ADVERTISEMENT

ಕಡಲ ತೀರಕ್ಕೆ ಬಂದ ನೌಕೆಗಳು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 5:40 IST
Last Updated 21 ನವೆಂಬರ್ 2017, 5:40 IST

ಮಂಗಳೂರು: ಕರಾವಳಿಯ ಭದ್ರತೆ, ಸುರಕ್ಷತೆಯ ದೃಷ್ಟಿಯಿಂದ ‘ಸಾಗರ ಕವಚ’ ಅಣಕು ಕಾರ್ಯಾಚರಣೆ ಇದೇ 21 ಹಾಗೂ 22 ರಂದು ನಗರದ ಪಣಂಬೂರು ಬೀಚ್‌ನಲ್ಲಿ ನಡೆಯಲಿದೆ.

2008 ರಲ್ಲಿ ನಡೆದ ಮುಂಬೈ ಉಗ್ರರ ದಾಳಿಯ ನಂತರ ಕರಾವಳಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸಾಗರ ಕವಚ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಭಾರತೀಯ ನೌಕಾಪಡೆ, ಕರಾವಳಿ ಕಾವಲು ಪಡೆ, ರಾಜ್ಯ ಪೊಲೀಸ್, ಕರಾವಳಿ ಭದ್ರತಾ ಪೊಲೀಸರು, ಅಬಕಾರಿ ಮತ್ತು ಸುಂಕ ಇಲಾಖೆ, ಮೀನುಗಾರಿಕೆ, ನವ ಮಂಗಳೂರು ಬಂದರು ಪ್ರಾಧಿಕಾರ, ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಭಾಗವಹಿಸಲಿವೆ.

ಕರಾವಳಿಯಲ್ಲಿ ಭದ್ರತೆಯನ್ನು ಬಲಪಡಿಸಲು ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದ್ದು, ಇದಕ್ಕಾಗಿ ಸಾಗರ ಕವಚ ಕಾರ್ಯಾಚರಣೆ ನಡೆಸ ಲಾ ಗುತ್ತಿದೆ. ಕರ್ನಾಟಕದ ಕರಾವಳಿ ಯುದ್ದಕ್ಕೂ ಭದ್ರತೆ ಕಾಪಾಡುವುದು ಹಾಗೂ ಮೀನುಗಾರರ ಸುರಕ್ಷೆಯೇ ಈ ಕಾರ್ಯಾಚರಣೆಯ ಉದ್ದೇಶವಾಗಿದೆ.

ADVERTISEMENT

ರಾಜ್ಯ ಸರ್ಕಾರ ಈ ಕಾರ್ಯಾಚರಣೆ ಉಸ್ತುವಾರಿ ನಡೆಸಲಿದ್ದು, ಕರಾವಳಿ ಕಾವಲು ಪಡೆಯ ಪಣಂಬೂರಿನ ಕೇಂದ್ರ ಕಚೇರಿ ಸಹಯೋಗ ನೀಡಲಿದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದ್ದು, ದೇಶ ದ್ರೋಹಿ ಚಟುವಟಿಕೆಗಳು, ಸಾಗರದಲ್ಲಿ ಅನಾಹುತಗಳು ಕಂಡು ಬಂದಲ್ಲಿ, ಪೊಲೀಸ್‌ ಕಂಟ್ರೋಲ್‌ ರೂಮ್‌ 100 ಅಥವಾ ಕರಾವಳಿ ಕಾವಲು ಪಡೆ (ದೂ.ಸಂ. 1554 ಮತ್ತು 0824-2405278) ಕಚೇರಿಯನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.