ADVERTISEMENT

ಸಂಸ್ಕೃತ, ಸಂಸ್ಕೃತಿ ಮರೆತರೆ ದೇಶ ನಾಶ

ರಾಜೀವ್ ಪರಿಸರದ ರಜತ ಮಹೋತ್ಸವದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:21 IST
Last Updated 19 ಜನವರಿ 2017, 5:21 IST
ಶೃಂಗೇರಿ ಮೆಣಸೆಯ ರಾಜೀವ್ ಪರಿಸರದ ರಜತಮಹೋತ್ಸವದ ಶಿಲಾನ್ಯಾಸವನ್ನು ಶಾರದ ಮಠದ ಭಾರತೀತೀರ್ಥ ಸ್ವಾಮೀಜಿ ಅವರು ನೆರವೇರಿಸಿದರು.
ಶೃಂಗೇರಿ ಮೆಣಸೆಯ ರಾಜೀವ್ ಪರಿಸರದ ರಜತಮಹೋತ್ಸವದ ಶಿಲಾನ್ಯಾಸವನ್ನು ಶಾರದ ಮಠದ ಭಾರತೀತೀರ್ಥ ಸ್ವಾಮೀಜಿ ಅವರು ನೆರವೇರಿಸಿದರು.   

ಶೃಂಗೇರಿ: ಮನುಷ್ಯ ಜೀವಿಸಬೇಕಾದರೆ ಆತ್ಮವಿಶ್ವಾಸ ಮುಖ್ಯ. ಇಂದಿನ ಯುವ ಜನತೆಗೆ ಅದು ಮರೆಯಾಗುತ್ತಿರುವುದು ವಿಷಾದದ ಸಂಗತಿ. ಅಕ್ಷರ ಜ್ಞಾನದಿಂದ ಸಂಸ್ಕಾರ ಸಿಗಲಿದ್ದು, ಸಂಸ್ಕೃತ ಹಾಗೂ ಸಂಸ್ಕೃತಿ ಮರೆತರೆ ರಾಷ್ಟ್ರ ನಾಶವಾಗು ತ್ತದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅಭಿಪ್ರಾಯಪಟ್ಟರು.

ಮೆಣಸೆಯ ರಾಜೀವ್ ಪರಿಸರದ ರಜತ ಮಹೋತ್ಸವದಲ್ಲಿ ಅವರು ಮಾತ ನಾಡಿ, ಸಮಾಜದಲ್ಲಿ ಆಧ್ಯಾತ್ಮಿಕ ಮೌಲ್ಯ ಗಳು ಹೆಚ್ಚಬೇಕು. ಆಗ ಮಾತ್ರ ಹಣದ ವ್ಯಾಮೋಹ ನಾಶವಾಗುತ್ತದೆ. ಭಯೋ ತ್ಪಾದನೆ, ಭ್ರಷ್ಟಾಚಾರ ಕಡಿಮೆಯಾಗು ತ್ತದೆ. ಮರೆಯಾಗುತ್ತದೆ ಎಂದರು.

ಅಹಿಂಸೆಯ ಮೂಲಕ ಗಾಂಧೀಜಿ ಬ್ರಿಟಿಷರನ್ನು ಗೆದ್ದರು. ನಾವು ಬೇರೆ ದೇಶ ದವರ ಬಗ್ಗೆ ಮಾತನಾಡುತ್ತೇವೆ. ಒಬಾ ಮಾ, ಟ್ರಂಪ್‌ ಬಗ್ಗೆ ನಮಗೆ ಕುತೂಹಲ. ಆದರೆ ಈ ಕುತೂಹಲ ನಮ್ಮ ದೇಶದ ಜಾಗೃತಿಗೆ ಇರಬೇಕು. ನಮಗೆ ಇಂದು ಲೌಕಿಕ ಸಂಪತ್ತು ಬೇಕು. ಇದರಿಂದ ನೆಮ್ಮದಿಯಿಲ್ಲ.  ನಾವು ಯೋಚಿಸಬೇಕು.

