ADVERTISEMENT

ಸ್ವಂತ ಹಣದಲ್ಲಿ ಕೊಳವೆಬಾವಿ ಕೊರೆಸಿದ ಗ್ರಾ.ಪಂ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 8:46 IST
Last Updated 17 ಜುಲೈ 2017, 8:46 IST

ಶ್ರೀರಾಂಪುರ: ಸರ್ಕಾರದಿಂದ ಕೊರೆಸಿದ ಕೊಳವೆಬಾವಿಗಳಲ್ಲಿ ನೀರು ಸಿಗದ ಕಾರಣ ಬೇಸತ್ತ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಸ್ವಂತ ಖರ್ಚಿನಲ್ಲಿ ಕೊಳವೆಬಾವಿ ಕೊರೆಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಟ್ಟರು. ಹೆಗ್ಗೆರೆ ಗ್ರಾಮಪಂಚಾಯ್ತಿ ಅಧ್ಯಕ್ಷ ಕೆ.ರಂಗನಾಥ ಗ್ರಾಮದ ಕುಡಿಯುವ ನೀರಿನ ಸಲುವಾಗಿ  ಶನಿವಾರ ಕೊಳವೆಬಾವಿ ಕೊರೆಸಿದರು.

‘ಸರ್ಕಾರದಿಂದ ಗ್ರಾಮದಲ್ಲಿ ಒಂಬತ್ತು ಕೊಳವೆಬಾವಿಗಳನ್ನು ಕೊರೆಸಿದರೂ ನೀರು ಸಿಕ್ಕಿಲ್ಲ. ಇದರಿಂದ ಬೇಸತ್ತ ಯುವಕರು ಗ್ರಾಮದ ಮನೆಗಳಲ್ಲಿ ಚಂದಾ ಎತ್ತಿ ಕೊಳವೆಬಾವಿ ತೆಗೆಸಿದರು. ಆದರೆ, ಆಗಲೂ ನೀರು ಸಿಗಲಿಲ್ಲ. ಹೀಗಾಗಿ ಗ್ರಾಮಸ್ಥರು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದರು.ಇದೇವೇಳೆ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರೂ ಗ್ರಾಮದಲ್ಲಿ ಎರಡು ಕೊಳವೆಬಾವಿ ಕೊರಸಿದರು. ಆಗಲೂ ನೀರು ಸಿಕ್ಕಿರಲಿಲ್ಲ’ ಎಂದು ಗ್ರಾಮಸ್ಥರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT