ADVERTISEMENT

ಡಿಸಿ ಕಚೇರಿ ಸುತ್ತ ನಿಷೇಧಾಜ್ಞೆ

200 ಮೀಟರ್‌ ವ್ಯಾಪ್ತಿ: ಹೆಚ್ಚುವರಿ ಜಿಲ್ಲಾಧಿಕಾರಿ ಆದೇಶ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:54 IST
Last Updated 18 ಜನವರಿ 2017, 5:54 IST
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯ ಒಂದು ನೋಟ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯ ಒಂದು ನೋಟ.   

ಚಿಕ್ಕಮಗಳೂರು: ಜಿಲ್ಲಾಧಿಕಾರಿ ಕಚೇರಿಗೆ ಹೊಂದಿಕೊಂಡ ಕಟ್ಟಡಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿ ಕಾರ್ಯಾಲಯವು ಜಿಲ್ಲಾ ಕೇಂದ್ರದಲ್ಲಿ ಅತೀ ಪ್ರಮುಖ ಕಾರ್ಯ ಕೇಂದ್ರ.ಈ ಕಚೇರಿಗೆ ಅನೇಕ ಗಣ್ಯ ವ್ಯಕ್ತಿಗಳು, ಸಾರ್ವಜನಿಕರು ಕಚೇ ರಿಯ ಕೆಲಸದ ವೇಳೆಯಲ್ಲಿ ಕಚೇರಿಗೆ ಭೇಟಿ ನೀಡುತ್ತಿರುತ್ತಾರೆ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ವಿವಿಧ ಕಚೇರಿ ಗಳು ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಕೂಡ ಇದೆ. ಈ ಕಟ್ಟಡಗಳ ಮುಂದೆ ಸಾರ್ವಜನಿಕರ ಮತ್ತು ವಾಹನಗಳ ಸಂಚಾರಕ್ಕೆ ರಸ್ತೆ ಸಂಪರ್ಕವಿದೆ.

ಮುಷ್ಕರ ನಿರತರು ರಸ್ತೆ ಅಂಚಿನಲ್ಲಿ ಟೆಂಟ್ ಹಾಕುವುದು, ರಸ್ತೆಯ ಮಧ್ಯೆ ಕುಳಿತು ಕೊಂಡು ಪ್ರತಿಭಟನೆ ನಡೆಸುವುದರಿಂದ ಸುಗಮ ಸಂಚಾರಕ್ಕೆ ಅಡಚಣೆ ಉಂಟಾ ಗುತ್ತಿದೆ. ಅಲ್ಲದೆ, ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತದೆ. ಸರ್ಕಾರಿ ಕಾರ್ಯಕಲಾಪಗಳ ಸುಗಮ ನಿರ್ವಹಣೆ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಆದೇಶ ಹೊರಡಿಸಿದ್ದಾರೆ.

ಯಾವುದೇ ಮನವಿಯನ್ನು ಜಿಲ್ಲಾಧಿ ಕಾರಿಗಳಿಗೆ ನೀಡುವ ಅವಶ್ಯಕತೆ ಇದ್ದಲ್ಲಿ, ನಿರಶನ ವ್ಯಕ್ತಿಗಳ ಪರವಾಗಿ ಗರಿಷ್ಠ 5 ಜನ ಪ್ರತಿನಿಧಿಗಳು ಕಚೇರಿಯೊಳಗೆ ಬಂದು ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಕಚೇರಿ, ಸಹಾಯಕರು, ಇತರೆ ಅಧಿಕಾರಿ ಗಳಿಗೆ ಮನವಿ ಸಲ್ಲಿಸಲು ಅವಕಾಶವಿದೆ.

ಧರಣಿ, ಸತ್ಯಾಗ್ರಹ, ಪ್ರತಿಭಟನೆ ಬೇಡಿಕೆಗಳ ಮನವಿಯನ್ನು ಸಲ್ಲಿಸುವ ವರು 3 ದಿನ  ಮುಂಚಿತವಾಗಿ ಪೊಲೀಸ್‌ ಇಲಾಖೆಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಇದು ಮೇಲ್ಕಾಣಿಸಿದ ವ್ಯಾಪ್ತಿಯ ನಿಬಂಧನೆಗಳಿಗೆ ಒಳಪಟ್ಟಿರಬೇಕು. ಧರಣಿ, ಸತ್ಯಾಗ್ರಹ, ಪ್ರತಿಭಟನೆ ಬೇಡಿಕೆಗಳ ಮನವಿಯನ್ನು ಸಲ್ಲಿಸು ವವರು ಧ್ವನಿವರ್ಧಕಗಳನ್ನು ಬಳಸುವು ದನ್ನು ನಿಷೇಧಿಸಿದೆ. ಅಲ್ಲದೆ ನಿಷೇಧಿಸಿದ ಪ್ರದೇಶದ ವ್ಯಾಪ್ತಿಯಲ್ಲಿ ಶಾಮಿಯಾನ, ಟೆಂಟ್ ಇತ್ಯಾದಿ ಹಾಕುವುದನ್ನು ನಿರ್ಬಂಧಿಸಿದೆ ಎಂದು ತಿಳಿಸಿದ್ದಾರೆ.

ಕಿಗ್ಗಾ: ವಾಹನ ನಿಲುಗಡೆ ನಿಷೇಧ
ಚಿಕ್ಕಮಗಳೂರು: ಶೃಂಗೇರಿ ತಾಲ್ಲೂಕು ಮರ್ಕಲ್ ಗ್ರಾಮದ ಕಿಗ್ಗಾ ದಾಖಲೆ ಗ್ರಾಮ ದಲ್ಲಿರುವ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯದ ದ್ವಾರದ ಮುಂಭಾ ಗದಿಂದ 15 ಮೀಟರ್ ವರೆಗಿನ ಪ್ರದೇಶವನ್ನು ವಾಹನ ನಿಲುಗಡೆ ನಿಷೇ ಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ಧಿಕಾರಿ ಬಿ. ಸತ್ಯವತಿ ಆದೇಶಿಸಿದ್ದಾರೆ.

ಋಷ್ಯಶಂಗೇಶ್ವರ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ದಿನನಿತ್ಯ ಯಾತ್ರಿಗಳು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಯಾತ್ರಾತ್ರಿಗಳು, ಸಾರ್ವಜನಿಕರು ತಮ್ಮ ತಮ್ಮ ವಾಹನಗಳನ್ನು ದೇವಾಲಯದ ಮುಂಭಾಗ ನಿಲುಗಡೆ ಮಾಡುತ್ತಿದೆ.

ADVERTISEMENT

ಇದರಿಂದ ಸಂಚಾರ ವ್ಯವಸ್ಥೆ ಹದಗೆಟ್ಟಿದೆಯಲ್ಲದೆ, ರಸ್ತೆಗಳು ಕಿರಿದಾಗಿದ್ದು, ದೇವಸ್ಥಾನ ದ್ವಾರದ ಪಕ್ಕದಲ್ಲಿಯೇ ಸಿರಿಮನೆ ಫಾಲ್ಸ್‌ಗಳಿಗೆ ಬರುವ ಯಾತ್ರಾತ್ರಿಗಳಿಗೆ, ಆ ಭಾಗದ ಗ್ರಾಮಗಳಿಗೆ ಬರುವ ಖಾಸಗಿ ವಾಹನ ಸಂಚಾರಕ್ಕೂ ತೊಂದರೆ ಯಾಗುತ್ತಿತ್ತು. ಈ ಕಾರಣಕ್ಕೆ ವಾಹನ ನಿಲುಗಡೆ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.