ADVERTISEMENT

ಲಿಂಗದಹಳ್ಳಿಯಲ್ಲಿ ನೀರಿಗೆ ಭೀಕರ ಬರ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 6:08 IST
Last Updated 15 ಮಾರ್ಚ್ 2017, 6:08 IST

ತರೀಕೆರೆ: ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯಲ್ಲಿ ಕೆಲವು ತಿಂಗಳಿಂದ ಕಂಡು ಬಂದ ಭೀಕರ ಬರದಿಂದಾಗಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದ್ದು, ಜನ ಹಾಗೂ ಜಾನುವಾರು ನೀರಿಲ್ಲದೇ ಸಂಕಷ್ಟ ಅನುಭವಿಸುವಂತಾಗಿದೆ. ಜನ ಪ್ರತಿನಿಧಿಗಳು ಹಾಗೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಲಿಂಗದಹಳ್ಳಿ  ಹೋಬಳಿಯಲ್ಲಿ ಬರುವ 7 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ನೀರೊದಗಿಸುವ ಕಲ್ಲತ್ತಿಗಿರಿ, ಕೊಂಡೆಖಾನ್ ಹಳ್ಳ ಹಾಗೂ ಭೀಮನಹಳ್ಳದಲ್ಲಿ ನೀರು ಬತ್ತಿದ್ದು, ಇದರಿಂದಾಗಿ ಗ್ರಾಮಗಳ ಜನತೆ ಹಾಗೂ ಜಾನುವಾರು ಕುಡಿಯುವ ನೀರಿಲ್ಲದೇ ತುಂಬಾ ತೊಂದರೆ ಅನುಭವಿಸುತ್ತಿವೆ.  ಕೆಲವು ಕಡೆ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ಹಾಗೂ ಸರ್ಕಾರದಿಂದ ಕೊಳವೆ ಬಾವಿ ಕೊರೆಸಿದ್ದರು. ಕೆಲವೊಂದು ಕೊಳವೆ ಬಾವಿಗಳು ಸಂಪೂರ್ಣ ವಿಫಲವಾಗಿವೆ. 500-600 ಅಡಿಯವರೆಗೂ ಕೊಳವೆ ಬಾವಿ ಕೊರೆಸಿ ದರು ಅಂತರ್ಜಲ ಬತ್ತಿರುವು ದರಿಂದ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ.

ಬರಗಾಲದಿಂದಾಗಿ ಜಾನುವಾರು ಮೇವಿಲ್ಲದೇ ನೀರನ್ನು ಕುಡಿದು ಹೊಟ್ಟೆ ತುಂಬಿಸಿಕೊಳ್ಳಲು ಯತ್ನಿಸಿದರೂ ಕೆರೆ ಕಟ್ಟೆಗಳೆಲ್ಲ ಬತ್ತಿ ಹೋಗಿರುವುದರಿಂದ ಗ್ರಾಮ ವ್ಯಾಪ್ತಿಗಳಲ್ಲಿ ನಿರ್ಮಿಸಿರುವ ನೀರಿನ ತೊಟ್ಟಿಗಳಲ್ಲಿಯೂ ಸಹ ವಿದ್ಯುತ್ ಅಭಾವದಿಂದಾಗಿ ನೀರು ಪೂರೈಕೆಯಾ ಗದೇ ಜಾನುವಾರು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿವೆ.

ADVERTISEMENT

ರೈತರು ದನ ಕರುಗಳಿಗೆ ನೀರು, ಮೇವು ಒದಗಿಸಲಾರದೇ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜನತೆಗೆ ಕುಡಿಯುವ ನೀರು ಒದಗಿಸುವಲ್ಲಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿ ಗಳು ವಿಫಲರಾಗಿದ್ದು, ಜನರ ಜಾನುವಾ ರುಗಳ ಗೋಳು ಕೇಳದಂತಾಗಿದೆ.

ಜನಪ್ರತಿನಿಧಿಗಳು  ಹಾಗೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಜಾನುವಾರುಗಳಿ ಗಾದರೂ ಕುಡಿಯುವ ನೀರನ್ನಾದರೂ ಒದಗಿಸಿ ಜೀವ ಉಳಿಸಿಕೊಳ್ಳಲು ಸಹಕರಿಸಬೇಕು. ಪರಿಸ್ಥಿತಿ ಹೀಗೆ ಮುಂದುವರಿದರೆ ಉಗ್ರ ಹೋರಾಟ ನಡೆಸಬೇಕಾಗುವುದು ಎಂದು ಸಾರ್ವಜನಿಕರು ತಾಲ್ಲೂಕು ಹಾಗೂ ಜಿಲ್ಲಾ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.