ADVERTISEMENT

‘ಸರ್ವಧರ್ಮ ಸಹಿಷ್ಣುವಾಗಿದ್ದ ಟಿಪ್ಪು’

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 6:04 IST
Last Updated 11 ನವೆಂಬರ್ 2017, 6:04 IST

ಹೊಸದುರ್ಗ: ‘ಟಿಪ್ಪು ಸುಲ್ತಾನ್ ಸರ್ವಧರ್ಮ ಸಹಿಷ್ಣುವಾಗಿ, ದೇಶಪ್ರೇಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ ಇತಿಹಾಸದ ಪುಟದಲ್ಲಿ ದಾಖಲಾಗಿದ್ದಾನೆ’ ಎಂದು ಮೂಳೂರಿನ ಯು.ಕೆ.ಮೌಲನಾ ಮುಸ್ತಫಾ ಸ.ಅದಿ ಹೇಳಿದರು. ಪಟ್ಟಣದ ವಿನಾಯಕ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಮಹಾತ್ಮರ ಬದುಕು ಹಾಗೂ ಸಂದೇಶವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ಟಿಪ್ಪು ಸುಲ್ತಾನ್‌ ಕುರಿತು ಅಪಪ್ರಚಾರ ಮಾಡುವಂತಹ ಷಡ್ಯಂತರ ನಡೆಯುತ್ತಿದೆ. ವಾಸ್ತವ
ದಲ್ಲಿ ವಿರೋಧಿಸುವವರು ಅವರ ಬಗೆಗಿನ ವಾಸ್ತವಿಕ ಸ್ಥಿತಿ ತಿಳಿದು ವಿರೋಧಿಸಬೇಕು.

ಟಿಪ್ಪುವಿನ ಆಡಳಿತದಲ್ಲಿ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಅನಂತ್ ಮಾತನಾಡಿ, ‘ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ದೇಶಭಕ್ತನಾದ ಟಿಪ್ಪುವನ್ನು ಕ್ರೂರಿ ಎನ್ನುವಂತೆ ಚಿತ್ರಿಸುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.

ADVERTISEMENT

ಶಾಸಕ ಬಿ.ಜಿ.ಗೋವಿಂದಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಕೆ.ವಿ.ಸ್ವಾಮಿ ಉದ್ಘಾಟಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶಾಂತಲಾ, ಜಿಲ್ಲಾ ಪಂಚಾಯ್ತಿ ಸದಸ್ಯೆ ವಿಜಯಲಕ್ಷ್ಮಿ, ಪುರಸಭೆ ಉಪಾಧ್ಯಕ್ಷೆ ಸವಿತಾ, ಸದಸ್ಯ ದಸ್ತಗಿರಿ ಸಾಬ್‌, ಷಾಯಿನಾ, ತಹಶೀಲ್ದಾರ್ ಮಲ್ಲಿಕಾರ್ಜುನ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಓರಗಲ್ಲಪ್ಪ, ಆಗ್ರೊ ಶಿವಣ್ಣ, ಮುಸ್ಲಿಂ ಸಮಾಜದ ಅಧ್ಯಕ್ಷ ಅಬ್ದಲ್‌ ಜಬ್ಬಾರ್‌, ಅಲ್ತಾಫ್‌ ಪಾಷಾ, ಸೈಫುಲ್ಲಾ, ಮಹಮ್ಮದ್‌ ಇಸ್ಮಾಯಿಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.