ADVERTISEMENT

ಕುಂಬಳೆಯ ಶಂಕರನಾರಾಯಣ ದೇವಸ್ಥಾನದಿಂದ ಕಳ್ಳತನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 7:31 IST
Last Updated 10 ಜುಲೈ 2017, 7:31 IST

ಕಾಸರಗೋಡು: ಕುಂಬಳೆ ಬಳಿಯ ಶೀರೆ ಶಂಕರನಾರಾಯಣ ದೇವಸ್ಥಾನಕ್ಕೆ ಕಳ್ಳರು ನುಗ್ಗಿ, ಸುಮಾರು ₹7ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದಾರೆ.

ದೇವಾಲಯದ ಹಿಂಬದಿಯ ಕಬ್ಬಿಣದ ಬೇಲಿ ಮುರಿದ ಕಳ್ಳರು, ದೇವಾಲಯದ ಬೀಗವನ್ನು ಒಡೆದು ಒಳನುಗ್ಗಿದ್ದಾರೆ. ಗರ್ಭಗುಡಿಯಿಂದ ದೇವರ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ಕವಚ, ಶಿವ ಲಿಂಗದ ಚಿನ್ನದ ಭಾಗ ಗಳು, ನಾಗ ರೂಪಗಳನ್ನು ಇರಿಸಲಾಗಿದ್ದ ಬೆಳ್ಳಿಯ ಪೀಠ ಮುಂತಾದವುಗ ಳನ್ನು ಕದ್ದಿದ್ದಾರೆ. ಸುಮಾರು ಎಂಟೂ ವರೆ ಕೆಜಿ ತೂಕದ ಚಿನ್ನಾಭರಣ ಕಳವಾ ಗಿದೆ. ಅಲ್ಲದೆ ಮೂರು ಕಾಣಿಕೆ ಡಬ್ಬಿಗ ಳನ್ನು ಒಡೆದು ಹಣ ಕೊಂಡೊಯ್ದಿದ್ದಾರೆ.

ಭಾನುವಾರ ಬೆಳಿಗ್ಗೆ 5.45 ಕ್ಕೆ ಅರ್ಚಕರಾದ ನವೀನ ಭಟ್ ಹಾಗೂ ಸಹಾಯಕರಾದ ಅಶೋಕ್, ದೇವಾಲಯಕ್ಕೆ ಬಂದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿತ್ತು. ಶನಿವಾರ ರಾತ್ರಿ ಪೂಜೆ ನಡೆಸಿ, ದೇವಾಲಯಕ್ಕೆ ಬೀಗ ಹಾಕಲಾಗಿತ್ತು. 

ADVERTISEMENT

ದೇವಾಲಯದ ಟ್ರಸ್ಟಿ ವಕೀಲ ಬಾಲಕೃಷ್ಣ ಶೆಟ್ಟಿಯವರು ಈ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳವನ್ನೂ ಕರೆಸ ಲಾಗಿದೆ. ಕುಂಬಳೆ ಸಬ್ ಇನ್‌ಸ್ಪೆಕ್ಟರ್ ಜೆ.ಕೆ. ಜಯಶಂಕರ್ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.

ತಿಂಗಳ ಹಿಂದೆ ಕುಂಬಳೆ ಗೋಪಾ ಲಕೃಷ್ಣ ದೇವಸ್ಥಾನದಲ್ಲೂ ಕಳ್ಳತನ ಯತ್ನ ನಡೆದಿತ್ತು. ಆದರೆ ಅಂದು ದೇವಾಲಯದ ಮೇಲೆ ಕಳ್ಳ ನಿಂತಿರು ವುದು ಕಾವಲುಗಾರನ ಗಮನಕ್ಕೆ ಬಂದಿತ್ತು. ಊರವರು ಆತನನ್ನು ಹಿಡಿಯಲು ಪ್ರಯತ್ನಿಸಿದರೂ ತಪ್ಪಿಸಿ ಕೊಂಡಿದ್ದ. ಆರೋಪಿಯನ್ನು ಈ ತನಕ ಪೊಲೀಸರಿಗೆ ಪತ್ತೆ ಹಚ್ಚಲು ಸಾಧ್ಯವಾ ಗಲಿಲ್ಲ. ಇದೀಗ ಕುಂಬಳೆ ದೇವಾಲ ಯದ ಪಕ್ಕದಲ್ಲೇ ಇರುವ ಶಂಕರನಾ ರಾಯಣ ದೇವಸ್ಥಾನಕ್ಕೂ ಕಳ್ಳರು ನುಗ್ಗಿದ್ದಾರೆ.

***

ಬಕೆಟ್‌ನಲ್ಲಿ ಅಡಗಿಸಿಟ್ಟ ಚಿನ್ನ ಕಳ್ಳರ ಪಾಲು
ಕಾಸರಗೋಡು:
ಕಳ್ಳರು ಮನೆಗೆ ನುಗ್ಗಿ ಕಳ್ಳತನ ನಡೆಸಿದರೆ ಚಿನ್ನಾಭರಣ ಸಿಗಬಾರದೆಂದು, ಮನೆಯ ಬಕೆಟ್ ನಲ್ಲಿ ಬಚ್ಚಿಟ್ಟಿದ್ದ ಚಿನ್ನಾಭರಣವನ್ನು  ಕಳ್ಳರು ಹಾಡಹಗಲೇ ಮನೆಗೆ ನುಗ್ಗಿ ಕದ್ದೊ ಯ್ದಿದ್ದಾರೆ.

