ADVERTISEMENT

ನಾಯಕನಹಟ್ಟಿ: ಭಾವೈಕ್ಯದ ಗ್ಯಾರವಿ ಹಬ್ಬ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 6:58 IST
Last Updated 1 ಜನವರಿ 2018, 6:58 IST

ನಾಯಕನಹಟ್ಟಿ: ಸಮೀಪದ ರೇಖಲಗೆರೆಯಲ್ಲಿ ಮಹಬೂಬ್ ಸುಬಾನಿ ಸ್ಮರಣೆಯ ಗ್ಯಾರವಿ ಹಬ್ಬವನ್ನು ಮುಸ್ಲಿಮರು ಶನಿವಾರ ರಾತ್ರಿ ಸಂಭ್ರಮದಿಂದ ಆಚರಿಸಿದರು.

ಗ್ರಾಮದಲ್ಲಿ ಕೇವಲ ಎರಡೇ ಮುಸ್ಲಿಂ ಮನೆಗಳಿದ್ದರೂ ಪ್ರತಿವರ್ಷ ಗ್ರಾಮಸ್ಥರೆಲ್ಲರೂ ಸೇರಿ ಮುಸ್ಲಿಂ ಧರ್ಮದ ಸಂತ ಮಹಬೂಬ್ ಸುಬಾನಿಯವರ ಜನ್ಮದಿನವನ್ನು ಆಚರಿಸುವ ಮೂಲಕ ಭಾವೈಕ್ಯ ಮೆರೆಯುತ್ತಾರೆ. ಗ್ಯಾರವಿ ಹಬ್ಬಕ್ಕೆ ಬಳ್ಳಾರಿ, ತುಮಕೂರು, ದಾವಣಗೆರೆ, ನೆರೆಯ ಆಂಧ್ರಪ್ರದೇಶದ ಅನಂತಪುರ, ರಾಯದುರ್ಗ ಇತರೆಡೆಗಳಿಂದ ಸಾವಿರಾರು ಜನರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT