ADVERTISEMENT

ಕಳಸದಲ್ಲಿ ಬಜರಂಗದಳ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 8:55 IST
Last Updated 2 ಡಿಸೆಂಬರ್ 2017, 8:55 IST

ಕಳಸ: ಪಟ್ಟಣದಲ್ಲಿ ಬಿಜೆಪಿ ಬಳಗವು ದತ್ತಪೀಠದ ನೆಪದಲ್ಲಿ ಶುಕ್ರವಾರ ಸಂಜೆ ತನ್ನ ಬಲಪ್ರದರ್ಶನ ನಡೆಸಿತು. ಬಹುತೇಕ ನಿಷ್ಕ್ರಿಯಗೊಂಡಿದ್ದ ಬಜರಂಗದಳ ಸಂಘಟನೆಯು ಇದ್ದಕ್ಕಿದ್ದಂತೆ ಚುರುಕಾಗಿದ್ದು, ಶುಕ್ರವಾರ 300ಕ್ಕೂ ಹೆಚ್ಚು ಮಾಲಾಧಾರಿಗಳು ಪಟ್ಟಣದಲ್ಲಿ ಬೃಹತ್‌ ಶೋಭಾಯಾತ್ರೆ ನಡೆಸಿ ಅಚ್ಚರಿ ಮೂಡಿಸಿದರು.

ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಶೋಭಾಯಾತ್ರೆ ಮುಖ್ಯ ಬೀದಿಗಳಲ್ಲಿ ಸಂಚರಿಸಿ, ಕಳಸೇಶ್ವರ ದೇವಸ್ಥಾನದವರೆಗೆ ಸಾಗಿತು. ದತ್ತಪೀಠದ ಬಗ್ಗೆ ಮೆರವಣಿಗೆಯುದ್ದಕ್ಕೂ ಮಾಲಾಧಾರಿಗಳು ಏರುದನಿಯಲ್ಲಿ ಘೋಷಣೆ ಕೂಗಿದರು.

ಬಜರಂಗದಳ ಮುಖಂಡರಾದ ರಾಘವೇಂದ್ರ ಶೆಣೈ, ಉಮೇಶ್‌ ಬಾಳೆಹೊಳೆ, ಬಿಜೆಪಿ ಮುಖಂಡರಾದ ಹೆಮ್ಮಕ್ಕಿ ಗಿರೀಶ್‌, ವೆಂಕಟಸುಬ್ಬಯ್ಯ, ಶೇಷಗಿರಿ, ರಂಗನಾಥ್‌,ಪ್ರಕಾಶ್‌, ಕಾರ್ತಿಕ್‌ ಶಾಸ್ತ್ರಿ, ಜಿನರಾಜಯ್ಯ, ನಾಗಭೂಷಣ್‌, ಪರೀಕ್ಷಿತ್‌ ಜಾವಳಿ,ಜಯಂತ್‌, ಸಂಸೆಯ ಪ್ರದೀಪ್‌, ಮಹೇಶ್‌ ಮೆರವಣಿಗೆಯ ನೇತೃತ್ವ ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.