ADVERTISEMENT

ವಿಶ್ವನಾಥ್‌ಗಿರುವ ಮರ್ಯಾದೆ ಹಂಚಿಕೊಳ್ಳೋಣ

ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 5:05 IST
Last Updated 4 ಫೆಬ್ರುವರಿ 2017, 5:05 IST
ವಿಶ್ವನಾಥ್‌ಗಿರುವ ಮರ್ಯಾದೆ ಹಂಚಿಕೊಳ್ಳೋಣ
ವಿಶ್ವನಾಥ್‌ಗಿರುವ ಮರ್ಯಾದೆ ಹಂಚಿಕೊಳ್ಳೋಣ   
ಚಿಕ್ಕಮಗಳೂರು: ‘ಎಚ್‌.ವಿಶ್ವನಾಥ್‌ ಅವರಿಗೆ ಮಾನ, ಮರ್ಯಾದೆ ಇದೆಯಲ್ಲ ಸಾಕು. ಅದರಲ್ಲೇ ಹಂಚಿಕೊಳ್ಳೋಣ’ ಎಂದು  ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ವ್ಯಂಗ್ಯವಾಡಿದರು.
 
ನಗರದಲ್ಲಿ ಶುಕ್ರವಾರ ಕೆಡಿಪಿ ಸಭೆಗೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್‌ ಅವರ ಟೀಕೆಗೆ ಈ ರೀತಿ ಪ್ರತ್ಯುತ್ತರ ನೀಡಿದರು. ‘ಎಸ್‌.ಎಂ.ಕೃಷ್ಣ ಪಕ್ಷದ ಹಿರಿಯ ಮುಖಂಡರು. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ನಾನು ಮತ್ತು ಡಿ.ಕೆ.ಶಿವಕುಮಾರ್‌ ಸೇರಿದಂತೆ ಪಕ್ಷದ ಮುಖಂಡರು ಅವರ ಮನವೊಲಿಸುವ ಪ್ರಕ್ರಿಯೆ ನಡೆಸುತ್ತಿದ್ದೇವೆ. ಈಗಾಗಲೇ ಪಕ್ಷದ ರಾಷ್ಟ್ರೀಯ ಮುಖಂಡರ ಗಮನಕ್ಕೂ ತಂದಿದ್ದು, ಅವರು ಕೂಡ ಕೃಷ್ಣ ಅವರ ಮನವೊಲಿಸುತ್ತಿದ್ದಾರೆ’ ಎಂದರು.
 
ಉಗಾಂಡ ಯುವತಿ ಹತ್ಯೆ ಪ್ರಕರ ಣದ ಆರೋಪಿ ವಶಕ್ಕೆ ಪಡೆಯಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಆಪಾದನೆ ನಿಜವಾಗಿದ್ದರೆ ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
 
ಬೆಂಗಳೂರಿನ ಹೆಬ್ಬಾಳದ ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ಮೇಲೆ ಪ್ರಾಂಶುಪಾಲ ಕುಮಾರ್‌ ಠಾಕೂರ್‌ ಲೈಂಗಿಕ ದೌರ್ಜನ್ಯ ನಡೆಸಿರುವ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪ ಸಾಬೀತಾದರೆ ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇವೆ. ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಅವರು ಪ್ರಕರಣ ಮುಚ್ಚಿಡುವ ಪ್ರಯತ್ನ ಮಾಡಿಲ್ಲ. ಪ್ರಕರಣ ಬಯಲಿಗೆ ತಂದಿದ್ದೇ ಅವರು. ವಿದ್ಯಾರ್ಥಿಗಳು ಮತ್ತು ಪೋಷಕರ ಹೇಳಿಕೆ ಪಡೆಯಬೇಕಾಗಿದೆ. ತನಿಖೆ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದರು.
 
**
‘ನಾನು ಮುಖ್ಯಮಂತ್ರಿ ಆಗಬೇಕೆಂಬ ಅಪೇಕ್ಷೆ ಇರುವುದು ಜನಾರ್ದನ ಪೂಜಾರಿಗಷ್ಟೆ, ನನಗಲ್ಲ.
-ಡಾ.ಜಿ. ಪರಮೇಶ್ವರ್‌,
ಕೆಪಿಸಿಸಿ ಅಧ್ಯಕ್ಷ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.