ADVERTISEMENT

‘ಇಚ್ಛಾಶಕ್ತಿಯಿದ್ದರೆ ಅಭಿವೃದ್ಧಿ ಸುಗಮ’

ಅರಂಬೂರಿನಲ್ಲಿ ₹ 4.90 ಕೋಟಿ ವೆಚ್ಚದ ಸೇತುವೆಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 10:02 IST
Last Updated 12 ಜನವರಿ 2017, 10:02 IST
ಸುಳ್ಯ: ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ₹ 4 ಕೋಟಿ 90 ಲಕ್ಷ ವೆಚ್ಚದಲ್ಲಿ ನಿರ್ಮಾ ಣವಾಗಲಿರುವ ನೂತನ ಸೇತುವೆ ಕಾಮಗಾರಿಗೆ ಚಾಲನೆ ದೊರೆತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾ ನಾಥ ರೈ ನೂತನ ಸೇತುವೆಗೆ ಮಂಗಳ ವಾರ ಶಂಕುಸ್ಥಾಪನೆ ನೆರವೇರಿಸಿದರು.
 
‘ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಬೇಕು. ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ ಗ್ರಾಮ, ತಾಲ್ಲೂಕಿನ ಅಭಿ ವೃದ್ಧಿ ಕೆಲಸಮಾಡುವ ಹಂಬಲ ಮತ್ತು ಜನರ ಮೇಲಿನ ಅಭಿಮಾನವಿದ್ದರೆ ಯಾವ ಕೆಲಸವನ್ನಾದರೂ ಮಾಡಲು ಸಾಧ್ಯ’ ಎಂದ ಅವರು ‘ಮಹಿಳಾ ಪ್ರತಿ ನಿಧಿಯಾಗಿ ದಿವ್ಯಪ್ರಭಾ ಚಿಲ್ತಡ್ಕ ಅವರು ಈ ಭಾಗದ ಜನತೆಗೆ ಬಹುಕಾಲದ ಬೇಡಿಕೆಯಾದ ಜನಮನಗಳ ಸಂಪರ್ಕದ ಕೊಂಡಿಯಾದ ಸೇತುವೆ ನಿರ್ಮಿಸಲು ಪ್ರಯತ್ನಿಸಿ ₹ 4.90 ಕೋಟಿ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸಮಯಕ್ಕೆ ಸರಿ ಯಾಗಿ ಜನರ ಅಪೇಕ್ಷೆಗೆ ಸರಿಯಾಗಿ ಕೆಲಸ ಮಾಡಬೇಕು. ಸಂಪರ್ಕ ಸೇತುವೆ ಈ ಭಾಗದ ಜನರಿಗೆ ವರದಾನ ಆಗಲಿದೆ. ಜನ ಹಿತ ಕಾರ್ಯಕ್ರಮಗಳ ಮೂಲಕ ನಾಡಿನಲ್ಲಿ ಸಾಮಾಜಿಕ ಸಾಮರಸ್ಯ ಇದ್ದರೆ ದೇಶದ ಅಭಿವೃದ್ಧಿ ಸಾಧ್ಯ’ ಎಂದರು.
 
‘ಅಡಿಕೆ, ರಬ್ಬರ್‌ಗೆ ಬೆಂಬಲ ಬೆಲೆ ನೀಡಲು ಕೇಂದ್ರ ಸರ್ಕಾರ ಇಲ್ಲಿಯವರೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಬೆಂಬಲ ಬೆಲೆ ನೀಡಬೇಕು. ಆದರೆ ಇಂದು ಕೇಂದ್ರದ ಅನುದಾನ ನಯಾ ಪೈಸೆ ಬಂದಿಲ್ಲ’ ಎಂದು ಸಚಿವರು ಹೇಳಿದರು.
 
ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅವರು ಮಾತನಾಡಿ, ‘ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಪೆಂಡಿಕ್ಸ್ ಇ ನಲ್ಲಿ ₹ 4.95 ಕೋಟಿ ಅನುದಾನವನ್ನು ಎಲ್ಲರ ಸಹಕಾರದಿಂದ ತರಿಸಲು ಕಾರಣವಾ ಯಿತು. ನನಗೆ ನಾನು ಅನುದಾನ ತರಿಸಿ ದ್ದೇನೆ ಎಂದು ಹೆಮ್ಮೆ ಇಲ್ಲ. ಇಂದು ವೃತ್ತಿ ಧರ್ಮದಲ್ಲಿ ತೃಪ್ತಿ ಕಂಡಿದ್ದೇನೆ. ಸುಳ್ಯ ತಾಲ್ಲೂಕಿನಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಮೂಲ ಸೌಲಭ್ಯಕ್ಕಾಗಿ ಪಕ್ಷಾ ತೀತವಾಗಿ ಶ್ರಮಿಸಿದಾಗ, ಗ್ರಾಮ ಅಭಿ ವೃದ್ಧಿ ಆದಾಗ ದೇಶ ಅಭಿವೃದ್ಧಿಯಾ ಗುತ್ತದೆ’ ಎಂದರು.
 
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ರಾಜೀವ ಗಾಂಧಿ ಆರೋಗ್ಯ ವಿ.ವಿ. ಸಿಂಡಿಕೇಟ್ ಸದಸ್ಯ ಡಾ.ರಘು, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸುಂದರ ನಾಯ್ಕ, ಸುಳ್ಯ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸಂಶುದ್ದೀನ್, ಎನ್.ಎ. ರಾಮಚಂದ್ರ, ಸೇತುವೆ ನಿರ್ಮಾಣ ಸಮಿ ತಿಯ ಅಧ್ಯಕ್ಷ ಉದಯಕುಮಾರ್, ಆಲೆಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ ಕುಂಚಡ್ಕ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ತೀರ್ಥರಾಮ ಜಾಲ್ಸೂರು, ಪದ್ಮಾವತಿ ಕುಡೆಕಲ್ಲು, ಅಶೋಕ ನೆಕ್ರಾಜೆ, ರಾಜ್ಯ ಕೆಫೆಕ್ ನಿರ್ದೇಶಕ ಪಿ.ಎ.ಮಹಮ್ಮದ್, ಮಾಜಿ ಮಂಡಲ ಉಪ ಪ್ರಧಾನ ಬಾಪೂ ಸಾಹೇಬ್, ತಹಶೀಲ್ದಾರ್ ಎಂ.ಎಂ. ಗಣೇಶ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಧು ಕುಮಾರ್, ಆಲೆಟ್ಟಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಂದರಿ, ಸದಸ್ಯರಾದ ಯೂಸುಫ್ ಅಂಜಿಕಾರ್, ಜಯಲತಾ ಅರಂಬೂರು, ಜಯಂತಿ ಕೂಟೇಲು, ಪುಷ್ಪಾವತಿ, ಕಾಂಗ್ರೆಸ್ ಮುಖಂಡ ಸತ್ಯ ಕುಮಾರ್ ಆಡಿಂಜ ಭಾಗವಹಿಸಿದರು.
 
ಅನುದಾನವನ್ನು ತರಿಸಲು ಕಾರಣ ಕರ್ತರಾದ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಾಪ್ರಭಾ ಗೌಡ ಚಿಲ್ತಡ್ಕ ಅವರನ್ನು ಗ್ರಾಮಸ್ಥರ ಪರವಾಗಿ ಅಭಿನಂದಿಸಲಾಯಿತು. ಲೋಕೋಪ ಯೋಗಿ ಇಲಾಖೆಯ ಸಹಾಯಕ ಎಂಜಿನಿ ಯರ್ ಸಣ್ಣೇಗೌಡ ಸ್ವಾಗತಿಸಿ, ಗ್ರಾಮ ಲೆಕ್ಕಿಗ ನರಿಯಪ್ಪ ವಂದಿಸಿದರು. ಕೆ.ಟಿ. ವಿಶ್ವನಾಥ ನಿರೂಪಿಸಿದರು.
 
***
ಸಂಪರ್ಕ ಸೇತುವೆ ಈ ಭಾಗದ ಜನರಿಗೆ ವರದಾನ ಆಗಲಿದೆ. ಜನ ಹಿತ ಕಾರ್ಯಕ್ರಮಗಳ ಮೂಲಕ ನಾಡಿನಲ್ಲಿ ಸಾಮಾಜಿಕ ಸಾಮರಸ್ಯ ಇದ್ದರೆ ದೇಶದ ಅಭಿವೃದ್ಧಿ ಸಾಧ್ಯ.
-ಬಿ.ರಮಾನಾಥ ರೈ
ಸಚಿವ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.