ADVERTISEMENT

ಸೈಕಲ್ ಬಳಸಿ; ಮಾಲಿನ್ಯ ತಡೆಗೆ ಸಹಕರಿಸಿ

ವಿಶ್ವ ಬೈಸಿಕಲ್ ದಿನಾಚರಣೆಯಲ್ಲಿ ಜೇಸಿ ಅಧ್ಯಕ್ಷ ಪೂರ್ಣೇಶ್ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 6:03 IST
Last Updated 20 ಏಪ್ರಿಲ್ 2018, 6:03 IST
ನರಸಿಂಹರಾಜಪುರ ಜೇಸಿ ಸಂಸ್ಥೆಯಿಂದ ಗುರುವಾರ ವಿಶ್ವ ಬೈಸಿಕಲ್ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸೈಕಲ್ ಜಾಥಾಕ್ಕೆ ಜೇಸಿ ಸಂಸ್ಥೆ ಅಧ್ಯಕ್ಷ ಪೂರ್ಣೇಶ್ ಚಾಲನೆ
ನರಸಿಂಹರಾಜಪುರ ಜೇಸಿ ಸಂಸ್ಥೆಯಿಂದ ಗುರುವಾರ ವಿಶ್ವ ಬೈಸಿಕಲ್ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸೈಕಲ್ ಜಾಥಾಕ್ಕೆ ಜೇಸಿ ಸಂಸ್ಥೆ ಅಧ್ಯಕ್ಷ ಪೂರ್ಣೇಶ್ ಚಾಲನೆ   

ನರಸಿಂಹರಾಜಪುರ: ಸೈಕಲ್ ತುಳಿಯುವುದರಿಂದ ಆರೋಗ್ಯ ವೃದ್ಧಿಸುತ್ತದೆ ಜತೆಗೆ ಪರಿಸರ ಮಾಲಿನ್ಯವನ್ನೂ ತಡೆ ಗಟ್ಟಬಹುದು ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ಅಧ್ಯಕ್ಷ ಪೂರ್ಣೇಶ್ ತಿಳಿಸಿದರು.

ಇಲ್ಲಿನ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ಗುರುವಾರ ವಿಶ್ವ ಬೈಸಿಕಲ್ ದಿನಾಚರಣೆಯ ಅಂಗವಾಗಿ ಪಟ್ಟಣದಲ್ಲಿ ಆಯೋಜಿಸಿದ್ದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಇತಿ ಹಾಸ ಮರುಕಳಿಸುತ್ತದೆ ಎಂಬಂತೆ ಹಿಂದೆ ಜನರು ಓಡಾಟಕ್ಕೆ ಸೈಕಲ್‌ ಅನ್ನು ಆವಲಂಬಿಸಿದ್ದರು. ದೂರದ ಪ್ರಯಾಣವನ್ನು ಸಹ ಸೈಕಲ್‍ ಮೂ ಲಕವೇ ಮಾಡುತ್ತಿದ್ದರು. ಹಾಗಾಗಿ ಹಿರಿಯರ ಜೀವಿತಾವಧಿಯು ಸಹ 80 ವರ್ಷಕ್ಕೂ ಅಧಿಕವಾಗಿತ್ತು. ಆರೋಗ್ಯ ವಂತವಾಗಿಯೂ ಇರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬೈಕ್‌, ಕಾರು ಗಳನ್ನು ಜನರು ಆವಲಂಬಿಸಿದ್ದಾರೆ ಎಂದರು.

ಉದ್ಯಮಿ ದಿನೇಶ್ ಹಂತವಾನಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನಾವು ಸೇವಿಸುತ್ತಿರುವ ಕಲುಷಿತ ಆಹಾರದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ವಾಹನಗಳ ಸಂಖ್ಯೆ ಅಧಿಕವಾಗಿದ್ದು ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಹೆಚ್ಚಾಗುತ್ತಿದೆ. ಮುಗಿದು ಹೋಗುವ ಇಂಧನವನ್ನು ಉಳಿಸ ಬೇಕಾದರೆ ಹಿತವಾಗಿ, ಮಿತವಾಗಿ ಬಳಸುವುದರ ಜತೆಗೆ ಪರಿಸರ ಸ್ನೇಹಿ ಸೈಕಲ್ ಬಳಸಬೇಕು. ಇತ್ತಿಚಿನ ದಿನಗಳಲ್ಲಿ 40ವರ್ಷ ಆಗುತ್ತಿದ್ದಂತೆ ದೇಹಕ್ಕೆ ವಿವಿಧ ಕಾಯಿಲೆಗಳು ಆವರಿಸಿಕೊಳ್ಳುತ್ತವೆ. ಅವುಗಳಿಂದ ದೂರವಿರಬೇಕಾದರೆ ಪ್ರತಿನಿತ್ಯ ಸೈಕಲ್ ಬಳಸುವುದು ಮುಖ್ಯವಾಗಿದೆ ಎಂದರು.

ADVERTISEMENT

ಜೇಸಿ ಸಂಸ್ಥೆಯ ಪೂರ್ವಧ್ಯಕ್ಷರಾದ ಮಂಜು ಎನ್.ಗೌಡ, ಅಭಿನವ ಗಿರಿರಾಜ್, ಮಜೀದ್, ಕಾರ್ಯದರ್ಶಿ ಜಲೀಲ್ ಹುಸೇನ್, ಉಪಾಧ್ಯಕ್ಷ ಅಪೂರ್ವ ರಾಘು, ನಿರ್ದೇಶಕ ಅಜಯ್, ದೈಹಿಕ ಶಿಕ್ಷಣ ಶಿಕ್ಷಕ ಪ್ರಭುನಾಯಕ್, ಮಜೀದ್ ಪಾಲ್ಗೊಂಡಿದ್ದರು.

ಪಟ್ಟಣದ ಬಸ್ತಿಮಠದಿಂದ ಬಸ್ ನಿಲ್ದಾಣದವರೆಗೆ ಜಾಥಾ ನಡೆಸಿದರು. ಈ ವಿನೂತನ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.