ADVERTISEMENT

ಹೊರ ಗುತ್ತಿಗೆದಾರರ ಕಳಪೆ ಕಾಮಗಾರಿ:ರಮೇಶ್ ಆರೋಪ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 7:39 IST
Last Updated 17 ಏಪ್ರಿಲ್ 2017, 7:39 IST

ಕಡೂರು: ‘ಸ್ಥಳೀಯ ಗುತ್ತಿಗೆದಾರರು ಕೆಲಸವಿಲ್ಲದೇ ಪರದಾಡುತ್ತಿರುವಾಗ ಹೊರಗಡೆಯಿಂದ ಬಂದಿರುವ ಗುತ್ತಿಗೆ ದಾರರು ಕಳಪೆ ಕಾಮಗಾರಿ ಮಾಡುತ್ತಿ ರುವುದನ್ನು ಕಂಡೂ ಏನೂ ಮಾಡ ದಂತಹ ಪರಿಸ್ಥಿತಿ ನಮ್ಮದಾಗಿದೆ’ ಎಂದು ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಎಸ್.ರಮೇಶ್ ತಿಳಿಸಿದರು.ಕಡೂರು ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ‘ತಾಲ್ಲೂಕಿನಲ್ಲಿ ನೂರಾರು ಗುತ್ತಿಗೆದಾರರು ಇದ್ದು, ಲೋಕೋಪಯೋಗಿ, ಕೊಳಚೆ ನಿರ್ಮೂಲನಾ ಮಂಡಳಿ, ಸಣ್ಣ ನೀರಾ ವರಿ ಮುಂತಾದ ಇಲಾಖೆಗಳಲ್ಲಿ ನೊಂದಾಯಿಸಿಕೊಂಡು ಕಾಮಗಾರಿ ಗಳನ್ನು ಗುತ್ತಿಗೆ ಪಡೆದು ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದರು.

ಗುತ್ತಿಗೆಯಲ್ಲಿ ಇ-ಪ್ರೊಕ್ಯೂರ್ ಮೆಂಟ್ ಬಂದ ನಂತರ ಯಾವುದೇ ಕಾಮಗಾರಿಯ ಅಂದಾಜು ಮೊತ್ತದ ಎಸ್.ಆರ್. ದರಕ್ಕಿಂತ  ಶೇ 35 ಕಡಿಮೆ ದರ ನಮೂದಿಸಿ ಹೊರ ಜಿಲ್ಲೆಯವರು ಕಾಮಗಾರಿಗಳ ಗುತ್ತಿಗೆ ಪಡೆದು ಸ್ಥಳೀಯ ಗುತ್ತಿಗೆದಾರರಿಗೆ ಸಂಕಷ್ಟ ತಂದೊಡ್ಡಿ ದ್ದಾರೆ’ ಎಂದು ಆರೋಪಿಸಿದರು.‘ಹೊರಗಡೆಯಿಂದ ಬಂದ ಗುತ್ತಿಗೆದಾರರು ಅಂದಾಜು ವೆಚ್ಚಕ್ಕಿಂತ ಶೇ 35ರಷ್ಟು ಕಡಿಮೆ ದರ ನಮೂದಿಸಿ ಹೇಗೆ ಕಾಮಗಾರಿ ಮಡುತ್ತಾರೆ ಎಂಬುದು ಬೀರೂರಿನಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ ಕಾಮಗಾರಿ ಪರಿಶೀಲಿಸಿದ ಪುರಸಭಾಧ್ಯಕ್ಷೆ ಸವಿತಾರ ಮೇಶ್ ಅವರೇ ಅಚ್ಚರಿಗೊಳಗಾದರು. ಅಲ್ಲಿನ ರಸ್ತೆಗೆ 6 ಇಂಚು ಕಾಂಕ್ರೀಟ್ ಜಲ್ಲಿ ಹಾಕಬೇಕಾದ ಕಡೆ ಕೇವಲ 2 ಇಂಚು ಹಾಕಿದ್ದಾರೆ. ಇದನ್ನು ನಾವೆ ಪಿಕಸಿ ಹಿಡಿದು ಪ್ರತ್ಯಕ್ಷವಾಗಿ ಬಗೆದು ನೋಡಿ ದ್ದೇವೆ’ ಎಂದರು.

‘ಡ್ರೈನೇಜ್‌ನಲ್ಲಿ ವಾಲ್‌ಗಳಿಗೆ 10 ರಾಡ್ ಹಾಕಬೇಕಾದ ಕಡೆ 5 ರಾಡ್ ಹಾಕಿದ್ದಾರೆ. ಇದನ್ನು ಕಂಡ ಪುರಸಭಾಧ್ಯಕ್ಷರು ಎಇಇ ಷಣ್ಮುಖಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಕೇಳಿದರೆ ನಾವು ಪುರಸಭೆಯವರಿಗೆ ಈ ಕಾರ್ಯಗಳನ್ನು ತೋರಿಸಬೇಕಿಲ್ಲ ಎಂಬ ಉಡಾಫೆ ಉತ್ತರ ನೀಡಿದ್ದಾರೆ. ಸ್ಥಳೀಯ ಗುತ್ತಿಗೆದಾರರು ಎಂದಿಗೂ ಇಂತಹ ಕಳಪೆ ಕಾಮಗಾರಿ ಮಾಡುವುದಿಲ್ಲ. ಹೊರಗುತ್ತಿಗೆದಾರರು ಇಂತಹ ಕಳಪೆ ಕಾಮಗಾರಿ ಮಾಡುತ್ತಾರೆ’ ಎಂದು ದೂರಿದರು.

ADVERTISEMENT

‘ಇ-ಟೆಂಡರ್‌ಗಳಿಗೆ ನಮ್ಮ ವಿರೋಧ ವಿಲ್ಲ. ಟೆಂಡರ್ ಪ್ರಕ್ರಿಯೆಯಲ್ಲಿರುವ ಹಲವು ಅವೈಜ್ಞಾನಿಕ ನಿಬಂಧನೆಗಳನ್ನು ಕೈಬಿಡಬೇಕು. ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಬೇಕು. ಲೋಕೋಪ ಯೋಗಿ ಇಲಾಖೆಯ ಉಪಯೋಗ ಕ್ಕಾಗಿಯೇ ಕಲ್ಲು ಗಣಿ ಜಾಗ ಮೀಸಲಿಡ ಬೇಕು. ಮೇ ತಿಂಗಳಲ್ಲಿ ಗುತ್ತಿಗೆದಾರರ ಜಿಲ್ಲಾ ಸಮಿತಿ ಸಭೆ ನಡೆಸಿ ಸ್ಥಳೀಯ ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ರಾಜ್ಯ ಸಮಿತಿಯ ಗಮನಕ್ಕೆ ತರಲಾಗುವುದು. ಹೊರಗಡೆಯಿಂದ ಬರುವ ಗುತ್ತಿಗೆದಾರರ ಕಳಪೆ ಕಾಮ ಗಾರಿಗಳನ್ನು ಶಾಸಕರು ಗಮನಿಸಿ, ಸ್ಥಳೀಯ ಗುತ್ತಿಗೆದಾರರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.ಗುತ್ತಿಗೆದಾರರಾದ ಹಿರಿಯಣ್ಣ, ಹಿರೇನಲ್ಲೂರು ಕುಮಾರಸ್ವಾಮಿ, ದಿನೇಶ್, ಕೆ.ಎಂ.ಅನಿಲ್ ಕುಮಾರ್, ಛಾಯಾಬಾಬು, ಗಿರೀಶ್ ಉಪಸ್ಥಿತ ರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.