ADVERTISEMENT

ಕಾಂಪೌಂಡ್ ಕಾಮಗಾರಿ ಕಳಪೆ: ಸ್ಥಳೀಯರ ಆರೋಪ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 9:25 IST
Last Updated 23 ಡಿಸೆಂಬರ್ 2017, 9:25 IST

ಕೊಪ್ಪ: ತಾಲೂಕಿನ ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸರಿಕಟ್ಟೆಯ ಗಿರಿಜನ ಆಶ್ರಮ ಶಾಲೆಯ ಆವರಣ ಗೋಡೆ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

‘6 ತಿಂಗಳ ಹಿಂದೆ ನಿರ್ಮಿಸಿದ ಈ ಆವರಣ ಗೋಡೆಗೆ ಬಳಸಿದ ಸಿಮೆಂಟ್ ಮಿಶ್ರಣ ಅಸಮರ್ಪಕವಾಗಿದೆ. ಹೀಗಾಗಿ, ಮಣ್ಣಿನ ಪುಡಿಯಂತೆ ಉದುರುತ್ತಿದೆ. ಶೀಘ್ರದಲ್ಲೇ ಕಾಂಪೌಂಡ್ ಕುಸಿಯುವ ಸಾಧ್ಯತೆಯಿದ್ದು, ಇಲ್ಲಿ ಓಡಾಡುವ ಶಾಲಾ ಮಕ್ಕಳಿಗೆ ಅಪಾಯ ಎದುರಾಗಿದೆ’ ಎಂದು ಆರೋಪಿಸಿದ್ದಾರೆ.

‘ನಿರ್ಮಿತಿ ಕೇಂದ್ರದ ಹೆಸರಿನಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಕಾಮಗಾರಿ ನಡೆಸಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರಶಾಂತ್ ಶೆಟ್ಟಿ, ಸ್ಥಳೀಯರಾದ ಸುಕುಮಾರ್ ಕರ್ಕೇರ, ಸದಾನಂದ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.