ADVERTISEMENT

ಮಲೆನಾಡಿಗೆ ಕಸ್ತೂರಿರಂಗನ್ ವರದಿ ಅವಶ್ಯಕತೆಯಿಲ್ಲ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 7:47 IST
Last Updated 20 ಏಪ್ರಿಲ್ 2017, 7:47 IST
ಶೃಂಗೇರಿ ತಾಲ್ಲೂಕಿನ ತೆಕ್ಕೂರು ಗ್ರಾಮ ಪಂಚಾಯಿತಿಯಲ್ಲಿ ಕಸ್ತೂರಿರಂಗನ್ ವರದಿ ವಿರೋಧಿಸಿ ಮಂಗಳವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಶಿವಶಂಕರ್ ಮನವಿ ಸಲ್ಲಿಸಿದರು.
ಶೃಂಗೇರಿ ತಾಲ್ಲೂಕಿನ ತೆಕ್ಕೂರು ಗ್ರಾಮ ಪಂಚಾಯಿತಿಯಲ್ಲಿ ಕಸ್ತೂರಿರಂಗನ್ ವರದಿ ವಿರೋಧಿಸಿ ಮಂಗಳವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಶಿವಶಂಕರ್ ಮನವಿ ಸಲ್ಲಿಸಿದರು.   

ಶೃಂಗೇರಿ: ‘ಕಸ್ತೂರಿರಂಗನ್ ವರದಿ ಜಾರಿಗೆ ಬಂದಲ್ಲಿ ಮಲೆನಾಡಿನವರು ಭವಿಷ್ಯದಲ್ಲಿ ಈ ನೆಲದಲ್ಲಿ ಜೀವನ ನಿರ್ವಹಿಸುವುದು ಕಷ್ಟಕರವಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಶಿವಶಂಕರ್ ಅಭಿಪ್ರಾಯಪಟ್ಟರು.ಕಸ್ತೂರಿರಂಗನ್ ವರದಿ ವಿರೋಧಿಸಿ ತಾಲ್ಲೂಕಿನ ತೆಕ್ಕೂರು ಗ್ರಾಮ ಪಂಚಾ ಯಿತಿ ಜನಪ್ರತಿನಿಧಿಗಳು ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ಹಸಿರು ಇಲ್ಲಿನ ಜನರ ಉಸಿರು. ಮಲೆನಾಡನ್ನು ನಾಶ ಮಾಡಲು ಹೊರಟ ಅಂತರರಾಷ್ಟ್ರೀಯ ಪರಿಸರವಾದಿಗಳು ಎಂದು ಪೋಷಿಸುವರ ವಿರುದ್ಧ ಎಲ್ಲರೂ ಹೋರಾಡಬೇಕು. ಕೆರೆಕಟ್ಟೆಯ ರಾಷ್ಟ್ರೀ ಯ ಹೆದ್ದಾರಿಯ 21ಕಿ.ಮೀ ರಸ್ತೆಗೆ ಬೇಕಾ ಗುವ ನಾಲ್ಕೂವರೆ ಅಡಿ ಜಾಗವನ್ನು ಬಿಟ್ಟುಕೊಡಲು ಅರಣ್ಯ ಇಲಾಖೆ ತಡೆ ಹಿಡಿದಿದೆ’ ಎಂದು ಆರೋಪಿಸಿದರು.
‘ಈ ರಸ್ತೆಯಲ್ಲಿ ನಿರಂತರ ಅಪಘಾ ತಗಳು ಸಂಭವಿಸುತ್ತಿದ್ದು, ಕೆಲವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಬಗ್ಗೆ ಸರ್ಕಾರ ಕೂಡಲೇ ಕ್ರಮ ತೆಗೆದುಕೊ ಳ್ಳಬೇಕು. ಮಲೆನಾಡಿನ ಮೌಲ್ಯವನ್ನು ನಮಗೆ ನೀಡಲು ಸರ್ಕಾರ ಜವಾಬ್ದಾರಿ ಯನ್ನು ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಪಶ್ಚಿಮಘಟ್ಟ ಉಳಿದರೆ ಕರ್ನಾಟಕ ರಾಜ್ಯ ಉಳಿದಂತೆ ಎಂಬುದು ಸತ್ಯ. ಇಲ್ಲಿರುವ ಅರಣ್ಯಗಳು ಉಳಿಯಬೇಕು. ತೋಟಗಳು ಬೆಳೆಯಬೇಕು. ಅಭಯಾ ರಣ್ಯದಲ್ಲಿ ಒಕ್ಕಲೆಬ್ಬಿಸುವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ತೆಕ್ಕೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೊಚ್ಚವಳ್ಳಿ ನಾಗೇಶ್, ಸದಸ್ಯ ರಾದ ಪ್ರೇಮ್ ಕುಮಾರ್, ಕೃಷಿಕ ಹಾಲಪ್ಪಗೌಡ, ಎಪಿಎಂಸಿ ಅಧ್ಯಕ್ಷ ರಮೇಶ್‌ಭಟ್‌, ಗ್ರಾಮಸ್ಥರಾದ ಟಿ.ಟಿ. ಕಳಸಪ್ಪ, ತೆಕ್ಕೂರು ರಾಜಶೇಖರ್ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.