ADVERTISEMENT

ಸೀಗೋಡು: 8 ಹಲಸಿನ ಮರ ಕಡಿತ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 7:23 IST
Last Updated 6 ಜುಲೈ 2017, 7:23 IST

ಬಾಳೆಹೊನ್ನೂರು: ಪಟ್ಟಣ ಸಮೀಪದ ಇಟ್ಟಿಗೆ ಸೀಗೋಡಿನ ಕೆರೆಯ ಬಳಿ ಇರುವ ಖಾಲಿ ಸೈಟಿನಲ್ಲಿ ಬೆಳೆದಿದ್ದ 8 ಹಲಸಿನ ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಸೈಟ್ ಜಾಗ ಸೆಕ್ಷನ್ 4 ಅಡಿಯಲ್ಲಿ ಬರುತ್ತಿದ್ದು, ಅಲ್ಲಿ  ಕಾನೂನಿನ ಅನ್ವಯ ಯಾವುದೇ ಮರಗಳನ್ನು ಕಡಿಯುವಂತಿಲ್ಲ.

ಆದರೆ ಸ್ಥಳೀಯರೊಬ್ಬರು ಅಲ್ಲಿ ಮನೆ ನಿರ್ಮಿಸಲು ಉದ್ದೇಶಿಸಿದ್ದ ಕಾರಣ ಅಲ್ಲಿ ಬೆಳೆದಿದ್ದ ಹಲಸಿನ ಮರಗಳು ಸೇರಿದಂತೆ ಒಟ್ಟು 10 ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಸಿಡಿಲು ಬಡಿದು ಮರಗಳು ಬೀಳುತ್ತಿವೆ ಎಂದು ನಕಲಿ ದಾಖಲೆ ಸೃಷ್ಟಿಸಿ ಮರಗಳನ್ನು ಕಡಿಯಲಾಗುತ್ತಿದೆ.

ಈ ವರೆಗೂ ಮರ ಕಡಿಯಲು ಅರಣ್ಯ ಇಲಾಖೆಯಿಂದ ಯಾವುದೇ ಪರವಾನಗಿ ಪಡೆದಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದ್ದಾರೆ.  ಈ ಬಗ್ಗೆ ಬಾಳೆಹೊನ್ನೂರಿನ ಎಸಿಎಫ್ ಶಂಕರ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.