ADVERTISEMENT

‘ಎನ್‌ಜಿಒಗಳೇ ನಮ್ಮ ನಿಜವಾದ ಶತ್ರುಗಳು’

ಕಸ್ತೂರಿರಂಗನ್ ವರದಿ ವಿರುದ್ಧ ಐದು ಪಂಚಾಯಿತಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:58 IST
Last Updated 18 ಏಪ್ರಿಲ್ 2017, 6:58 IST
ಕೊಪ್ಪ: ‘ಪರಿಸರ ಸಂರಕ್ಷಣೆ ಹೆಸರಲ್ಲಿ ಮಲೆನಾಡಿಗರಿಗೆ ಮರಣ ಶಾಸನ ದಂತಿರುವ ಕಸ್ತೂರಿರಂಗನ್ ವರದಿ ಸಿದ್ಧಪಡಿಸಲು ಕಾರಣರಾಗಿರುವ ಸರ್ಕಾ ರೇತರ ಸಂಸ್ಥೆ (ಎನ್‌ಜಿಒ)ಗಳೇ ನಮ್ಮ ನಿಜವಾದ ಶತ್ರುಗಳು’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಂ. ರವಿಕಾಂತ್ ದೂರಿದರು. 
 
ಇಲ್ಲಿನ ತಾಲ್ಲೂಕು ಕಚೇರಿ ಆವರಣ ದಲ್ಲಿ ಸೋಮವಾರ ಕಸ್ತೂರಿರಂಗನ್ ವರದಿ ವಿರೋಧಿಸಿ ತಾಲ್ಲೂಕಿನ ಹಿರೇ ಕೊಡಿಗೆ, ಹರಂದೂರು, ಕೆಸವೆ, ಕೊಪ್ಪ ಗ್ರಾಮಾಂತರ ಮತ್ತು ಪಟ್ಟಣ ಪಂಚಾಯಿ ತಿಗಳ ವತಿಯಿಂದ ಏರ್ಪಡಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. 
 
‘ಬಹುರಾಷ್ಟ್ರೀಯ ಕಂಪೆನಿಗಳ ಏಜೆಂಟರಾಗಿರುವ ಎನ್‌ಜಿಒ ಪ್ರತಿನಿಧಿ ಗಳು ಪರಿಸರವಾದಿಗಳ ಸೋಗಿನಲ್ಲಿ ನಮ್ಮ ನೆಲ, ಜಲ, ಸಂಪತ್ತನ್ನು ಲೂಟಿ ಹೊಡೆಯಲು ವಿದೇಶಿಗರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಪಶ್ಚಿಮಘಟ್ಟ ಸಂರಕ್ಷಣೆ, ಹುಲಿಯೋಜನೆ, ಆನೆ ಕಾರಿಡಾರ್, ರಾಷ್ಟ್ರೀಯ ಉದ್ಯಾನವನ ಮುಂತಾದ ಜನವಿರೋಧಿ ಯೋಜನೆ ಗಳನ್ನು ರೂಪಿಸುತ್ತಾರೆ.
 
ಸರ್ಕಾರಗಳನ್ನು ಹಾದಿ ತಪ್ಪಿಸಿ ಉದ್ದೇಶಿತ ಯೋಜನೆ ಜಾರಿಗೊಳಿಸುವಲ್ಲಿ ಸಫಲರಾಗಿ ವಿದೇಶಿ ಕಂಪೆನಿಗಳಿಂದ ಕೋಟಿ ಕೋಟಿ ಡಾಲರ್ ಹಣಪಡೆದು ಐಶಾರಾಮಿ ಜೀವನ ನಡೆಸುತ್ತಾರೆ’ ಎಂದು ಆರೋಪಿಸಿದರು. 
 
‘ಗುಜರಾತ್, ಮಹಾರಾಷ್ಟ್ರ ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಜಾರಿಗೆ ಸಿದ್ಧವಾಗಿರುವ ಕಸ್ತೂರಿರಂಗನ್ ವರದಿ ಪಶ್ಚಿಮಘಟ್ಟ ಪ್ರದೇಶವನ್ನು ಜನರಹಿತ ಮಾಡುವ ಉದ್ದೇಶ ಹೊಂದಿದೆ’ ಎಂದರು. ಬಳಿಕ ತಹಶೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
 
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಸ್.ಎನ್. ರಾಮಸ್ವಾಮಿ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ, ಸದಸ್ಯೆ ಮಧುರ ಶಾಂತಪ್ಪ, ಹಿರೇಕೊಡಿಗೆ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ, ಹರಂದೂರು ಪಂಚಾಯಿತಿ ಅಧ್ಯಕ್ಷೆ ರಮ್ಯ, ಕೆಸವೆ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ, ಗ್ರಾಮಾಂತರ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಣಿ ಸತೀಶ್, ವಿವಿಧ ಪಕ್ಷಗಳ ಮುಖಂಡರಾದ ಎಚ್.ಜಿ. ವೆಂಕಟೇಶ್, ಅಸಗೋಡು ನಾಗೇಶ್, ಸಚಿನ್ ಮೀಗ, ಸುಧೀರ್‌ಕುಮಾರ್ ಮುರೊಳ್ಳಿ, ಸುಬ್ರಹ್ಮಣ್ಯ ಶೆಟ್ಟಿ, ಹೊಸೂರು ದಿನೇಶ್, ನುಗ್ಗಿ ಮಂಜುನಾಥ್, ಎಂ.ಸಿ. ಅಶೋಕ್, ಎಚ್.ಕೆ. ವಿಶ್ವ, ಶಿವಪುರ ಅರುಣ್, ಶಂಕ ರಪ್ಪ, ರಿತೇಶ್, ದೀಪಣ್ಣ, ಅಭಿಲಾಷ್, ಸುಜನ್, ಸಂಜೀವ, ಎಚ್.ಎಸ್. ಕಳಸಪ್ಪ, ಎಸ್.ಎಸ್. ಸಂಜಯ್, ಎಸ್.ಪಿ. ಚಂದ್ರಶೇಖರ್, ಎಚ್.ಪಿ. ರಾಮಪ್ಪ, ಕೆ.ವಿ. ಚಂದ್ರಶೇಖರ್, ಕೆ.ಪಿ. ಮದನ್ ಮುಂತಾದವರಿದ್ದರು. 
 
ಇದಕ್ಕೂ ಮೊದಲು ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂ ಗಣದಲ್ಲಿ ಸಮಾವೇಶಗೊಂಡ ಪ್ರತಿಭಟ ನಾಕಾರರು ಕಸ್ತೂರಿರಂಗನ್ ವರದಿಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.