ADVERTISEMENT

ಕೆಪಿಎಂಇ ಕಾಯ್ದೆಯಿಂದ ಜನರಿಗೆ ಸಂಕಟ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 5:13 IST
Last Updated 18 ನವೆಂಬರ್ 2017, 5:13 IST

ಮಂಗಳೂರು: ರಾಜ್ಯ ಸರ್ಕಾರದ ಕೆಪಿಎಂಇ (ಕರ್ನಾಟಕ ಪ್ರೈವೇಟ್‌ ಮೆಡಿಕಲ್‌ ಎಸ್ಟಾಬ್ಲಿಷ್‌ಮೆಂಟ್‌) ಕಾಯ್ದೆಯು ಜನ ಸಾಮಾನ್ಯರ ಜೀವನದಲ್ಲಿ ಚೆಲ್ಲಾಟ ಆಡುತ್ತದೆ. ಸರ್ಕಾರದ ವೈಫಲ್ಯದಿಂದ ಉಂಟಾದ ಗೊಂದಲವೇ ಇದಕ್ಕೆ ಕಾರಣ ಎಂದು ಬಿಜೆಪಿ ಮುಖಂಡ ಕೃಷ್ಣ ಜೆ ಪಾಲೇಮಾರ್‌ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರ ತಮ್ಮ ಪ್ರತಿಷ್ಠೆಗೆ ಬೇಕಾಗಿ ಈ ಕಾಯ್ದೆಯನ್ನು ಜಾರಿಗೊಳಿಸಿದೆ. ಈಗಾಗಲೇ ರಾಜ್ಯ ದಲ್ಲಿ ಈ ಕಾಯ್ದೆಯ ವಿರುದ್ಧ ವೈದ್ಯರು ಮುಷ್ಕರ ನಡೆಸಿದ್ದು, 42 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇದಕ್ಕೆಲ್ಲಾ ಯಾರು ಹೊಣೆ? ಸರ್ಕಾರವು ಮೃತಪಟ್ಟ ವರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ನಂತೆ ಪರಿಹಾರ ಒದಗಿಸಬೇಕು’ ಎಂದು ಹೇಳಿದರು. ಬಿಜೆಪಿ ನಾಯಕರಾದ ರವಿಶಂಕರ ಮಿಜಾರು, ಸಂಜಯ ಪ್ರಭು, ಶಂಕರ್‌ ಭಟ್‌ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.