ADVERTISEMENT

ಮೈಸೂರು ಸಿಲ್ಕ್ ಸೀರೆ ಪ್ರದರ್ಶನ, ಮಾರಾಟ

ಚಿತ್ರದುರ್ಗ: ಐದು ದಿನಗಳ ಪ್ರದರ್ಶನ, ಪುರುಷರಿಗೂ ಸಿಲ್ಕ್‌ ಷರ್ಟ್‌ಗಳು ಲಭ್ಯ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 5:43 IST
Last Updated 9 ಮಾರ್ಚ್ 2017, 5:43 IST
ಚಿತ್ರದುರ್ಗ: ನಗರದ ಐಎಂಎ ಹಾಲ್‌ನಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಜಿಲ್ಲಾಧಿಕಾರಿ ಎಂ .ಕೆ.ಶ್ರೀರಂಗಯ್ಯ ಬುಧವಾರ ಚಾಲನೆ ನೀಡಿದರು.
ಐದು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ  ಕ್ರೇಪ್ ಡಿಸೈನ್ ಜಾರ್ಜೆಟ್, ಸಾದಾ ಮುದ್ರಿತ, ಟೈ ಹಾಗೂ ಸ್ಕಾರ್ಫ್ ಸೀರೆಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.  ಎಲ್ಲ ಉತ್ಪನ್ನಗಳ ಮೇಲೆ ಶೇ 25ರವರೆಗೆ ರಿಯಾಯಿತಿ ನೀಡುತ್ತಿದೆ.
 
ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ‘ಮೈಸೂರು ಸಿಲ್ಕ್‌ ಸೀರೆಗಳು ಗುಣಮಟ್ಟ, ಆಕರ್ಷಣೆಗೆ ಹೆಸರುವಾಸಿಯಾಗಿದೆ. ಆಧುನಿಕ ವಿನ್ಯಾಸಗಳಿವೆ. ಸಾಂಪ್ರದಾಯಿಕತೆ ಒಳಗೊಂಡಿದೆ. ನವೀನ ವಿನ್ಯಾಸಗಳಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ’ ಎಂದರು.
 
‘ಕೆಎಸ್‌ಐಸಿ ಲಾಭ-ನಷ್ಟಗಳ ನಡುವೆ ಹೆಸರನ್ನು ಉಳಿಸಿಕೊಂಡಿದೆ. ಸರ್ಕಾರದ ಈ ಉದ್ಯಮವನ್ನು ಮೈಸೂರು ಮಹಾರಾಜರು ಆರಂಭಿಸಿದ್ದು ನಿರಂತರವಾಗಿ ನಡೆದುಕೊಂಡು ಬರುತ್ತಿದೆ’ ಎಂದರು 
 
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿ ‘ಮೈಸೂರ್ ಸಿಲ್ಕ್ ಸೀರೆಗೆ ಭೌಗೋಳಿಕ ಗುರುತು (ಜಿಐ ಟ್ಯಾಗ್) ನೀಡಲಾಗಿದೆ. ಗುಣಮಟ್ಟ, ವಿನ್ಯಾಸ, ಆಧುನಿಕ ಮಾದರಿಗಳಿಗೆ ಈ ಐಡೆಂಟಿಟಿ ದೊರೆತಿದೆ ಎಂದು ತಿಳಿಸಿದರು.
 
‘ಭಾರತದಲ್ಲಿ ದೊರೆಯುವ ಇತರ ರೇಷ್ಮೆ ವಸ್ತ್ರಗಳಿಗಿಂತ ಮೈಸೂರ್ ಸಿಲ್ಕ್ ಪ್ರಾಕೃತಿಕ ರೇಷ್ಮೆ ಗೂಡಿನಿಂದ ಹೊರ ಹೊಮ್ಮಿದೆ. ಜಿಲ್ಲೆಯಲ್ಲಿ 1500 ಹೆಕ್ಟೇರ್ ನಲ್ಲಿ ಗುಣಮಟ್ಟದ ರೇಷ್ಮೆ ಬೆಳೆಯಲಾಗುತ್ತಿದೆ. ರಾಜ್ಯದಲ್ಲೇ ಅತ್ಯುತ್ತಮ ಗುಣಮಟ್ಟದ ರೇಷ್ಮೆ ಬೆಳೆದ ರೈತ ಪ್ರಥಮ ಪ್ರಶಸ್ತಿ ಜಿಲ್ಲೆಗೆ ಲಭ್ಯವಾಗಿದೆ. ನರೇಗಾ ಯೋಜನೆ ಒಗ್ಗೂಡಿಸಿಕೊಂಡು ರೇಷ್ಮೆ ಉಳುಮೆ ಪ್ರದೇಶ ಹೆಚ್ಚಿಸಲಾಗಿದೆ ಎಂದು ಹೇಳಿದರು.
 
ಮೈಸೂರ್ ಸಿಲ್ಕ್ ಸಂಸ್ಥೆಯ ಮಾರಾಟ ವ್ಯವಸ್ಥಾಪಕ ಭಾನುಪ್ರಕಾಶ್ ಮಾತನಾಡಿ ‘ಮೈಸೂರು ಸಿಲ್ಕ್ ಸೀರೆಗಳನ್ನು ರೇಷ್ಮೆಯಿಂದ ಮಾಡ ಲ್ಪಟ್ಟಿದೆ. ಮೈಸೂರ್ ಸಿಲ್ಕ್ ಸೀರೆಗಳ ಉತ್ಪಾದನೆಗೆ ಉಪಯೋಗಿಸುವುದು ಜರಿಯು ಪರಿಶುದ್ಧ ಚಿನ್ನವಾಗಿದೆ. ಶೇ 0.65 ಚಿನ್ನ ಮತ್ತು ಶೇ.65ರಷ್ಟು ಬೆಳ್ಳಿಯಿಂದ ತಯಾರಿಸಿದೆ ಎಂದರು.
 
‘ಪ್ರದರ್ಶನದಲ್ಲಿ ಕೇವಲ ಮಹಿಳೆಯರಿಗಷ್ಟೇ ಅಲ್ಲದೇ, ಪುರಷರಿಗಾಗಿಯೂ ಗುಣಮಟ್ಟದ ವಿವಿಧ ಬಣ್ಣಗಳಿಂದ ಕೂಡಿರುವ ಸಿಲ್ಕ್ ಅಂಗಿ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.