ADVERTISEMENT

ಚಳ್ಳಕೆರೆ: ಗೋಮಾಳದ ಉಳಿವಿಗೆ ಒತ್ತಾಯ

ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ: ಮೂರನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 6:11 IST
Last Updated 31 ಜನವರಿ 2017, 6:11 IST
ಚಳ್ಳಕೆರೆ: ಗೋಮಾಳದ ಉಳಿವಿಗೆ ಒತ್ತಾಯ
ಚಳ್ಳಕೆರೆ: ಗೋಮಾಳದ ಉಳಿವಿಗೆ ಒತ್ತಾಯ   

ಚಳ್ಳಕೆರೆ: ಪಶುಪಾಲನೆ, ಕುರಿಸಾಕಣೆ ಮತ್ತು ಉರುವಲು ಸಂಗ್ರಹಕ್ಕೆ ಮೀಸಲಾದ  ಗೋಮಾಳವನ್ನು ಅಭಿ ವೃದ್ಧಿ ಹೆಸರಿನಲ್ಲಿ ವಶಪಡಿಸಿ ಕೊಂಡಿ ರುವುದು ಖಂಡನೀಯ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಕೆ.ಟಿ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.

ನಗರದ ಪಾವಗಡ ರಸ್ತೆಯಲ್ಲಿರುವ 91.11ಎಕರೆ ಗೋಮಾಳದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ಮೂರು ದಿನಗಳಿಂದ  ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

‘ಉಪ್ಪಾರಹಟ್ಟಿ, ನಗರಂಗೆರೆ, ದೊಡ್ಡೇರಿ ಸೇರಿದಂತೆ ಸುತ್ತಮುತ್ತಲಿನ 10ರಿಂದ15ಗ್ರಾಮಗಳ ರೈತರ ಬದುಕಿಗೆ ಈ ಗೋಮಾಳ ಆಸರೆಯಾಗಿದೆ. ಈ ಪ್ರದೇಶದಲ್ಲಿ ಪಶುಪಾಲಕರು, ಕುರಿಗಾಹಿ ಗಳು ಜಾನುವಾರು ಮತ್ತು ಕುರಿಹಿಂಡನ್ನು  ಮೇಯಿಸುವ ಪರಿಪಾಠವಿದೆ. ಆದರೆ, ಸರ್ಕಾರ ಈ ಸ್ಥಳದಲ್ಲಿ ಕೆಲವು ಕಾಮಗಾರಿ ಆರಂಭಿಸಿರುವುದು ಸರಿಯಲ್ಲ’ ಎಂದು ತಿಳಿಸಿದರು.

‘ರೈತರು ಗೋಮಾಳವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ರೈತರಿಗೆ ಆಸರೆಯಾಗಿರುವ ಗೋಮಾಳಗಳನ್ನು ಉಳಿಸುವ ಅಗತ್ಯವಿದ್ದು, ಅಧಿಕಾರಿಗಳು ಈ ಕೂಡಲೇ ಕ್ರೀಡಾಂಗಣ ನಿರ್ಮಾಣ ಕಾರ್ಯ ನಿಲ್ಲಿಸುವ ಮೂಲಕ ರೈತರ ಹಿತ ಕಾಯಬೇಕು’ ಎಂದು ಒತ್ತಾಯಿಸಿದರು.

‘ಉರುವಲು ಸಂಗ್ರಹಕ್ಕೆ ಈ ಪ್ರದೇಶ ಮೀಸಲಾಗಿದ್ದು, ಸಾವಿರಾರು ಜನರ ಜೀವನಕ್ಕೆ ಆಸರೆಯಾಗಿದೆ ಈಗಾಗಲೇ ನಗರದಲ್ಲಿ ಕ್ರೀಡಾಂಗಣಗಳಿವೆ. ಆದರೂ, ಮತ್ತೊಂದು ಕ್ರೀಡಾಂಗಣ ನಿರ್ಮಾಣ ಮಾಡುವ ಮೂಲಕ ರೈತ ಬದುಕನ್ನು ಕಸಿಯುವ ಹುನ್ನಾರ ನಡೆದಿದೆ’ ಎಂದು ಆರೋಪಿಸಿದರು.

ರಾಜ್ಯ ರೈತ ಸಂಘ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಈಚಗಟ್ಟ ಸಿದ್ದವೀರಪ್ಪ, ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ, ರಾಜೇಶ್‌, ತಾಲ್ಲೂಕು ಘಟಕ ಅಧ್ಯಕ್ಷ ಅಜ್ಜಣ್ಣ, ರೈತರ ಮುಖಂಡರಾದ ಜಿ.ಕೆ.ಈರಣ್ಣ, ಕೆ.ಶ್ರೀನಿವಾಸ್‌, ಕರಿಯಮ್ಮ, ತಿಪ್ಪಮ್ಮ, ಜಿ.ಕೆ.ಸುರೇಶ್‌, ತಿಪ್ಪೇಸ್ವಾಮಿ, ರಾಜೇಗೌಡ, ಗ್ರಾಮ ಪಂಚಾಯ್ತಿ ಸದಸ್ಯ ಜಗಲೂರಯ್ಯ, ಕವಿತಮ್ಮ, ಚನ್ನಕೇಶವ, ಸುಶೀಲಮ್ಮ, ಗೌರಮ್ಮ, ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ಬಿ.ವಿ.ಸಿರಿಯಣ್ಣ, ಮುಖಂಡ ಬೋರನಾಯಕ, ಬಿಜೆಪಿ ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಅನಾಸ್‌, ಹನುಮಂತರಾಯಪ್ಪ, ಕ್ಯಾತಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT