ADVERTISEMENT

ಕೋಶಾಧ್ಯಕ್ಷ ಹುದ್ದೆಗೆ ರಘು ರಾಜೀನಾಮೆ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಣ ದುರ್ಬಳಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 6:59 IST
Last Updated 18 ಫೆಬ್ರುವರಿ 2017, 6:59 IST
ಮೂಡಿಗೆರೆ: ಇದೇ 20, 21 ರಂದು ನಡೆಯಲಿರುವ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಕೋಶಾಧ್ಯಕ್ಷ ಸ್ಥಾನಕ್ಕೆ ರಾಜೀ ನಾಮೆ ನೀಡಿರುವುದಾಗಿ ಹಳೇಕೆರೆ ರಘು ತಿಳಿಸಿದ್ದಾರೆ.
 
ಸಮ್ಮೇಳನಕ್ಕೆ ಎರಡು ದಿನಗಳು ಬಾಕಿ ಇರುವಂತೆ ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕನ್ನಡ ಸಾಹಿತ್ಯ ಸಮ್ಮೇಳನವು ಹಣ ಹೊಡೆ ಯುವ ದಂಧೆಯಾಗಿದೆ. ಬ್ಯಾಗು, ಶಾಲು, ಬ್ಯಾನರ್‌, ಬಂಟಿಂಗ್ಸ್‌, ಊಟ ಸೇರಿ ದಂತೆ ಎಲ್ಲ ಖರ್ಚುಗಳಲ್ಲೂ ಸುಳ್ಳು ಲೆಕ್ಕ ಬರೆಯುವ ಮೂಲಕ ಸಮ್ಮೇಳನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವು ದರಿಂದ ಕೋಶಾಧ್ಯಕ್ಷ ಸ್ಥಾನಕ್ಕೆ ರಾಜೀ ನಾಮೆ ನೀಡುತ್ತಿದ್ದೇನೆ ಎಂದು ‘ಪ್ರಜಾ ವಾಣಿ’ಗೆ ತಿಳಿಸಿದ್ದಾರೆ. ಬ್ಯಾಗು ಖರೀದಿಸಿ ರುವ ಅಂಗಡಿಯಲ್ಲಿ ಸುಳ್ಳು ಬಿಲ್‌ ಬರೆಸಿರುವುದಕ್ಕೆ ನನ್ನಲ್ಲಿ ದಾಖಲೆಗಳಿವೆ. ಪ್ರಯಾಣವೆಚ್ಚದಲ್ಲೂ ಸುಳ್ಳು ಲೆಕ್ಕ ಬರೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
 
ಕಸಾಪ ತಾಲ್ಲೂಕು ಅಧ್ಯಕ್ಷರು ಒತ್ತಾಯ ಪೂರ್ವಕವಾಗಿ ನನ್ನಿಂದ ಖಾಲಿ ಚೆಕ್‌ಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ. ಮುಂದೆ ಹಣ ದುರ್ಬಳಕೆಯಾಗಿ ಜನರಿಗೆ ನಾನು ಉತ್ತರ ಹೇಳುವ ಪರಿಸ್ಥಿತಿ ಉಂಟಾಗಬಹುದು ಎಂಬ ಕಾರಣಕ್ಕಾಗಿ ವಿಚಾರವನ್ನು ಬಹಿರಂಗ ಪಡಿಸುತ್ತಿದ್ದು, ಇಂದಿನಿಂದ ಪರಿಷತ್‌ನ ಹಣಕಾಸಿನ ವಿಚಾರಗಳಿಗೂ ತಮಗೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಹೇಳಿದ್ದಾರೆ.
 
ಸಾಹಿತ್ಯ ಸಮ್ಮೇಳನಗಳಿಗೆ ಪ್ರತಿ ಗ್ರಾಮ ಪಂಚಾಯಿತಿಗಳು ₹ 5 ಸಾವಿರ ಹಣ ನೀಡಬೇಕು ಎಂದು ನಿರ್ಣಯ ಮಾಡಲಾಗಿದೆ. ಬರ ಪರಿಸ್ಥಿತಿಯಲ್ಲಿ ಗ್ರಾಮ ಪಂಚಾಯಿತಿಗಳು ಇಷ್ಟೊಂದು ಹಣವನ್ನು ವೆಚ್ಚ ಮಾಡುವುದು ಸರಿ ಯೇ? ಅಲ್ಲದೆ, ಅಧಿಕಾರಿಗಳು ಹಾಗೂ ಇಲಾಖೆಗಳ ಸಭೆ ನಡೆಸಿ ಇಂತಿಷ್ಟು ಹಣ ನೀಡಲೇ ಬೇಕು ಎಂದು ತಾಕೀತು ಮಾಡಲಾಗಿದೆ. ಹಣ ನೀಡಿದ ಅಧಿಕಾರಿ ಗಳು ಭ್ರಷ್ಟರಾಗದೇ ಉಳಿಯಲು ಸಾಧ್ಯವೇ ಅಥವಾ ಅವರ ವೇತನದಲ್ಲಿ ದುಬಾರಿ ಹಣವನ್ನು ಸಮ್ಮೇಳನಕ್ಕೆ ವಂತಿಗೆ ನೀಡಲು ಸಾಧ್ಯವೇ? ಹೀಗೆ ಹಣ ನೀಡಿದ ಅಧಿಕಾರಿಗಳಿಂದ ಪ್ರಾಮಾಣಿಕ ಕೆಲಸ ನಿರ್ವಹಿಸಲು ಸಾಧ್ಯವೇ? ಸಾಹಿತ್ಯ ಸಮ್ಮೇಳನವು ತಾಲ್ಲೂಕಿನಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ.
 
ಈಗಿನ ಸಮ್ಮೇಳನ ನಡೆಸಲು ಕೇವಲ ₹ 2 ಲಕ್ಷ ಹಣವಿದ್ದರೆ ಸಾಕು. ಸುಳ್ಳು ಲೆಕ್ಕಗಳ ಪರಿಣಾಮ ₹ 8 ಲಕ್ಷ ಹಣ ಬೇಕು ಎನ್ನಲಾಗುತ್ತದೆ. ಈ ಬಾರಿ ಹೆಸರಿಗೆ ಮಾತ್ರ ಎರಡು ದಿನದ ಸಮ್ಮೇಳನ ಎಂದು ಹೇಳಲಾಗುತ್ತಿದೆ. ಆದರೆ, ಸೋಮವಾರ ಸಂಜೆ ಪ್ರಾರಂಭವಾಗುವು ದರಿಂದ ಇದು ಕೇವಲ ಒಂದೇ ದಿನದ ಸಮ್ಮೇಳನವಾಗುತ್ತದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.