ADVERTISEMENT

ಕಾಳು ಮೆಣಸು ಬೆಳೆ: ರಾಜ್ಯ ಪ್ರಥಮ

ಕೃಷಿ ವಿಚಾರ ಸಂಕಿರಣದಲ್ಲಿ ಡಾ.ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 7:21 IST
Last Updated 10 ಜನವರಿ 2017, 7:21 IST
ಶೃಂಗೇರಿ: ಭಾರತದಲ್ಲಿ ಕರ್ನಾಟಕವು ಕಾಳುಮೆಣಸು ಬೆಳೆಯುವಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು. ಪ್ರಥಮ ಸ್ಥಾನದ ಲ್ಲಿದೆ ಎಂದು ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನಾರಾಯಣಸ್ವಾಮಿ ತಿಳಿಸಿದರು.
 
ಹನುಮಂತನಗರದ ಅಂಬೇಡ್ಕರ್‌ ಭವನದಲ್ಲಿ ಧರ್ಮಸ್ಥಳ ಗ್ರಾಮೀಣಾ ಭಿವೃದ್ಧಿ ಸಂಘದಿಂದ ಸೋಮವಾರ ಆಯೋಜಿಸಿದ್ದ ಕೃಷಿ ವಿಚಾರ ಸಂಕಿರಣ ದಲ್ಲಿ ಅವರು ಮಾತನಾಡಿದರು.
 
ಮಲೆನಾಡಿನ ಅಡಿಕೆ ಮತ್ತು ಕಾಫಿತೋಟದಲ್ಲಿ ಸಾಂಪ್ರಾದಾಯಿಕವಾಗಿ ಕಾಳುಮೆಣಸನ್ನು ಬೆಳೆಯಲಾಗುತ್ತಿದ್ದು, ಇಲ್ಲಿ ಹೆಚ್ಚಾಗಿ ಪನ್ನಿಯೂರು ತಳಿಗಳನ್ನು ಬೆಳೆಸಲಾಗುತ್ತದೆ. ಕಾಳುಮೆಣಸಿಗೆ ಮಳೆ ಗಾಲದಲ್ಲಿ ಶೀಘ್ರ ಶಿಲೀಂದ್ರ ರೋಗ ಬಾಧೆ ಇದ್ದು, ಅದನ್ನು ತಡೆಗಟ್ಟಲು ಕಾಲಕಾಲಕ್ಕೆ ಜ್ಯೆವಿಕ ಗೊಬ್ಬರಗಳನ್ನು ನೀಡುವುದು ಮತ್ತು ಬಳ್ಳಿಗಳಿಗೆ ಬೋರ್ಡೋ ದಾವಣವನ್ನು ಮುಂಗಾರಿ ಗಿಂತ ಮುಂಚೆ ಹಾಗೂ ಬಳಿಕ ಎರಡುಬಾರಿ ಸಿಂಪಡಿಸಬೇಕು ಎಂದರು.
 
 ವಿಜ್ಞಾನಿ ಡಾ.ನಿರಂಜನ್ ಅವರು ಮಾತನಾಡಿ ಮಣ್ಣು ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿದರು.
 
ಸಮಾರಂಭವನ್ನು ಉದ್ಘಾಟಿಸಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಶೀಲ ಚಂದ್ರಶೇಖರ್ ಮಾತನಾಡಿ, ಮಲೆನಾಡಿನ ರೈತರಿಗೂ ಕೃಷಿಗೂ ತಲೆತಲಾಂತರದಿಂದ  ಅವಿನಾಭವ ಸಂಬಂಧವಿದ್ದು, ಕೃಷಿಯನ್ನು ನೆಚ್ಚಿ ಬದುಕನ್ನು ಸವೆಯುವ ಅವರ ಕಾಯಕಕ್ಕೆ ಬೆಲೆ ಕಟ್ಟಲಾಗದು. ಅನ್ನದಾತನಿಗೆ ಸರ್ಕಾರವು ಪ್ರೋತ್ಸಾಹ ನೀಡಿದರೆ ಮಾತ್ರ ಕೃಷಿಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
 
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಮಾ ಸೋಮಾಶೇಖರ್ ಮಾತನಾಡಿ,  ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ತಾಲ್ಲೂಕಿನ ಮಹಿಳೆಯರು ಅರ್ಥಿಕವಾಗಿ ಸ್ವಾವಲಂಬನೆಯನ್ನು ಹೊಂದುತ್ತಿದ್ದು,  ಸಾಮಾಜಿಕ, ಸಾಂಸ್ಕೃತಿಕ, ಶ್ಯೆಕ್ಷಣಿಕ ಹಾಗೂ ಅರ್ಥಿಕ ಕ್ಷೇತ್ರಕ್ಕೆ ಡಿ.ವೀರೇಂದ್ರ ಹೆಗ್ಗಡೆ ಅವರು ನೀಡುತ್ತಿರುವ ಸಹಕಾರ ರಾಷ್ಟ್ರಕ್ಕೆ ಮಾದರಿ ಎಂದರು.
 
ಈ ಸಂದರ್ಭದಲ್ಲಿ ಮುಖ್ಯ ಅ ತಿಥಿಗಳಾಗಿ ಗೇರುಬ್ಯೆಲು ಶಂಕರಪ್ಪ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.