ADVERTISEMENT

ಊಟಕ್ಕೆ ಕಳಪೆ ಅಕ್ಕಿ: ವಿದ್ಯಾರ್ಥಿನಿಯರ ಆರೋಪ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 11:12 IST
Last Updated 11 ಜನವರಿ 2017, 11:12 IST
ಮೂಡಿಗೆರೆ ಪಟ್ಟಣದ ಛತ್ರಮೈದಾನದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕೀಯರ ವಿದ್ಯಾರ್ಥಿನಿಲಯಕ್ಕೆ ಸೋಮವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ. ರತನ್‌ ಭೇಟಿ ನೀಡಿದ ವೇಳೆ ವಿದ್ಯಾರ್ಥಿನಿಯರು ಕಳಪೆ ಅಕ್ಕಿಯ ಬಗ್ಗೆ ದೂರಿದರು.
ಮೂಡಿಗೆರೆ ಪಟ್ಟಣದ ಛತ್ರಮೈದಾನದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕೀಯರ ವಿದ್ಯಾರ್ಥಿನಿಲಯಕ್ಕೆ ಸೋಮವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ. ರತನ್‌ ಭೇಟಿ ನೀಡಿದ ವೇಳೆ ವಿದ್ಯಾರ್ಥಿನಿಯರು ಕಳಪೆ ಅಕ್ಕಿಯ ಬಗ್ಗೆ ದೂರಿದರು.   

ಮೂಡಿಗೆರೆ: ಪಟ್ಟಣದ ಛತ್ರ ಮೈದಾನ ದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಕ್ಕೆ ಪೂರೈಕೆ ಮಾಡಿರುವ ಅಕ್ಕಿಯು ಕಳಪೆ ಯಿಂದ ಕೂಡಿದ್ದು, ಕೂಡಲೇ ಬದಲಾ ಯಿಸುವಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್ ಸೂಚಿಸಿದರು.

ಸೋಮವಾರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ್ದ ವೇಳೆ, ಅನ್ನ ಸರಿಯಾಗಿ ಬೇಯದ ಕಾರಣ ಊಟ ಮಾಡುವಾಗ ಕಾಳು ಅಕ್ಕಿ ಸಿಕ್ಕಂತಾಗುತ್ತದೆ. ಇದರಿಂದ ವಿದ್ಯಾರ್ಥಿನಿಲಯದ ಹಲವು ವಿದ್ಯಾರ್ಥಿ ನಿಯರಿಗೆ ಹೊಟ್ಟೆ ನೋವು ಕಾಣಿಸಿ ಕೊಂಡಿದೆ ಎಂದು ವಿದ್ಯಾರ್ಥಿನಿಯರು ದೂರಿದರು. ಅಡುಗೆ ಮನೆಯಲ್ಲಿ ಬಡಿ ಸಲು ಸಿದ್ಧವಾಗಿದ್ದ ಅನ್ನವನ್ನು ಅಗಿದು ನೋಡಿದಾಗ, ಅನ್ನದ ಮೇಲ್ಬಾಗದಲ್ಲಿ ಬೆಂದಿರುವಂತೆ ಕಂಡು ಬಂದರೂ, ಒಳಗೆ ಕಾಳು ಕಾಳು ಇರುವುದನ್ನು ಗಮನಿಸಿ ಅಡುಗೆ ಸಿಬ್ಬಂದಿಯನ್ನು ವಿಚಾರಿಸಿದರು.

ಸ್ವಲ್ಪ ಜಾಸ್ತಿ ಬೇಯಿಸಿದರೆ ಮಡ್ಡಿಯಾಗುತ್ತದೆ, ಕಡಿಮೆ ಬೇಯಿಸಿದರೆ ಕಾಳುಕಾಳು ಉಳಿಯುತ್ತದೆ. ಹೇಗೆ ತಯಾರಿಸಿದರೂ ಅನ್ನ ಸರಿಯಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಕೂಡಲೇ ಅಕ್ಕಿಯನ್ನು ಬದಲಾಯಿಸಿ ಬೇರೆ ಅಕ್ಕಿಯನ್ನು ಪೂರೈಕೆ ಮಾಡುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕಳೆದ ಮೂರು ತಿಂಗಳಿನಿಂದ ವಿದ್ಯಾರ್ಥಿನಿಲಯಗಳಿಗೆ ವೈದ್ಯಾಧಿ ಕಾರಿಗಳು ಭೇಟಿ ನೀಡಿಲ್ಲ, ಹಿಂದೆ ಬರುತ್ತಿದ್ದ ವೈದ್ಯಾಧಿಕಾರಿಗಳು ವಿದ್ಯಾರ್ಥಿ ಗಳನ್ನು ತಪಾಸಣೆ ನಡೆಸಿದರೂ, ಶೀತ, ಜ್ವರದಂತಹ ಸಣ್ಣಪುಟ್ಟ ಸಮಸ್ಯೆಗಳಿಗೂ ಔಷಧಿ ನೀಡದೇ, ಚೀಟಿ ಬರೆದು ಕೊಡುತ್ತಿದ್ದರು. ಇದರಿಂದ ಹಲವು ವಿದ್ಯಾರ್ಥಿನಿಯರಿಗೆ ಸಮಸ್ಯೆಯಿದ್ದರೂ ಔಷಧಿ ತೆಗೆದುಕೊಳ್ಳಲು ಹಣವಿಲ್ಲದೇ ಚಿಕಿತ್ಸೆಯಿಂದ ಹೊರಗುಳಿಯುವಂತಾ ಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ನೀಡುವ ಔಷಧಿಗಳನ್ನು ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರಿಗೂ ನೀಡಲು ಸೂಚಿಸ ಬೇಕು ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದರು. ತಾಲ್ಲೂಕು ವೈದ್ಯಾಧಿ ಕಾರಿ ಡಾ. ಸುಂದ್ರೇಶ್‌ ಅವರಿಗೆ ದೂರ ವಾಣಿ ಕರೆ ಮಾಡಿ, ನಾಲ್ಕು ದಿನದೊಳಗೆ ಪಟ್ಟಣ ದಲ್ಲಿರುವ ಎಲ್ಲಾ ವಿದ್ಯಾರ್ಥಿ ನಿಲಯ ಗಳಿಗೂ ವೈದ್ಯಾಧಿಕಾರಿಗಳ ತಂಡವನ್ನು ಕಳುಹಿಸಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ, ಉಚಿತ ಔಷಧಿಗಳನ್ನು ವಿತರಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.