ಯೋಚನೆ ಕಾರ್ಯರೂಪಕ್ಕೆ ಬರಬೇಕು. ಧರ್ಮ ಬಿಟ್ಟು ಜೀವನವಿಲ್ಲ. ನಿನ್ನ ಕರ್ಮ ವನ್ನು ನೀನು ಮಾಡು ಎಂದು ಶ್ರೀಕೃಷ್ಣ ಹೇಳಿದ್ದಾನೆ. ದಯೆ, ಕರುಣೆ, ಮಾನವೀ ಯತೆ ನಮ್ಮ ಹೃದಯದಿಂದ ಮೂಡಿ ಬರಬೇಕು. ಆಗ ನಾವು ಜನಸಮುದಾ ಯದ ಪ್ರೀತಿಗೆ ಪಾತ್ರರಾಗುತ್ತೇವೆ ಎಂದರು.

ಸಂಸ್ಕೃತ ಭಾಷೆಯ ಪದಗಳು ಉಚ್ಛರಿಸಲು ಬಹಳ ಸುಲಭ. ಸಂಸ್ಕೃತ ಭಾಷೆ ಸರಳ ಹಾಗೂ ಸುಂದರ. ಸ್ವಾಮಿ ವಿವೇಕಾನಂದರು ಯುವಪೀಳಿಗೆಗೆ ದೃಢ ತೆಯಿಂದ ಜೀವನದಲ್ಲಿ ಹೆಜ್ಜೆ ಇಡು ಎಂದಿದ್ದಾರೆ. ನಾವು ಸಮಾಜದಲ್ಲಿ ಇಡುವ ಪ್ರತಿ ಹೆಜ್ಜೆಯನ್ನು ಬಹಳ ಜಾಗ ರೂಕತೆಯಿಂದ ಇಡಬೇಕು. ಶ್ರದ್ಧೆಯಿಂದ ಧರ್ಮಮಾರ್ಗದಲ್ಲಿ ನಡೆಯುವುದೇ ಜೀವನ. ಇದರಿಂದ ಬದುಕು ಸಾರ್ಥಕ ಎಂದರು. 

ಶೃಂಗೇರಿ ಮಠದ ಭಾರತೀತೀರ್ಥ ಸ್ವಾಮೀಜಿ ಮಾತನಾಡಿ, ವೇದಗಳು, ಶಾಸ್ತ್ರಗಳು ಸಂಸ್ಕೃತಿಯ ಮೂಲ. ಸಂಸ್ಕೃತ ಭಾಷೆಯಿಂದ ನಾವು ಆನಂದ ವನ್ನು ಹೊಂದಬಹುದಾಗಿದ್ದು, ಪರಂಪ ರೆಯ ಮೌಲ್ಯಗಳನ್ನು ಉಳಿಸುವಲ್ಲಿ ಸಂಸ್ಕೃತದ ಕೊಡುಗೆ ದೊಡ್ಡದು ಎಂದರು.

ಬ್ರಿಟಿಷರ ಕಾಲದಲ್ಲಿ ಈ ಭಾಷೆ ಮೃತ ಭಾಷೆಯಾಗಿತ್ತು. ಬಳಿಕ ಅದನ್ನು ಧಾರ್ಮಿ ಕ ಸಂಸ್ಥೆಗಳು ಹಾಗೂ ಸಂಸ್ಕೃತ ಕಾಲೇ ಜುಗಳು ಬೆಳೆಸಿದ್ದವು. ಸಂಸ್ಕೃತ ಭಾಷೆ ಯಲ್ಲಿ ಅಧ್ಯಯನ ಮಾಡಿದಾಗ ಮನಸ್ಸು ಆನಂದವಾಗುತ್ತದೆ. ಈ ಆನಂದ ಮುಕ್ತಿಯ ಹಾದಿಗೆ ಸುಲಲಿತವಾಗುತ್ತದೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಭಾರತದ ಭಾಷೆ ಸಂಸ್ಕೃತ. ದೇಶದ ಜನಸಾಮಾನ್ಯರು ಸಂಸ್ಕೃತದಲ್ಲಿ ಈ ಹಿಂದೆ ವ್ಯವಹಾರ ಮಾಡುತ್ತಿದ್ದರು. ವೇದ, ಖಗೋಲಶಾಸ್ತ್ರ, ವಿಜ್ಞಾನ ಮುಂತಾದ ವಿಷಯಗಳ ಪುಸ್ತಕಗಳು ಹಿಂದಿನ ಕಾಲದಿಂದಲೂ ಇದ್ದು, ಆದರೆ ಪ್ರಸ್ತುತ ಸಂಸ್ಕೃತ  ನಮ್ಮಿಂದ ಮರೆ ಯಾಗಿದೆ. ಭಾರತ ಯಾವುದೇ ವಿಷಯ ಗಳಲ್ಲೂ ಹಿಂದೆ ಬಿದ್ದಲ್ಲ.

