ADVERTISEMENT

ಜನರಿಕ್‌ ಔಷಧ ಮಳಿಗೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 9:00 IST
Last Updated 22 ಜೂನ್ 2017, 9:00 IST

ಮೂಡಿಗೆರೆ: ಎಂಜಿಎಂ ಆಸ್ಪತ್ರೆಯಲ್ಲಿ ಒಂದು ವರ್ಷದಿಂದ ತಿಕ್ಕಾಟಕ್ಕೆ ಒಳಗಾಗಿದ್ದ ಜನರಿಕ್‌ ಔಷಧ ಮಳಿಗೆಗೆ ಶನಿವಾರ ಚಾಲನೆ ನೀಡಲಾಯಿತು. ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾಜಿ ಸಂಸದ ಡಿ.ಎಂ. ಪುಟ್ಟೇಗೌಡ ಜನರಿಕ್‌ ಔಷಧ ಮಳಿಗೆ ಉದ್ಘಾಟಿಸಿದರು.

ಎಂಜಿಎಂ ಆಸ್ಪತ್ರೆ ಆವರಣದಲ್ಲಿ ಟಿಎಪಿಸಿಎಂಎಸ್‌ ಔಷಧ ಮಳಿಗೆಯಿದ್ದು, ವೈದ್ಯರ ವಸತಿ ಗೃಹ ನಿರ್ಮಿಸುವ ಸಲುವಾಗಿ ಮಳಿಗೆಯನ್ನು ತೆರವುಗೊಳಿಸಲಾಗಿತ್ತು. ಇದೀಗ ಆಸ್ಪತ್ರೆ ಆವರಣದಲ್ಲಿಯೇ ಸ್ಥಾಪಿಸಿರುವುದರಿಂದ ಟಿಎಪಿಸಿಎಂಎಸ್‌ ಮಳಿಗೆ ಸ್ಥಾಪನೆ ಮಾಡಬಾರದು ಎಂಬ ವಿಚಾರ ಚರ್ಚೆ ನಡೆಸಲಾಯಿತು.

ಈ ಹಿಂದೆ ಉದ್ದೇಶಪೂರ್ವಕವಾಗಿ ಯೇ ಪಟ್ಟಣಕ್ಕೆ ಮಳಿಗೆ ಸ್ಥಾಪಿಸುತ್ತಿಲ್ಲ ಎಂಬ ವಾದ ಸಾರ್ವಜನಿಕ ವಲಯದಲ್ಲಿ ಮೂಡಿ, ವಿವಿಧ ಸಂಘಟನೆಗಳು ಪ್ರತಿ ಭಟನೆ ನಡೆಸಿ ಸ್ಥಾಪಿಸುವಂತೆ ಒತ್ತಾಯಿಸಿದ್ದರು. ಇದೀಗ ಜನರಿಕ್ ಔಷಧ ಮಳಿಗೆ ಸ್ಥಾಪಿಸಿರುವುದಕ್ಕೆ ಸಾರ್ವಜನಿಕರು ಸಂತಸ ವ್ಯಕ್ತ ಪಡಿಸಿದ್ದಾರೆ.

ADVERTISEMENT

ಶಾಸಕರಾದ ಬಿ.ಬಿ.ನಿಂಗಯ್ಯ, ಎಂ.ಕೆ.ಪ್ರಾಣೇಶ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್‌, ವೈದ್ಯ ರಾದ ಡಾ.ಅನಂತ ಪದ್ಮನಾಭ, ಕೆ.ಎಚ್. ವೆಂಕಟೇಶ್‌, ಬಿ.ಎಂ.ರಾಮಕೃಷ್ಣ, ಬಣಕಲ್‌ ಶ್ಯಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.