ADVERTISEMENT

‘ಕೃಷಿಯಿಂದ ಉತ್ತಮ ಬದುಕು ಸಾಧ್ಯ’

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 6:18 IST
Last Updated 13 ನವೆಂಬರ್ 2017, 6:18 IST

ಚಿಕ್ಕಮಗಳೂರು: ಜನರು ನಗರ ವ್ಯಾಮೋಹ ಬಿಟ್ಟು ಮತ್ತೆ ಕೃಷಿಯತ್ತ ಹೊರಳಬೇಕು ಎಂದು ಆಕಾಶವಾಣಿ ಕಲಾವಿದ ವಿಜಯ ಅಂಗಡಿ ಸಲಹೆ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ತಾಲ್ಲೂಕಿನ ಮೂಗ್ತಿಹಳ್ಳಿಯ ಚಂದ್ರಶೇಖರ ನಾರಣಾಪುರ ಅವರ ನಿವಾಸದಲ್ಲಿ ಈಚೆಗ ಆಯೋಜಿಸಿದ್ದ ‘ಕೃಷಿ-ಋಷಿ’ ಸಂವಾದದಲ್ಲಿ ಅವರು ಮಾತನಾಡಿದರು.

ಕೃಷಿ ಲಾಭದಾಯಕವಲ್ಲ ಎಂಬ ತಪ್ಪು ಕಲ್ಪನೆ ಬಿಡಬೇಕು. ಕೃಷಿಯಲ್ಲಿ ದೊರೆಯುವ ಸಂತೋಷ, ಸಾರ್ಥಕತೆ ಬೇರೆ ಕ್ಷೇತ್ರದಲ್ಲಿ ದೊರೆಯುವುದಿಲ್ಲ. ದೇಶದಲ್ಲಿ ಶೇ 90ರಷ್ಟು ಜನ ಕೃಷಿ ಮಾಡಿ ಶ್ರೀಮಂತರಾಗಿದ್ದಾರೆ ಎಂದರು.

ರೈತರಲ್ಲಿ ಶ್ರದ್ದೆ, ಶಿಸ್ತು, ಶ್ರಮ ಇದ್ದರೆ ಕೃಷಿಯಲ್ಲಿ ಲಾಭ ಗಳಿಸಬಹುದು. ಕೃಷಿಯಲ್ಲಿ ನೆಮ್ಮದಿ ಜೀವನ ಕಟ್ಟಿಕೊಳ್ಳಬಹುದು. ಶಿಕ್ಷಣದ ಜತೆಗೆ ಕೃಷಿಯಲ್ಲಿ ತೊಡಗಲು ಮಕ್ಕಳಿಗೆ ಪ್ರೋತ್ಸಾಹಿಸಬೇಕು ಎಂದರು. ಕಾರ್ಯಕಾರಿ ಸಮಿತಿ ಸದಸ್ಯ ಲಕ್ಷ್ಮಣಗೌಡ, ಖಜಾಂಚಿ ಕೆ.ಎನ್.ಲಕ್ಷ್ಮೀಕಾಂತ್, ಸಾಹಿತಿ ಬೆಳವಾಡಿ ಮಂಜುನಾಥ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.