ADVERTISEMENT

ಟಿಪ್ಪು ಜಯಂತಿ: ಚಿತ್ರದುರ್ಗದಲ್ಲಿ ‌ಮೂರು ದಿನ ಹೈ ಅಲರ್ಟ್- ಊರ ತುಂಬಾ ಪೊಲೀಸರು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 8:33 IST
Last Updated 7 ನವೆಂಬರ್ 2017, 8:33 IST
ಟಿಪ್ಪು ಜಯಂತಿ: ಚಿತ್ರದುರ್ಗದಲ್ಲಿ ‌ಮೂರು ದಿನ ಹೈ ಅಲರ್ಟ್- ಊರ ತುಂಬಾ ಪೊಲೀಸರು
ಟಿಪ್ಪು ಜಯಂತಿ: ಚಿತ್ರದುರ್ಗದಲ್ಲಿ ‌ಮೂರು ದಿನ ಹೈ ಅಲರ್ಟ್- ಊರ ತುಂಬಾ ಪೊಲೀಸರು   

ಚಿತ್ರದುರ್ಗ: ಇದೆ 10ರಂದು ನಡೆಯಲಿರುವ ಟಿಪ್ಪು ಜಯಂತಿ ಮತ್ತು ಮಂಗಳವಾರ ನಡೆಯಬೇಕಿದ್ದ ಬಿಜೆಪಿ-ಆರ್‌ಎಸ್ಎಸ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಮೂರು ದಿನ ನಿಷೇಧಾಜ್ಞೆ ಘೋಷಿಸಲಾಗಿದೆ‌.

ನಗರದ‌ ಮೂಲೆ‌ ಮೂಲೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.

ಬಿಜೆಪಿ- ಆರ್‌ಎಸ್‌ಎಸ್‌ನವರು ಕಾರ್ಯಕ್ರಮ ನಡೆಸಬೇಕಿದ್ದ ಜೆಜೆ ಸಮುದಾಯ ಭವನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾದಾರ ಚನ್ನಯ್ಯ ಗುರುಪೀಠದ‌ ಸುತ್ತಾ ಪೊಲೀಸರನ್ನು ನಿಯೋಜಿಸಲಾಗಿದೆ.

ADVERTISEMENT

ಜೆಎಂಐಟಿ ವೃತ್ತ, ಹೊಸಪೇಟೆ ರಸ್ತೆ(ಎನ್‌ಎಚ್‌ 13), ಚಳ್ಳಕೆರೆ ಟೋಲ್ ಗೇಟ್, ತುರುವನೂರು ರಸ್ತೆ ಪ್ರವೇಶ ದ್ವಾರ, ಜಿಲ್ಲಾಧಿಕಾರಿ ಕಚೇರಿ, ಒನಕೆ ಓಬವ್ವ ವೃತ್ತ, ಎಂ.ಜಿ‌ ಸರ್ಕಲ್ ಸೇರಿದಂತೆ, ಹಲವು ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ನಗರಕ್ಕೆ‌ ಪ್ರವೇಶಿಸುವ, ಅನುಮಾನ ವ್ಯಕ್ತವಾಗುವ ವ್ಯಕ್ತಿ ವಾಹನಗಳನ್ನು ತಪಾಸಣೆಗೆ ಒಳಪಡಲಾಗಿದೆ.

ಪೊಲೀಸರ ನಿಯೋಜನೆಯಿಂದ ಜನರು ಗಾಬರಿಗೊಂಡಂತೆ ಕಾಣುತ್ತಿದೆ. 'ನಮ್ಮೂರಲ್ಲಿ‌ ಅಂಥದ್ದೇನೂ ನಡೆಯುವುದಿಲ್ಲ. ಆದರೂ ಇಷ್ಟೆಲ ಪೊಲೀಸರ‌ ನಿಯೋಜನೆ ಅಗತ್ಯವಿರಲಿಲ್ಲ' ಎಂದು  ನಾಗರಿಕರು ಅಭಿಪ್ರಾಯಪಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.