ADVERTISEMENT

ದುಬೈ ಶಾಪಿಂಗ್‌ ಸೆಂಟರ್‌ ಬಾಗಿಲು ಬಂದ್‌

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 9:36 IST
Last Updated 8 ಜುಲೈ 2017, 9:36 IST

ಚಿಕ್ಕಮಗಳೂರು: ಕಂದಾಯ ಪಾವತಿ ಸಿಲ್ಲ, ವ್ಯಾಪಾರ ಪರವಾನಗಿ ಹೊಂದಿಲ್ಲ ಎಂಬ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗದ ದುಬೈ ಶಾಪಿಂಗ್‌ ಸೆಂಟರ್‌ ಬಾಗಿಲನ್ನು ಶುಕ್ರವಾರ ಮುಚ್ಚಿಸಲಾಗಿದೆ.

ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್‌ ಅವರು ಅಧಿಕಾರಿಗಳೊಂದಿಗೆ ಕಾರ್ಯಾ ಚರಣೆ ನಡೆಸಿ ಐಜಿ ರಸ್ತೆಯಲ್ಲಿ ಎರಡು ಮಳಿಗೆಗಳ ವ್ಯಾಪಾರ ಪರವಾನಗಿ, ಕಂದಾಯ ಶುಲ್ಕ ಪಾವತಿ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

ಕವಿತಾ ಶೇಖರ್‌  ಮಾತನಾಡಿ, ‘ಪರಿಶೀಲನೆ ವೇಳೆ ದುಬೈ ಶಾಪಿಂಗ್‌ ಸೆಂಟರ್‌ ಅವರು ಕಂದಾಯ ಪಾವತಿ ರಸೀತಿ, ಪರವಾನಗಿ ಪತ್ರ ತೋರಿಸಿಲ್ಲ. ಹೀಗಾಗಿ ಮಳಿಗೆ ಬಾಗಿಲು ಮುಚ್ಚಿಸಲಾಗಿದೆ. ಇನ್ನೊಂದು ಅಂಗಡಿಯವರು ಕಳೆದ ವರ್ಷದ ದಾಖಲೆ ತೋರಿಸಿದರು. ಈಗಿನ ದಾಖಲೆ ಗಳನ್ನು ಸೋಮವಾರ ಹಾಜರುಪಡಿಸಬೇಕು ಎಂದು ಅವರಿಗೆ ಸೂಚನೆ ನೀಡಲಾಗಿದೆ’ ಎಂದರು.

ADVERTISEMENT

‘ನಗರ ಪ್ರದಕ್ಷಿಣೆ ಮಾಡಿ ನಗರ ಸಭೆಯ ಆಸ್ತಿಗಳನ್ನು ವಿವಿಧೆಡೆ ಅತಿಕ್ರ ಮಣ ಮಾಡಿರುವ ಬಗ್ಗೆ ಪರಿಶೀಲಿ ಸಲಾಯಿತು. ನಾಲ್ಕೈದು ಸ್ಥಳಗಳನ್ನು ಗುರುತಿಸಲಾಗಿದೆ’ ಎಂದರು.
ಉಪಾಧ್ಯಕ್ಷ ರವೀಂದ್ರ ಪ್ರಭು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.