ADVERTISEMENT

‘ಅಕ್ರಮ ಮನೆ ನಿರ್ಮಾಣಕ್ಕೆ ಮಂಜೂರಾತಿ ಇಲ್ಲ’

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 6:59 IST
Last Updated 27 ಆಗಸ್ಟ್ 2016, 6:59 IST

ನರಸಿಂಹರಾಜಪುರ: ಕಂದಾಯ ಮತ್ತು ಗೋಮಾಳಕ್ಕೆ ಸೇರಿದ ಜಾಗದಲ್ಲಿ ಅಕ್ರಮ ವಾಗಿ ಮನೆ ನಿರ್ಮಿಸಿಕೊಂಡಿದ್ದರೆ 94(ಸಿ) ನಲ್ಲಿ ಅರ್ಜಿಸಲ್ಲಿಸಿ ಸಕ್ರಮಗೊ ಳಿಸಿಕೊಳ್ಳಲು ಅವಕಾಶವಿದೆ. ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರೆ ಮಂಜೂರಾತಿಗೆ ಅವಕಾಶವಿಲ್ಲ ಎಂದು ತಹಶೀಲ್ದಾರ್  ಟಿ.ಗೋಪಿನಾಥ್ ತಿಳಿಸಿದರು.

ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟಜಾತಿ,ಪರಿಶಿಷ್ಟಪಂಗಡ ರಕ್ಷಣೆ ಮತ್ತು ಯೋಗ ಕ್ಷೇಮ ಸಮಿತಿಯ ಸಭೆಯಲ್ಲಿ ಮಾಹಿತಿ ನೀಡಿದರು.

ಡಿಎಸ್‍ಎಸ್ ಮುಖಂಡ ನಾಗಪ್ಪ ಮಾತನಾಡಿ ಬನ್ನೂರು  ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸ ಲಾಗಿಟ್ಟಿದ್ದ ಜಾಗ ದಲ್ಲಿ ಮೇಲ್ವರ್ಗದವರು ಗಣಪತಿ ಪೆಂಡಾಲ್ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು. ಯಾವುದೇ ಕಾರಣಕ್ಕೂ ಅಂಬೇಡ್ಕರ್ ಭವನವನ್ನು ಬೇರೆಡೆ ನಿರ್ಮಿಸಲು ಬಿಡುವುದಿಲ್ಲ ಎಂದರು. ವಾಲ್ಮೀಕಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ದಲಿತರು,ಬಡವರಿಗೆ  ಮೀಸಲಾಗಿಟ್ಟಿದ್ದ  ಜಾಗವನ್ನ ಮೇಲ್ವರ್ಗಕ್ಕೆ ಸೇರಿದವರು ಅತಿಕ್ರಮಣ ಮಾಡುತ್ತಿದ್ದಾರೆ.ಹೀಗಾದರೆ ದಲಿತರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಟಿ.ಗೋಪಿನಾಥ್  ಯಾವುದೆ ಕಾರಣಕ್ಕೂ ದಲಿತರಿಗೆ ಮೀಸಲಿರಿಸಿದ ಜಾಗವನ್ನು ಯಾರೂ ಆತಿಕ್ರಮಣ ಮಾಡಿಕೊಳ್ಳಲು ಬಿಡುವುದಿಲ್ಲ ಎಂದರು.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾ ಧಿಕಾರಿ  ಬಿ.ಎ.ಸೀಮಾ ಮಾತನಾಡಿ ಈಗಾಗಲೇ ಆಶ್ರಯ ನಿವೇಶನ ರಹಿತರ ಪಟ್ಟಿಯನ್ನು ತಯಾರಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟಪಂಗಡದ ಫಲಾನುಭವಿ ಗಳನ್ನು ಕೈಬಿಡದಂತೆ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ

ನಾಗಪ್ಪ ಮಾತನಾಡಿ ಹಂದೂರು, ಗುಬ್ಬೂರು, ಕರ್ಕೇಶ್ವರ ಗ್ರಾಮಗಳ ದಿನಸಿ ಅಂಗಡಿ ಗಳಲ್ಲಿ ಅಕ್ರಮ ಮದ್ಯ ಮಾರಾಟ ವಾಗುತ್ತಿದೆ. ಈ ಬಗ್ಗೆ ಕಡಿವಾಣ ಹಾಕಬೇ ಕೆಂದರು. ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ಎಂ.ಜಗನ್ನಾಥ್  ಅಕ್ರಮ ಮದ್ಯ ವಶಪಡಿಸಿಕೊಂಡು ಮೊಕದ್ದಮ್ಮೆ ದಾಖ ಲಿಸುತ್ತಿದ್ದೇವೆ ಎಂದರು.

ಬಾಳೆಹೊನ್ನೂರು ಬಸ್‌ ನಿಲ್ದಾಣ ದಲ್ಲಿರುವ  ಸಾರ್ವಜನಿಕ ಶೌಚಾಲ ಯದಲ್ಲಿ ಮೂತ್ರವಿಸರ್ಜನೆಗೂ ಹಣವ ಸೂಲಿ ಮಾಡಲಾಗುತ್ತಿದೆ ಇದನ್ನು ತಡೆಗಟ್ಟಬೇಕೆಂದು ಕುಮಾರ್ ತಿಳಿಸಿ ದರು. ಪರಿಶೀಲನೆ ನಡೆಸಲಾಗುವುದು ಎಂದು ಇಓ ತಿಳಿಸಿದರು. ಫಾರಂ 50–53ಯಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ ದಲಿತರ ಅರ್ಜಿಗಳು ವಿಲೇವಾರಿ ಯಾಗುತ್ತಿಲ್ಲ ಎಂದು ಮಹೇಶ್ ಆರೋಪಿಸಿದರು.

ಸಭೆಯಲ್ಲಿ ಇಓ ಬಿ.ಎ.ಸೀಮಾ, ಬಿಇಓ ಡಿ.ರಾಜಪ್ಪ,ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ, ಪೊಲೀಸ್ ಇನ್ಸ್‌ ಪೆಕ್ಟರ್ ಜಗನ್ನಾಥ್, ಶಿರಸ್ತೇದಾರ್ ರಶ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.