ADVERTISEMENT

‘ಅಧ್ಯಾತ್ಮದ ತಳಹದಿ ಮೇಲೆ ಶಿಕ್ಷಣ ಅಗತ್ಯ’

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 5:42 IST
Last Updated 16 ಜನವರಿ 2017, 5:42 IST
‘ಅಧ್ಯಾತ್ಮದ ತಳಹದಿ ಮೇಲೆ ಶಿಕ್ಷಣ ಅಗತ್ಯ’
‘ಅಧ್ಯಾತ್ಮದ ತಳಹದಿ ಮೇಲೆ ಶಿಕ್ಷಣ ಅಗತ್ಯ’   

ಚಿಕ್ಕಮಗಳೂರು: ‘ಆಧುನಿಕ ಯುಗದಲ್ಲಿ ತಾಂತ್ರಿಕ ಸವಾಲುಗಳನ್ನು ಎದುರಿಸಲು ನೈತಿಕ ಮೌಲ್ಯದ ಮೇಲೆ ಶಿಕ್ಷಣ ನೀಡಬೇಕು. ಅಧಾತ್ಮದ ತಳಹದಿ ಮೇಲೆ ರಾಷ್ಟ್ರ ನಿರ್ಮಾಣವಾಗಬೇಕು’ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ನಗರದ ಕುವೆಂಪು ಕಲಾಮಂದಿ ರದಲ್ಲಿ ಮಹರ್ಷಿ ವಿದ್ಯಾಮಂದಿರದ ಶಾಲಾ ವಾರ್ಷಿಕೋತ್ಸವ ಹಾಗೂ ಮಹರ್ಷಿ ಮಹೇಶ್‌ ಯೋಗೀಜಿ ಜನ್ಮ ದಿನ ಪ್ರಯುಕ್ತ ಗುರುವಾರ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. 

‘ಅಧಾತ್ಮದ ತಳಹದಿ ಮೇಲೆ ಆಧುನಿಕತೆ ಹಾಗೂ ತಾಂತ್ರಿಕತೆ ಮೈಗೂ ಡಿಸಿಕೊಳ್ಳಬೇಕು. ಸುಸಂಸ್ಕೃತ ರಾಷ್ಟ್ರ ಕಟ್ಟುವಲ್ಲಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ. ವಿಶ್ವದ ಹಿತ ಬಯಸಿದ ರಾಷ್ಟ್ರ ಭಾರತ. ಇತರರಿಗೆ ಸ್ವಾರ್ಥವನ್ನು ಎಂದೂ ಬಯಸಲಿಲ್ಲ. ನಾನು ಹೇಳಿದ್ದೆ ಸತ್ಯ ಮಿಕ್ಕಿದೆಲ್ಲಾ ಮಿಥ್ಯೆ ಎಂದು ಯಾವತ್ತೂ ವಿತಂಡವಾದ ಮಾಡಲಿಲ್ಲ. ವಸುಧೈವಕುಟುಂಬಕಂ ಎಂಬ ದೀಕ್ಷೆಯನ್ನು ಪ್ರಪಂಚಕ್ಕೆ  ನೀಡಿದ ದೇಶ ನಮ್ಮದು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಮಾತನಾಡಿ, ಶಾಲಾ ಕಾಲೇಜುಗಳು ದೇಶದಕ್ಕೆ ಉತ್ತಮ ಪ್ರಜೆಗಳನ್ನು ತಯಾರಿಸುವ ಮಹತ್ವದ ಕಾರ್ಯ ನಿರ್ವಹಿಸುತ್ತಿವೆ. ಉನ್ನತ ವ್ಯಾಂಸಂಗ ಪೂರೈಸಿದ ಸಾಕಷ್ಟು ವಿದ್ಯಾವಂತರು ಸಮಾಜದಲ್ಲಿದ್ದಾರೆ. ಆದರೂ, ಸಮಾಜಕ್ಕೆ ಯಾವುದೇ ಸೇವೆ ಸಲ್ಲಿಸುತ್ತಿಲ್ಲ ಎಂದು ವಿಷಾದಿಸಿದರು.

ವಿಭಿನ್ನ ಬುದ್ಧಿಶಕ್ತಿ ಹೊಂದಿರುವ ಮನುಷ್ಯ ಯೋಗದ ಕಡೆ ಮುಖ ಮಾಡುತ್ತಿಲ್ಲ. ಯೋಗ ಜೀವನದಲ್ಲಿ ಒಂದು ಅವಿಭಾಜ್ಯ ಅಂಗ. ಯಾವ ವ್ಯಕ್ತಿ ನಿತ್ಯ ಯೋಗಾಭ್ಯಾಸ ಅಭ್ಯಾಸ ಮಾಡುತ್ತಾನೋ ಆತ ಪರಿಪೂರ್ಣ. ಯೋಗ ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಪ್ರತಿಯೊಬ್ಬರು ನಿತ್ಯ ಯೋಗಾಭ್ಯಾಸ ಮಾಡಬೇಕು.

ಇದರಿಂದ ಶಾಂತಿ, ನೆಮ್ಮದಿ ಲಭಿಸುತ್ತದೆ. ಹಾಗೆಯೇ ಸಮಾಜದಲ್ಲೂ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ. ಮಹರ್ಷಿ ವಿದ್ಯಾಮಂದಿರ ಪ್ರತಿನಿತ್ಯ ಯೋಗವನ್ನು ಶಿಕ್ಷಣದಲ್ಲಿ ಅಳವಡಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು.

ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಹರ್ಷಿ ವಿದ್ಯಾಮಂದಿರದ ಪ್ರಾಂಶುಪಾಲ ಮಲ್ಲೇಶ್‌ ಆಚಾರ್, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.