ADVERTISEMENT

ಗುಡುಗು ಸಹಿತ ಮಳೆ ಅಬ್ಬರ: ಕೊಂಚ ತಂಪು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 13:18 IST
Last Updated 21 ಏಪ್ರಿಲ್ 2017, 13:18 IST
ಚಿಕ್ಕಮಗಳೂರು ನಗರದಲ್ಲಿ ಶುಕ್ರವಾರ ಸುರಿಯುವ ಮಳೆಯಲ್ಲೇ ನರ್ಸಿಂಗ್‌ ವಿದ್ಯಾರ್ಥಿನಿಯರು ನೆನೆಯುತ್ತಾ ನಡೆದು ಹೋಗಿದ್ದು ಬಸವನಹಳ್ಳಿ ರಸ್ತೆಯಲ್ಲಿ ಕಂಡುಬಂತು. –ಪ್ರಜಾವಾಣಿ ಚಿತ್ರಗಳು
ಚಿಕ್ಕಮಗಳೂರು ನಗರದಲ್ಲಿ ಶುಕ್ರವಾರ ಸುರಿಯುವ ಮಳೆಯಲ್ಲೇ ನರ್ಸಿಂಗ್‌ ವಿದ್ಯಾರ್ಥಿನಿಯರು ನೆನೆಯುತ್ತಾ ನಡೆದು ಹೋಗಿದ್ದು ಬಸವನಹಳ್ಳಿ ರಸ್ತೆಯಲ್ಲಿ ಕಂಡುಬಂತು. –ಪ್ರಜಾವಾಣಿ ಚಿತ್ರಗಳು   

ಚಿಕ್ಕಮಗಳೂರು: ನಗರ ಹಾಗೂ ಸುತ್ತಮುತ್ತ ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಅರ್ಧ ತಾಸು ಗುಡುಗು, ಸಿಡಿಲು ಸಹಿತ ಜೋರು ಮಳೆ ಸುರಿಯಿತು.

ಮಧ್ಯಾಹ್ನ ಸುಮಾರು 1.40ಕ್ಕೆ ಆರಂಭವಾದ ಮಳೆ 2.10ರವರೆಗೂ ಆರ್ಭಟಿಸಿತು. ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು.

ಮಳೆ ಸುರಿಯುತ್ತಿದ್ದಾಗ ಎಂ.ಜಿ.ರಸ್ತೆಯಲ್ಲಿ ಯುವತಿ ಛತ್ರಿ ಹಿಡಿದು ನಡೆದು ಹೋಗಿದ್ದು ಹೀಗೆ.

ADVERTISEMENT

ಮಳೆಯ ಅಬ್ಬರಕ್ಕೆ ರಸ್ತೆ ತುಂಬಾ ಕ್ಷಣ ಮಾತ್ರದಲ್ಲಿ ಮಳೆ ನೀರು ಹರಿಯಿತು. ಬಿಸಿಲ ಝಳಕ್ಕೆ ಕಾದಿದ್ದ ನೆಲವೂ ಮಳೆಗೆ ಕೊಂಚ ತಂಪಾಗಿದೆ.

ಮಳೆ ಕೊರತೆಯಿಂದ ಕಾಫಿ ತೋಟಗಳು ಒಣಗಿ ನಿಂತಿವೆ. ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿ ಜನರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.