ನಮ್ಮ ವೇದ ಗಳು, ವ್ಯಾಕರಣಗಳು, ತಂತ್ರಜ್ಞಾನ ಮೊದಲಾದವುಗಳನ್ನು ಕಲಿಯಲು ಬಹಳ ಕಾಲದಿಂದಲೂ ವಿದೇಶದವರು ಭಾರತಕ್ಕೆ ಬಂದಿದ್ದಾರೆ, ಎಂಜಿನಿಯರ್ ವಿದ್ಯಾರ್ಥಿಗಳು, ವಿಮಾನ ತಯಾರಿಸುವ ತಂತ್ರಜ್ಞಾನಿಗಳು ಸಂಸ್ಕೃತ ಭಾಷೆಯ ಬಗ್ಗೆ ಪಾಂಡಿತ್ಯ ಪಡೆಯಬೇಕು. ಆಗ ಅವರಿಗೆ ಋಷಿ ಮುನಿಗಳು ಬರೆದಿರುವ ಪುಸ್ತಕ ಗಳಲ್ಲಿರುವ ಮೌಲ್ಯಗಳು ಅರ್ಥವಾಗು ತ್ತದೆ ಎಂದರು.

ಕರ್ಣಾಟಕ ಬ್ಯಾಂಕ್‌ನ ಮಹಾ ಪ್ರಬಂ ಧಕ ಮಹಾಬಲೇಶ್ವರರಾವ್ ಮಾತ ನಾಡಿ, ಭಾಷೆ ಭಾವನೆಯ ಪೂರಕ. ಸಂಸ್ಕೃತ ಭಾಷೆ ಸಂಸ್ಕಾರಕ್ಕೆ ಪ್ರೇರಕ. ಸಂಸ್ಕೃತದಿಂದ ನಾವು ಸುಸಂಸ್ಕೃತ ರಾಗುತ್ತೇವೆ. ವೇದಗಳ ಹಾಗೂ ಶಾಸ್ತ್ರಗಳ ಅಧ್ಯಯನದಿಂದ ನಮ್ಮ ಮನಸ್ಸು ಆನಂದ ಉಂಟಾಗುತ್ತದೆ ಎಂದರು.

ಶ್ರೀಮಠದ ಡಾ.ವಿ.ಆರ್. ಗೌರೀ ಶಂಕರ್ ಮಾತನಾಡಿದರು. ವೇದಿಕೆಯಲ್ಲಿ ನವಹೆಹಲಿಯ ಸಂಸ್ಕೃತ ವಿಶ್ವವಿದ್ಯಾಲ ಯದ ಕುಲಪತಿಗಳಾದ ಪರಮೇಶ್ವರ ನಾರಾಯಣ ಶಾಸ್ತ್ರೀ, ಶಾಸಕ ಡಿ.ಎನ್. ಜೀವರಾಜ್, ಪರಿಸರದ ಪ್ರಾಚಾರ್ಯ ಪ್ರೊ.ಸಚ್ಚಿದಾನಂದ ಉಡುಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT