ADVERTISEMENT

ಇಂಗ್ಲಿಷ್‌ನಲ್ಲಿ ಅರ್ಜಿ: ಸಚಿವ ಕಿಡಿ

​ಪ್ರಜಾವಾಣಿ ವಾರ್ತೆ
Published 16 ಮೇ 2017, 5:33 IST
Last Updated 16 ಮೇ 2017, 5:33 IST

ಚಿತ್ರದುರ್ಗ: ಕೌಶಲ ತರಬೇತಿಗಾಗಿ ನೋಂದಣಿ ಅರ್ಜಿ ಹಾಗೂ ಮಾಹಿತಿಯ ವಿವರವನ್ನು ಇಂಗ್ಲಿಷ್‌ನಲ್ಲಿ ಮುದ್ರಿಸಿ ದ್ದಕ್ಕೆ ಗರಂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿರುದ್ಧ ಹರಿಹಾಯ್ದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೌಶಲ ತರಬೇತಿ ಕಾರ್ಯಕ್ರಮದಲ್ಲಿ ಉದ್ಘಾಟನೆಗೆ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯ­ನಿರ್ವಹಣಾ­ಧಿಕಾರಿ ನಿತೇಶ್ ಪಾಟೀಲ್ ಅವರು ಅರ್ಜಿ, ಅದರ ಹಿಂಬದಿಯಲ್ಲಿ ಇಂಗ್ಲಿಷ್‌ ನಲ್ಲಿದ್ದ ತರಬೇತಿ ವಿವರವನ್ನು ಓದಿದರು.

ಇದಕ್ಕೆ ಆಕ್ಷೇಪಿಸಿದ ಸಚಿವರು, ‘ಅರ್ಜಿಯನ್ನು ಇಂಗ್ಲಿಷ್‌ನಲ್ಲಿ ಕೊಟ್ಟರೆ, ಗ್ರಾಮೀಣ ಮಕ್ಕಳಿಗೆ ಏನು ಅರ್ಥ ವಾಗುತ್ತದೆ. ಮೊದಲು ಅದನ್ನು ಕನ್ನಡದಲ್ಲಿ ಮುದ್ರಿಸಿ ಕೊಡಿ’ ಎಂದು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ‘ಇದು ಬೆಂಗಳೂರಿನಿಂದ ಬಂದ ಪ್ರತಿ.

ADVERTISEMENT

ನಾವು ಮಾಡಿದ್ದಲ್ಲ’ ಎಂದರು. ಇದಕ್ಕೆ ಆಕ್ಷೇಪಿಸಿದ ಸಚಿವರು ‘ಅದನ್ನು ಬೆಂಗಳೂರಿಗೆ ವಾಪಸ್ ಕಳಿಸಿ, ಆ ಅಧಿಕಾರಿಗೆ ನೋಟಿಸ್ ನೀಡಿ. ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಈ ಕುರಿತು ಪತ್ರ ಬರೆಯಿರಿ’ ಎಂದು ತಾಕೀತು ಮಾಡಿದರು.

ಸಚಿವ ಆಂಜನೇಯ ಭಾಷಣದಲ್ಲಿ ‘ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಇಲ್ಲಿ ಐಎಎಸ್ ಸೇರಿದಂತೆ ಎಲ್ಲ ಸರ್ಕಾರಿ ಅಧಿಕಾರಿಗಳೂ ಜನರ ಗುಲಾಮರು. ಸರ್ಕಾರಿ ಕೆಲಸಕ್ಕೆ ಸೇರಿದ ಮೇಲೆ ಸಾರ್ವಜನಿಕರ ಸೇವೆ ಮಾಡಲೇಬೇಕು. ಎಲ್ಲರಿಗೂ ಸರ್ಕಾರಿ ಕೆಲಸ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ಸ್ವಾವ ಲಂಬಿಗಳಾಗಬೇಕು ಎಂಬ ಉದ್ದೇಶ ದಿಂದ ಸರ್ಕಾರ ಈ ಕೌಶಲ ಅಭಿವೃದ್ಧಿ ತರಬೇತಿ ನೀಡುತ್ತಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮಾತನಾಡಿದರು. ಜಿಲ್ಲೆಯ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೌಶಲಾಧಾರಿತ ತರಬೇತಿಗೆ ಹೆಸರು ನೋಂದಾಯಿಸಲು ಬಂದಿದ್ದರು. ವಿಧಾನಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ತಹಶೀಲ್ದಾರ್ ಮಲ್ಲಿಕಾರ್ಜುನ್ ಇದ್ದರು.

‘ವಿದ್ಯೆ, ಆಸಕ್ತಿಗನುಗಣವಾಗಿ ತರಬೇತಿ’

ವಿದ್ಯಾರ್ಹತೆಗೆ ತಕ್ಕ ಆಸಕ್ತಿಗೆ ಅನುಗುಣವಾಗಿ ಕೌಶಲ್ಯಾಧಾರಿತ ತರಬೇತಿ ನೀಡಲಾಗುತ್ತಿದೆ. ದೇಶ ದಲ್ಲೇ ಕರ್ನಾಟಕ ರಾಜ್ಯ ಮಾದರಿ ಯಾಗಿದೆ. ಮೇ 15ರಿಂದ 22 ರವರೆಗೆ ಒಂದು ವಾರ ತರಬೇತಿ ಪಡೆಯಲು ನೊಂದಣಿಗೆ ಮಾಡಿ ಬೇಕು.

ಜಿಲ್ಲೆಯ ಎಲ್ಲಾ ಯುವಜನ ಈ ಯೋಜನೆಯ ಪಡೆದುಕೊಳ್ಳ ಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದರು.

*

ರಾಜ್ಯ ಸರ್ಕಾರವು ಕೌಶಲ ಮಿಷನ್‌ನಿಂದ ರಾಜ್ಯದ 5 ಲಕ್ಷ ನಿರುದ್ಯೋಗಿ ಯುವಕ-ಯುವತಿಯರಿಗೆ ಸುಮಾರು 131 ವಿಷಯಾಧಾರಿತ ಕೌಶಲ ತರಬೇತಿಯನ್ನು ನೀಡುತ್ತಿದೆ.
ಎಚ್. ಆಂಜನೇಯ,
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.