ್ಳಿ, ಬಳ್ಳಿ ಗನೂರು, ಯಳ್ಳಂಬಳಸೆ ಮತ್ತು ನಿಡು ವಳ್ಳಿ ಗ್ರಾಮ ಪಂಚಾಯಿತಿಗಳು, ತರೀಕೆರೆ ತಾಲ್ಲೂಕಿನ ಕಾಮನದುರ್ಗ, ಗೋಪಾಲ, ನೇರಲೆಕೆರೆ, ಅನುವನಹಳ್ಳಿ, ನಾರಾಣ ಪುರ, ಲಿಂಗದಹಳ್ಳಿ, ಅತ್ತಿ ಮೊಗ್ಗೆ, ತಿಗಡ, ಬಾವಿಕೆರೆ, ಕೆಂಚಿಕೊಪ್ಪ ಮತ್ತು ಕೋರನಹಳ್ಳಿ ಪಂಚಾಯಿತಿ ಗಳನ್ನು ಬಯಲು ಬಹಿರ್ದೆಸೆ ಮುಕ್ತ ಪಂಚಾಯಿ ತಿಗಳಾಗಿ ಘೋಷಿಸಲಾಗಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾ ಯಿತಿ ಅಧ್ಯಕ್ಷೆ ಬಿ.ಎಸ್‌.ಚೈತ್ರಶ್ರೀ, ಉಪಾಧ್ಯಕ್ಷ ರಾಮಸ್ವಾಮಿ ಇದ್ದರು.

ಅನುಪಯುಕ್ತ ಬೋರ್‌ವೆಲ್‌ ಮುಚ್ಚಿಸಲು ಕ್ರಮ

ಅನುಪಯುಕ್ತ ಕೊಳವೆ ಬಾವಿಗ ಳನ್ನು ಮುಚ್ಚಿಸಲು ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳಿಗೆ ಸೂಚನೆ ಕೊಡಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಝಂಜವಾಡ ಗ್ರಾಮದಲ್ಲಿ ಬಾಲಕಿ ಕೊಳವೆ ಬಾವಿಗೆ ಬಿದ್ದಿ ರುವ ಘಟನೆ ಜಿಲ್ಲೆಯಲ್ಲಿ ಮರುಕಳಹಿ ಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗ ಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ರಾಗಪ್ರಿಯ ತಿಳಿಸಿದರು.

‘ತನಿಖಾ ವರದಿ ಆಧರಿಸಿ ಕ್ರಮ’

ಚಿಕ್ಕಮಗಳೂರು: ‘ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯಕ ಜಂಟಿ ನಿರ್ದೇಶಕಿ ಸುಮಂಗಳ ಅವರು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಒಂದು ಅಥವಾ ಎರಡು ವಾರಗಳಲ್ಲಿ ತನಿಖೆ ಪೂರ್ಣ ವಾಗಲಿದೆ. ತನಿಖಾ ವರದಿ ಆಧರಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಆಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್‌.ರಾಗಪ್ರಿಯ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ದೂರು ಬಂದ ತಕ್ಷಣ ಮತ್ತು ಜಿಲ್ಲಾ ಪಂಚಾಯಿತಿಯ ಸದಸ್ಯರ ಸಮಿತಿ ನೀಡಿದ ವರದಿ ಆಧರಿಸಿ ತನಿಖೆಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಡಿಡಿಪಿಐ, ಬಿಇಒ ಅಥವಾ ಗ್ರೂಪ್‌ ಎ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ನಮ್ಮ ಹಂತದಲ್ಲಿ ಇಲ್ಲ. ಹಾಗಾಗಿ ಹೆಚ್ಚಿನ ತನಿಖೆ ನಡೆಸಿ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಶಿಫಾ ರಸು ಮಾಡಲಾಗಿತ್ತು.

ಪ್ರಕರಣದ ತನಿಖೆಗೆ ಬರಬೇಕಿದ್ದ ಇಲಾಖೆ ಜಂಟಿ ನಿರ್ದೇಶಕರಾದ (ಆಡಳಿತ) ಬಸವರಾಜು ಅವರು ಬಾರದೆ, ತನಿಖೆ ವಿಳಂಬವಾಯಿತು. ಸರ್ಕಾರದ ಪ್ರಧಾನ ಕಾರ್ಯ ದರ್ಶಿಗಳು ಮತ್ತು ಶಿಕ್ಷಣ ಇಲಾಖೆ ಆಯುಕ್ತರ ಜತೆಗೆ ಚರ್ಚಿಸಿ ಪುನಾ ಇಲಾಖೆಗೆ ಪತ್ರ ಬರೆದ ನಂತರ ತನಿಖೆ ಆರಂಭವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.