ADVERTISEMENT

‘ಸದೃಢ ಸಮಾಜ ನಿರ್ಮಾಣಕ್ಕೆ ಉತ್ತಮ ಆರೋಗ್ಯ ಅವಶ್ಯ’

ಶೆಟ್ಟಿಕೊಪ್ಪದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 15 ಮೇ 2017, 6:40 IST
Last Updated 15 ಮೇ 2017, 6:40 IST
ಶೆಟ್ಟಿಕೊಪ್ಪ (ಎನ್.ಆರ್.ಪುರ):‘ಸುಭದ್ರ ಸಮಾಜ ಕಟ್ಟಲು ಜನರಿಗೆ ಉತ್ತಮ ಆರೋಗ್ಯ ಅವಶ್ಯಕ’ ಎಂದು  ಬೆಂಗಳೂರು ಜವಾಹರಲಾಲ್ ನೆಹರೂ ವೈಜ್ಞಾನಿಕ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಎ.ಎನ್.ಜಯಚಂದ್ರ ತಿಳಿಸಿದರು.
 
ತಾಲ್ಲೂಕಿನ ಶೆಟ್ಟಿಕೊಪ್ಪ ಗ್ರಾಮದಲ್ಲಿ ಭಾನುವಾರ  ಮಂಗಳೂರು ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿದರು.
 
‘ವಿರೇಂದ್ರ ಹೆಗ್ಗಡೆ ಅವರು  ಸಮಾಜ ಮುಖಿಯಾಗಿ ಹಲವು ಕಾರ್ಯಕ್ರಮ ಗಳನ್ನು ಆಯೋಜಿಸಿದ್ದಾರೆ.  ಯೇನೆಪೋಯ ಮೆಡಿಕಲ್ ಕಾಲೇಜಿನ ಮುಖ್ಯಸ್ಥ ಅಬ್ದುಲ್ಲ ಕುಂಞಿಆಸ್ಪತ್ರೆಯಲ್ಲಿ ಬಡವರಿಗಾಗಿಯೇ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುವ ಕೆಲಸ ಮಾಡಿದ್ದಾರೆ. ಆರೋಗ್ಯದ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶವರಿಗೂ ವಿಸ್ತರಿಸುವ ನಿಟ್ಟಿನಲ್ಲಿ ಶಿಬಿರ ಆಯೋಜಿಸಿರುವುದು  ಶ್ಲಾಘನೀಯ.
 
ಗ್ರಾಮಸ್ಥರು ಶಿಬಿರ ಸದುಪ ಯೋಗಪಡಿಸಿಕೊಳ್ಳಬೇಕು’ ಎಂದರು.ಉಚಿತ ಆರೋಗ್ಯ ತಪಾಸಣಾ ಶಿಬಿರದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎನ್.ನಾಗರಾಜ್ ಮಾತನಾಡಿ,  ‘ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಶಿಬಿರ ಹಮ್ಮಿಕೊಳ್ಳಲಾಗಿದೆ.  ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾದವರಿಗೆ ಸಮಿತಿಯಿಂದ ಆಸ್ಪತ್ರೆಗೆ ಹೋಗಲು ವಾಹನ ಸೌಲಭ್ಯ, ಚಿಕಿತ್ಸೆಗೆ ಧನಸಹಾಯ ನೀಡುವ ಉದ್ದೇಶವಿದೆ’ ಎಂದು ಹೇಳಿದರು.
 
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಕ್ಷೇತ್ರದ ಯೋಜನಾಧಿಕಾರಿ ಡಿ.ದಿನೇಶ್ ಮಾತನಾಡಿ,  ‘ಯೋಜನೆ ಯಿಂದಲೂ  ಉಚಿತ ಆರೋಗ್ಯ ತಪಾಸಣಾ ಶಿಬಿರ, ಮಾಹಿತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.
 
ಯೇನೆಪೋಯ   ಆಸ್ಪತ್ರೆಯ ಡಾ.ಇಬ್ರಾಹಿಂ ನಾಗನೂರು ಮಾತನಾಡಿ,  ‘ಆರೋಗ್ಯ ತಪಾಸಣೆ ಜತೆಗೆ ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಶಿಬಿರವನ್ನು ಆಯೋಜಿಸಬೇಕು. ಕೆಲವು ಚಿಕಿತ್ಸೆಗಳು ದುಬಾರಿಯಾಗಿರುವುದರಿಂದ ಯೆನಪೋಯ ಆಸ್ಪತ್ರೆಯಲ್ಲಿ ಬಡವರಿಗೆ ರಿಯಾಯಿತಿ ದರದಲ್ಲಿ ಸೇವೆ ಒದಗಿಸಲು ಒಂದು ವಿಭಾಗ ಪ್ರಾರಂಭಿಸಲಾಗಿದೆ’  ಎಂದರು.
 
ಅಧ್ಯಕ್ಷತೆಯನ್ನು ಕಡಹಿನ ಬೈಲು  ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ.ಸುಬಿ ವಹಿಸಿದ್ದರು. ಸ್ವಾಗತ ಸಮಿತಿ ಕಾರ್ಯ ದರ್ಶಿ ಎನ್.ಎಂ.ಕಾಂತರಾಜ್, ಶಾಲಾ ಭಿವೃದ್ಧಿ ಸಮಿತಿಯ ಅಧ್ಯಕ್ಷ ಉದಯ ಶೆಟ್ಟಿ, ಕಡಹಿನಬೈಲು ಗ್ರಾಮ ಪಂಚಾ ಯಿತಿ ಅಧ್ಯಕ್ಷೆ ರೋಜಾಲಿಬಿ, ವೈದ್ಯರಾದ ಡಾ.ದಯಾನಂದ, ಡಾ.ಪ್ರಸನ್ನ. ಗಾಯಿತ್ರಿ , ಅಣ್ಣಪ್ಪ , ಬಿ.ಟಿ.ವಿಜಯಕುಮಾರ್  ಡಿ.ಆರ್.ಈಶ್ವರ ಪಾಲ್ಗೊಂಡಿದ್ದರು. 250 ಜನವೈದ್ಯಕೀಯ ತಪಾಸಣೆ ಮಾಡಿಸಿಕೊಂಡರು. ವೇದಾವತಿ ಮತ್ತು ರಜಾಕ್ ಯೆನ ಪೋಯ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.