ADVERTISEMENT

‘ಕಾವ್ಯಕ್ಕೆ ಹೊಸದಿಕ್ಕು ತೋರಿದ ಕವಿ ಅಡಿಗ’

ಎಚ್. ಗೋಪಾಲಕೃಷ್ಣ ಅಡಿಗ ಬದುಕು–ಬರಹ ಕುರಿತ ವಿಚಾರಸಂಕಿರಣ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:27 IST
Last Updated 9 ಜನವರಿ 2017, 9:27 IST
ಕಾರ್ಕಳ: ಮೊಗೇರಿ ಗೋಪಾಲಕೃಷ್ಣ ಅಡಿಗ ಹೊಸಗನ್ನಡ ಕಾವ್ಯಕ್ಕೆ ಹೊಸದಿಕ್ಕು ತೋರಿ ಸತ್ವ ಮೆರೆದ ಕವಿ ಎಂದು ಕಾರ್ಕಳ ಸಾಹಿತ್ಯ ಸಂಘದ ಕಾರ್ಯಾಧ್ಯಕ್ಷ ಪ್ರೊ.ಎಂ.ರಾಮಚಂದ್ರ ತಿಳಿಸಿದರು. 
 
ತಾಲ್ಲೂಕಿನ ನಿಟ್ಟೆ ಡಾ.ಎನ್.ಎಸ್. ಎ.ಎಂ ಪದವಿಪೂರ್ವ ಕಾಲೇಜು ಹಾಗೂ ಬೆಂಗಳೂರು ಕನಾಟಕ ಸಾಹಿತ್ಯ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ನಿಟ್ಟೆ ವಿದ್ಯಾಸಂಸ್ಥೆಯ ಸಂಭ್ರಮ ಸಭಾಂಗಣ ದಲ್ಲಿ ಶನಿವಾರ ಮೊಗೇರಿ ಗೋಪಾಲಕೃಷ್ಣ ಅಡಿಗ ಬದುಕು-ಬರಹ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
 
ಹೊಸಗನ್ನಡ ಕಾವ್ಯದ ಕವಿ ರತ್ನತ್ರಯ ರೆನಿಸಿದ ಬೇಂದ್ರೆ, ಕುವೆಂಪು, ಪು.ತಿ.ನ ಅವರ ಸಾಲಿಗೆ ಎಂ.ಗೋಪಾಲಕೃಷ್ಣ ಅಡಿಗ ಅವರನ್ನು ಖಂಡಿತವಾಗಿ ಸೇರಿಸ ಬೇಕಾಗಿದೆ. ಇದರಿಂದ ಎಂ.ಗೋಪಾಲ ಅಡಿಗ ಹೊಸಗನ್ನಡ ಕವಿರತ್ನ ಚತುಷ್ಟ ಯರಲ್ಲಿ ಒಬ್ಬರೆನಿಸುತ್ತಾರೆ. ಅವರೊಬ್ಬ ವರ್ಚಸ್ವಿ ಕವಿ. ಲೇಖಕ ಲಂಕೇಶರ ಮಾತಿನಲ್ಲಿ ಹೇಳುವುದಾದರೆ ‘ಅಡಿಗರು ಜನಾಂಗದ ಕಣ್ಣು ತೆರೆಸಿದ ಕವಿ’ ಎಂಬುದು ಸತ್ಯದ ವಿಚಾರ. ಕಾವ್ಯವು ಸಮಕಾಲೀನ ತುಡಿತ ಎಂಬುದನ್ನು ಅರಿತು ಹೆಜ್ಜೆ ಇಟ್ಟವರು ಅಡಿಗರು. ಅವರು ಆತ್ಮಾಭಿಮಾನಿ, ಸ್ವಾಭಿಮಾನಿ ಯಾಗಿದ್ದರು. ಯಾರನ್ನೂ ಎದುರಿಸಬಲ್ಲ ಎದೆಗಾರಿಕೆ, ಛಾತಿ ಅವರಲ್ಲಿತ್ತು. ಚುನಾ ವಣೆಗೆ ನಿಂತು ಸೋತ ಅಡಿಗರು ಕವಿಯಾಗಿ ಜನಮನದಲ್ಲಿ ಉಳಿದರು ಎಂದರು.
 
