ADVERTISEMENT

ನೆಪಮಾತ್ರದ ಗ್ರಾಮ ವಾಸ್ತವ್ಯ: ಟೀಕೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 5:54 IST
Last Updated 11 ನವೆಂಬರ್ 2017, 5:54 IST

ಕಳಸ: ಇಲ್ಲಿಗೆ ಸಮೀಪದ ಸಂಸೆ ಗ್ರಾಮದ ಗುಳ್ಯದಲ್ಲಿ ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ ನಡೆಸಿದ ಗ್ರಾಮ ವಾಸ್ತವ್ಯ ಕೇವಲ ರಾಜಕೀಯ ಕಾರಣಕ್ಕೆ ನಡೆದಿದೆಯೇ ಹೊರತು, ಜನರ ಸಂಕಷ್ಟ ಪರಿಹರಿಸುವ ಉದ್ದೇಶದಿಂದ ಅಲ್ಲ ಎಂದು ಗುಳ್ಯ ಮತ್ತು ಶುಂಠಿಕುಂಬ್ರಿಯ ಕೆಲ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೆಲ ಕಾರ್ಯಕರ್ತರ ಮನೆಗೆ ಭೇಟಿ ನೀಡುವುದಕ್ಕೆ ಗ್ರಾಮವಾಸ್ತವ್ಯವನ್ನು ಅಧ್ಯಕ್ಷರು ಆಯೋಜಿಸಿದ್ದಾರೆ. ಗ್ರಾಮಸ್ಥರ ಯಾವ ಸಮಸ್ಯೆ ಆಲಿಸುವ ವ್ಯವಧಾನವೂ ಅವರಿಗೆ ಇರಲಿಲ್ಲ ಎಂದು ಗ್ರಾಮಸ್ಥರಾದ ಸುಬ್ರಮಣ್ಯ, ಚಂದ್ರಪ್ಪ, ಪ್ರಭಾಕರ್ ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.

ಶುಂಠಿಕುಂಬ್ರಿ, ಜೋಗಿಕುಂಬ್ರಿ ಮತ್ತು ಗುಳ್ಯದ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಬಳಿ ಸಮಸ್ಯೆ ವಿವರಿಸಲು ಹೋದಾಗ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ. ರತನ್‌ ತಡೆದರು. ಇದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಯಾವುದೇ ಚರ್ಚೆಗೆ ಆಸ್ಪದ ಇಲ್ಲ ಎಂದು ಉಡಾಫೆಯಿಂದ ತಿರಸ್ಕರಿಸಿದರು ಎಂದು ಗ್ರಾಮಸ್ಥರು ಬೇಸರಿಸಿದ್ದಾರೆ.

ADVERTISEMENT

ಶುಂಠಿಕುಂಬ್ರಿಯಲ್ಲೂ ಅನೇಕ ಗಿರಿಜನರು ಇದ್ದರೂ ದಾರಿಯಲ್ಲೇ ಇರುವ ಆ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭೇಟಿ ನೀಡಲಿಲ್ಲ. ತಾಲ್ಲೂಕು ಪಂಚಾಯಿತಿ ಸದಸ್ಯೆ ಮೀನಾಕ್ಷಿ ಕೂಡ ಚೈತ್ರಶ್ರೀ ಅವರನ್ನು ಗುಳ್ಯಕ್ಕೆ ಕರೆದುಕೊಂಡು ಹೋಗಲು ಮಾತ್ರ ಆಸಕ್ತಿ ತೋರಿದರು ಎಂದೂ ಗ್ರಾಮಸ್ಥರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.