ಮುಳಿಯಾರು ಇರಿಯಣ್ಣಿಯಲ್ಲಿ ದಿನಸು ವ್ಯಾಪಾರಿ ಕೃಷ್ಣನ್ ಎಂಬವರ ಪೇರಡ್ಕದಲ್ಲಿರುವ ಮನೆಯಿಂದ ₹2.5 ಲಕ್ಷ ಮೌಲ್ಯದ 10 ಪವನ್ ಚಿನ್ನಾಭರಣವನ್ನು ಕದ್ದೊಯ್ಯಲಾಗಿದೆ. ಮನೆಗೆ ನುಗ್ಗಿ ಕಪಾಟು ಒಡೆದು ಚಿನ್ನಾ ಭರಣ ಕೊಂಡೊಯ್ಯುವುದು ಸರ್ವೇ ಸಾಮಾನ್ಯವಾದುದರಿಂದ, ಕಳ್ಳರ ಕಣ್ಣಿಗೆ ಬೀಳದಂತೆ ಕೃಷ್ಣ ರ ಪತ್ನಿ ಎಂ. ಸುಶೀಲಾ ಅವರು, ತಮ್ಮ ಚಿನ್ನವನ್ನು ತೊಳೆಯುವ ಬಟ್ಟೆಗಳನ್ನು ಹಾಕುತ್ತಿ ರುವ ಬಕೆಟ್‌ನಲ್ಲಿ ಬಟ್ಟೆಗಳ ಎಡೆಯಲ್ಲಿ ಇಟ್ಟಿದ್ದರು. 

ಕೃಷ್ಣನ್ ಮತ್ತು ಸುಶೀಲಾ ಕೆಲಸಕ್ಕೆ ತೆರಳಿದ್ದರು. ಒಬ್ಬಳೇ ಮಗಳು ರಾಜ ಜ್ಯೋತಿ, ಶಾಲೆಯಿಂದ ಬಂದು ಮನೆಯನ್ನು ತೆರೆಯಲು ಅನುಕೂಲವಾ ಗುವಂತೆ ಮನೆಯ ಬೀಗದ ಕೈಯನ್ನು ಜಗಲಿಯ ಹಳೆಯ ಚೀಲದಲ್ಲಿ ಬಚ್ಚಿಟ್ಟಿ ದ್ದರು.  ಮನೆಗೆ ಬಂದ ಕಳ್ಳರು ಚೀಲ ದಿಂದ ಬೀಗದ ಕೈಯನ್ನು ತೆಗೆದು, ಬಕೆಟಿನ ಲ್ಲಿಟ್ಟಿದ್ದ ಚಿನ್ನವನ್ನು ಅಪಹರಿ ಸಿದ್ದಾರೆ. 
ನಾಲ್ಕೂವರೆ ಪವನ್‌ನ ಒಂದು ಸರ, ಎರಡೂವರೆ ಪವನ್‌ನ ಇನ್ನೊಂದು ಸರ, ಉಂಗುರ ಹಾಗೂ ಕಿವಿಯೋಲೆಗಳನ್ನೂ ಕದ್ದೊಯ್ಯಲಾಗಿದೆ.ಆದೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸು ತ್ತಿದ್ದಾರೆ. 

ಹಾಡಹಗಲೇ  ಚಿನ್ನಾಭರಣ ಕಳವು
ಕಾಸರಗೋಡು:
ಮನೆಗೆ ನುಗ್ಗಿ ಹಾಡಹಗಲೇ ಕಳ್ಳರು 12 ಪವನ್ ಚಿನ್ನಾಭರಣ ಕದ್ದೊಯ್ದಿದ್ದಾರೆ.

ಉಪ್ಪಳ ಬೇಕೂರು ಶಾಲೆಯ ಬಳಿಯ ಆಟೋ ಚಾಲಕ ಗೋಪಾಲ ಆಚಾರಿಯವರ ಮನೆಯಲ್ಲಿ ಶನಿವಾರ ಕಳ್ಳತನವಾಗಿದೆ. ಕಪಾಟಿನಲ್ಲಿದ್ದ ಎರಡು ಸರ, ನೆಕ್ಲೆಸ್, ಎರಡು  ಕಿವಿಯೋಲೆ, ಮೂರು ಉಂಗುರಗಳು ಕಳ್ಳತನ ವಾಗಿವೆ. ಗೋಪಾಲ ಆಚಾರಿ ಕೆಲಸಕ್ಕೂ, ಪತ್ನಿ ಶಾಲೆಯಲ್ಲಿ ನಡೆಯುವ ಸಭೆಗೂ, ಮಕ್ಕಳು ಸಂಬಂಧಿಕರ ಮನೆ ಗೂ ಹೋದ ಸಮಯದಲ್ಲಿ  ಕಳ್ಳತನವಾಗಿದೆ. ಮನೆ ಮಂದಿ ರಾತ್ರಿಯ ಹೊತ್ತು ಮರಳಿ ಬಂದಾಗ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ.  ಗೋಪಾಲ ಆಚಾರಿ ಯವರ ದೂರಿನ ಮೇರೆಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.