ADVERTISEMENT

ವ್ಯಂಗಚಿತ್ರ ಕಲಾವಿದ ಜಿ.ದಯಾನಂದ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 9:59 IST
Last Updated 18 ಜೂನ್ 2018, 9:59 IST
ವ್ಯಂಗಚಿತ್ರ ಕಲಾವಿದ ಜಿ.ದಯಾನಂದ್ ಇನ್ನಿಲ್ಲ
ವ್ಯಂಗಚಿತ್ರ ಕಲಾವಿದ ಜಿ.ದಯಾನಂದ್ ಇನ್ನಿಲ್ಲ   

ಚಿಕ್ಕಮಗಳೂರು: ಸ್ನೇಹಮಯಿ ಹೃದಯವಂತ ವ್ಯಂಗಚಿತ್ರ ಕಲಾವಿದ ಪತ್ರಿಕಾ ಛಾಯಾಗ್ರಾಹಕ ಜಿ.ದಯಾನಂದ್ ಇನ್ನಿಲ್ಲ. ಮಣಿಪಾಲದ ಆಸ್ಪತ್ರೆಯಲ್ಲಿ ಸೋಮವಾರ ಕೊನೆಯುಸಿರೆಳೆದಿದ್ದಾರೆ. ಮೃತರ ಶರೀರವನ್ನು ಇಂದು ಸಂಜೆ ನಗರಕ್ಕೆತರಲಾಗುತ್ತಿದೆ. ಅಂತ್ಯ ಸಂಸ್ಕಾರ ಇಂದೇ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪತ್ರಿಕೋದ್ಯಮದಲ್ಲಿ ಎಲ್ಲರ ಒಡನಾಡಿಯಾಗಿ ಸ್ನೇಹಮಯಿಯಾಗಿ ಕೆಲಸ ಮಾಡುತ್ತಿದ್ದ ದಯಾನಂದ್ ಅವರು ಪತ್ರಿಕೋದ್ಯಮದಲ್ಲಿ ಉತ್ತಮ ಹೆಸರು ಗಳಿಸಿದ್ದರು. ವ್ಯಂಗಚಿತ್ರದಲ್ಲಿ ದೊಡ್ಡ ಹೆಸರು ಮಾಡಿದ್ದ ದಯಾನಂದ್ ಅವರ ಪ್ರತಿಭೆಯನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿವೆ. ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಅವರ ಸಾವು ಜಿಲ್ಲೆಯ ಪತ್ರಿಕೋದ್ಯಮ, ವ್ಯಂಗ್ಯ ಚಿತ್ರರಂಗ, ಛಾಯಾಚಿತ್ರ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.