‘ಅಡಿಗರ ಬದುಕು ಬರಹ ಕುರಿತು ವಿಶೇಷ ಉಪನ್ಯಾಸ ನೀಡಿದ ಕುಂದಾ ಪುರ ಭಂಡಾರ್‌ಕಾರ್ಸ್ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಎಸ್.ಆರ್. ಅರುಣ್ ಕುಮಾರ್, ಅಡಿಗರು ಸ್ಫೂರ್ತಿ ಯ ಕೇಂದ್ರವಾಗಿದ್ದರು. ಕಾವ್ಯದೊಳಗೆ ವಿಮರ್ಶೆಯನ್ನು ತಂದರು. ಕಾವ್ಯವೆನ್ನುವುದು ಕೇವಲ ಕಥನವಲ್ಲ. ವಿಮರ್ಶೆ, ಅದು ಮನಸ್ಸಿನ ವಿಮರ್ಶೆ. ಕಾವ್ಯವೇ ಅಡಿಗರ ಜೀವನವಾಗಿತ್ತು. ಅದೇ ಅವರ ಬದುಕು ಬರಹ. ಇಡೀ ದೇಶ ಬದಲಾಗುತ್ತಿದ್ದ ಹಾಗೇ ಅಡಿಗರ ಬರಹವೂ ಬದಲಾಗುತ್ತಿದ್ದವು ಎಂದರು. 
ನಿಟ್ಟೆ ಎನ್.ಎಂ.ಎ.ಎಂ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಚಿಪಳೂಣ್‌ಕರ್ ಅಧ್ಯಕ್ಷತೆ ವಹಿಸಿ, ಸಾಹಿತ್ಯವನ್ನು ಪಾಠಕ್ಕೆ ಸೀಮಿತವಾಗಿ ಓದಕೂಡದು. ಬದುಕಿಗಾಗಿ ಓದಬೇಕು ಎಂದರು. 
 
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಶುಭಹಾರೈಸಿದರು. ಅಕಾಡೆಮಿ ಸದಸ್ಯ ಮೇಟಿ ಮುದಿಯಪ್ಪ ಆಶಯ ನುಡಿಗಳನ್ನಾಡಿ ಅಕಾಡೆಮಿಯ ಯೋಜನೆಗಳ ಮಾಹಿತಿ ನೀಡಿದರು. 
 
ನಿಟ್ಟೆ ಡಾ.ಎನ್.ಎಸ್.ಎ.ಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಇಂದಿರಾ ಕೆ ಸ್ವಾಗತಿಸಿದರು. ಕನ್ನಡ ಉಪ ನ್ಯಾಸಕ, ಕಾರ್ಯಕ್ರಮ ಸಂಯೋಜಕ ವಾಸುದೇವ ಭಟ್ ವಂದಿಸಿದರು. ಉಪ ನ್ಯಾಸಕ ಡಾ.ಪ್ರಕಾಶ ಶೆಣೈ ನಿರೂಪಿಸಿ ದರು. ಸಭಾಕಾರ್ಯಕ್ರಮದ ನಂತರ ಉಮೇಶ್ ಗೌತಮ ನಾಯಕ್ ಹಾಗೂ ನಿನಾದ ಯು ನಾಯಕ್ ಅವರಿಂದ ಗೋಪಾಲಕೃಷ್ಣ ಅಡಿಗರ ಕಾವ್ಯ ಗಾಯಕ ನೆರೆದವರನ್ನು ರಂಜಿಸಿತು.
 
***
ಮಣ್ಣು, ಹೊನ್ನು ಹಾಗೂ ಹೆಣ್ಣನ್ನು ಕುರಿತ ಆಂತರಿಕ ಸಂಬಂಧ ತಮ್ಮ ಕವನಗಳ ಮೂಲಕ ಅಡಿಗರು ಸಾದರ ಪಡಿಸಿದರು. ಕನ್ನಡಕ್ಕೆ ಹೊಸ ಚಿಂತನಾಕ್ರಮ ನೀಡಿದವರು ಅಡಿಗರು. 
-ಡಾ.ಎಸ್.ಆರ್. ಅರುಣ್ ಕುಮಾರ್
ಕನ್ನಡ ಉಪನ್ಯಾಸಕ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.