ADVERTISEMENT

‘ಮೀನುಗಾರರ ಸಮಸ್ಯೆ ಬಗೆಹರಿಸಲು ಒಪ್ಪಿಗೆ’

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 8:37 IST
Last Updated 17 ಜನವರಿ 2017, 8:37 IST
‘ಮೀನುಗಾರರ ಸಮಸ್ಯೆ ಬಗೆಹರಿಸಲು ಒಪ್ಪಿಗೆ’
‘ಮೀನುಗಾರರ ಸಮಸ್ಯೆ ಬಗೆಹರಿಸಲು ಒಪ್ಪಿಗೆ’   

ನರಸಿಂಹರಾಜಪುರ: ತಾಲ್ಲೂಕಿನ ಭದ್ರಾಹಿನ್ನೀರು ವ್ಯಾಪ್ತಿಯ ರಾವೂರು ಗ್ರಾಮದ ಶಿಳ್ಳೇಕ್ಯಾತ ನಿವಾಸಿಗಳ ಸಮಸ್ಯೆ ಗಳನ್ನು ಬಗೆಹರಿಸಲು ಮೀನುಗಾರಿಕೆ ಸಚಿವ ಪ್ರಮೋದ್‌ ಮಧ್ವರಾಜ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ರಾಜ್ಯ ಅನಿವಾಸಿ ಭಾರತೀಯ ನಿಗಮದ ಉಪಾಧ್ಯಕ್ಷೆ ಆರತಿಕೃಷ್ಣ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ತಾಲ್ಲೂಕಿನ ರಾವೂರು ಗ್ರಾಮ ದಲ್ಲಿ 1,500 ಸಾವಿರ ಕುಟುಂಬ ವಾಸ ವಾಗಿದ್ದು  ಮೀನುಗಾರಿಕೆ ವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ.

ಆದರೆ ಭದ್ರಾಹಿನ್ನೀರಿಗೆ ಮೀನು ಮರಿ ಬಿಡುವ ಪ್ರಮಾಣ ಕಡಿಮೆ ಯಾಗಿರು ವುದರಿಂದ, ಮಳೆ ಕಡಿಮೆಯಾಗಿರುವು ದರಿಂದ ಮುಂತಾದ ಕಾರಣಗಳಿಂದ ಮೀನುಗಾರಿಕೆ ಬಿಟ್ಟು ಸಾಕಷ್ಟು ಕುಟುಂಬ ಗಳು ತಾಲ್ಲೂಕಿನ ಹಂದೂರು ಗ್ರಾಮದ ಸರ್ವೆ ನಂ 6, ಬಿಳಾಲುಕೊಪ್ಪ ಗ್ರಾಮದ ಸರ್ವೆ ನಂ. 45ರ ಕಂದಾಯ ಭೂಮಿ ಯನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಿ ಕೊಂಡು ಬಂದಿದ್ದಾರೆ. ಈ ಜಮೀನು ಮಂಜೂರಾತಿ ಮಾಡಿ ಕೊಡುವಂತೆ ಸಂಬಂಧ ಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಇವರಿಗೆ ಜಮೀನು ಮಂಜೂರಾಗಿಲ್ಲ.

ಹಾಗಾಗಿ ಅನಧಿಕೃತ ಸಾಗುವಳಿಯ ಜಮೀನನ್ನು ಸಕ್ರಮ ಗೊಳಿಸಿ ಕಾಯಂ ಸಾಗುವಳಿ ಚೀಟಿ ನೀಡುವಂತೆ  ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು ಈ ಬಗ್ಗೆ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿ ಸೂಚಿಸಿದ್ದಾರೆಂದು ತಿಳಿಸಿದ್ದಾರೆ.

ಸಕಾಲಕ್ಕೆ ಮೀನು ಮರಿ ಬಿಡಲು ಸಮ್ಮತಿ: ಭದ್ರಾ ಅಣೆಕಟ್ಟಿಗೆ ಸಕಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉತ್ತಮ ತಳಿಯ ಮೀನು ಮರಿ ಬಿಡದಿರುವುದರಿಂದ ಸಂತಾನೋತ್ಪತ್ತಿಯಾಗದೆ ಮೀನುಗಾರಿಕೆ ನಡೆಸುವುದು ಕಷ್ಟವಾಗಿದೆ. ಭದ್ರಾ ಹಿನ್ನೀರಿಗೆ 2009ರಲ್ಲಿ 1.40 ಕೋಟಿ ಮೀನು ಮರಿಗಳನ್ನು  ಬಿಟ್ಟಿದ್ದು ಬಿಟ್ಟರೆ ನಂತರದ ದಿನಗಳಲ್ಲಿ ಕೇವಲ 12,15 ಲಕ್ಷ ಮೀನುಮರಿಗಳನ್ನು ಬಿಡಲಾಗಿತ್ತು. ಇದರಿಂದ ಮೀನುಗಾರಿಕೆ ನಂಬಿದವರು ಬದುಕು ನಡೆಸುವುದೇ ಕಷ್ಟವಾಗಿತ್ತು.

ಹಾಗಾಗಿ ಪ್ರತಿ ವರ್ಷ ಕನಿಷ್ಠ 1ಕೋಟಿ ಗಿಂತ ಅಧಿಕ ಮೀನುಮರಿಗಳನ್ನು ಬಿಡಬೇಕು. ಮೀನುಗಾರಿಕೆ ಶುಲ್ಕವನ್ನು ₹1ಸಾವಿರಕ್ಕೆ ನಿಗದಿಪಡಿಸಬೇಕೆಂದು ಮೀನುಗಾರರು ಮನವಿ ಮಾಡಿ ದ್ದರು. ಇದನ್ನುಸಚಿವರ ಗಮನಕ್ಕೆ ತರಲಾಗಿದ್ದು  ಸೂಕ್ತ ಕ್ರಮಕೈಗೊಳ್ಳುವಂತೆ ಮೀನು ಗಾರಿಕೆ ನಿರ್ದೇಶಕರಿಗೆ ಸೂಚಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT